ಪಹಲ್ಗಾಮ್‌ ದಾಳಿಕೋರರಿಗೆ ಕಠಿಣ ಶಿಕ್ಷೆಯಾಗಲಿ: ಬಿಜೆಪಿ ಆಗ್ರಹ

| Published : Apr 25 2025, 11:49 PM IST

ಸಾರಾಂಶ

ಜಾತಿ, ಭಾಷೆ ಬದಿಗಿಟ್ಟು ಒಗ್ಗೂಡಿ ಎಲ್ಲ ಹಿಂದೂಗಳು ಸಂಘಟಿತರಾಗಬೇಕಿದೆ. ಧರ್ಮಕ್ಕೆ ಧಕ್ಕೆ ಬಂದಾಗ ಎದೆಗೊಟ್ಟು ನಿಂತು ಹೋರಾಟಕ್ಕೆ ಸಜ್ಜಾಗಬೇಕು ಎಂದು ಚಿಂತಕ ಅಮೋಘ ಹಿರೇಮಠ ತಿಳಿಸಿದರು.

ಸವಣೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಕೃತ್ಯ ಅಮಾನವೀಯವಾಗಿದ್ದು, ದಾಳಿಕೋರರಿಗೆ ಕನಸಿನಲ್ಲೂ ಉಹಿಸದ ಶಿಕ್ಷೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೆ ನೀಡಲಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಗಂಗಾಧರ ಬಾಣದ ತಿಳಿಸಿದರು.ಪಟ್ಟಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅಂಗವಾಗಿ ಜರುಗಿದ ಪಂಜಿನ ಮೆರವಣಿಗೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಭಾರತೀಯರು ಸೌಹಾರ್ದ ಪ್ರಿಯರು. ಅಂತಹ ದೇಶದ ಮೇಲೆ ಪಾಕಿಗಳು ನುಸುಳುಕೋರರಂತೆ ಆಗಮಿಸಿ ಧರ್ಮವನ್ನು ಕೇಳುವ ಮೂಲಕ ಭಾರತೀಯ ಹಿಂದೂಗಳ ಮೇಲೆ ಗುಂಡಿನ ದಾಳಿಯನ್ನು ಮಾಡಿರುವುದು ಸಿಂಹವನ್ನು ಕೆರಳಿದಂತೆ ಮಾಡಿದೆ. ಇದಕ್ಕೆ ತಕ್ಕ ಉತ್ತರವನ್ನು ನೀಡಲು ಭಾರತೀಯ ಸೇನೆಯ ಜತೆಗೆ ಪ್ರತಿ ಭಾರತೀಯರು ಸನ್ನದ್ಧರಾಗಿದ್ದಾರೆ ಎಂದರು. ಸನಾತನ ಚಿಂತಕ ಅಮೋಘ ಹಿರೇಮಠ ಮಾತನಾಡಿ, ಜಾತಿ, ಭಾಷೆ ಬದಿಗಿಟ್ಟು ಒಗ್ಗೂಡಿ ಎಲ್ಲ ಹಿಂದೂಗಳು ಸಂಘಟಿತರಾಗಬೇಕಿದೆ. ಧರ್ಮಕ್ಕೆ ಧಕ್ಕೆ ಬಂದಾಗ ಎದೆಗೊಟ್ಟು ನಿಂತು ಹೋರಾಟಕ್ಕೆ ಸಜ್ಜಾಗಬೇಕು ಎಂದರು.ಪಂಜಿನ ಮೆರವಣಿಗೆ ಪಟ್ಟಣದ ವಡ್ಡರ ಓಣಿಯ ಭೀಮಾಂಬಿಕಾ ಕಟ್ಟೆಯಿಂದ ಪ್ರಾರಂಭಗೊಂಡು ಬುಧವಾರಪೇಟೆ, ಕೋರಿಪೇಟೆ, ಸುಣಗಾರ ಓಣಿ, ಭರಮಲಿಂಗೇಶ್ವರ ವೃತ್ತ, ಮುಖ್ಯ ಮಾರುಕಟ್ಟೆ, ಎಸ್‌ಬಿಐ ವೃತ್ತ, ಪೊಲೀಸ್ ಠಾಣೆ ವೃತ್ತದ ಮೂಲಕ ಹಾಯ್ದು ಸಿಂಪಿಗಲ್ಲಿ ಗಣೇಶ ದೇವಸ್ಥಾನಕ್ಕೆ ಆಗಮಿಸಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಪದಾಧಿಕಾರಿಗಳಾದ ಶಿವಕುಮಾರ ಚನ್ನಾಪುರಮಠ, ಪ್ರವೀಣ ಬಾಲೆಹೊಸೂರ, ಸಚಿನ ಕಲಾಲ, ಅರುಣ ಮೆಕ್ಕಿ, ಬಸವರಾಜ ಶಿರೂರ, ಫಕ್ಕಿರೇಶ ಬೋವಿ, ಶಿವು ಹಣಗಿ, ಮಲ್ಲಿಕಾರ್ಜುನ ಹೊಸೂರ, ಮಹಾಂತೇಶ ಮಾನೆಗಾರ, ವಿನಾಯಕ ಕುಲಕರ್ಣಿ, ವಿನಯ ಬುಶೆಟ್ಟಿ, ವಿನಾಯಕ ಕೊಳೂರ, ಪ್ರವೀಣ ರಾಗಿ, ಸಂತೋಷ ಕೆಂಚನಗೌಡ್ರ, ದುರ್ಗಪ್ಪ ಕಡೆಮನಿ, ವೆಂಕಟೇಶ ಬೋವಿ, ಶಂಭು ಬೋವಿ, ಶ್ರೀಶೈಲ್ ತೆಗ್ಗಿಹಳ್ಳಿ, ಅನೂಪ ಗಾಣಗೇರ, ಪ್ರದೀಪ ತೆಂಬದಮನಿ, ದೀಪಕ ಅಚಲಕರ, ದೇವು ಭಜಂತ್ರಿ, ಮಹಾಂತೇಶ ಗಡಗದಲಿ, ರವಿ ಗಡಗದಲಿ, ದಯಾನಂದ ಗುಡಿಸಾಗರ, ಸಂತೋಷ ಆಲೂರ, ಶ್ರೀನಿವಾಸ ಗಿತ್ತೆ, ಪುರಸಭೆ ಸದಸ್ಯರಾದ ಮಹದೇವ ಮಹೇಂದ್ರಕರ, ಮಹೇಶ ಮುದಗಲ್, ದುರ್ಗಪ್ಪ ಗಡೇದ, ವಿದ್ಯಾಧರ ಕುತನಿ, ಬಸವರಾಜ ಚಳ್ಳಾಳ, ಪ್ರಕಾಶ ಜಮಾದರ, ಸತೀಶ ಬಿಕ್ಕಣ್ಣವರ, ಮಹದೇವಪ್ಪ ಬಿಕ್ಕಣ್ಣವರ ಸೇರಿದಂತೆ ಸಾರ್ವಜನಿಕರು ಇದ್ದರು.ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ರಾಣಿಬೆನ್ನೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಮಯದಲ್ಲಿ ನಗರ ಘಟಕದ ಅಧ್ಯಕ್ಷ ರಮೇಶ ಮಾಕನೂರ ಮಾತನಾಡಿ, ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ ಅಮಾಯಕರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಅತ್ಯಂತ ಹೇಯ ಕೃತ್ಯವಾಗಿದೆ. ಇಡೀ ದೇಶ ಈ ಸಾವಿಗೆ ಕಂಬನಿ ಮಿಡಿಯುತ್ತಿದೆ. ಕೇಂದ್ರ ಸರ್ಕಾರ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಬೇಕು ಹಾಗೂ ಭಯೋತ್ಪಾದಕರನ್ನು ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಿದ್ದಣ್ಣ ಗುಡಿಮುಂದ್ಲರ, ಶಿವನಗೌಡ ಕಡೂರ, ಸೋಮರೆಡ್ಡಿ ಹಾದಿಮನಿ, ರೇವಣಪ್ಪ ಗೌಡಶಿವಣ್ಣನವರ, ನಿವೃತ್ತ ಯೋಧ ಇಬ್ರಾಹಿಂ ಎಲಗಚ್ಚ, ಸಿದ್ದು ಪಟ್ಟಣಶೆಟ್ಟಿ, ಕಸ್ತೂರಿ ಅರ್ಕಸಾಲಿ, ಉಷಾ ಜಡಮಲಿ, ಗಂಗೂ ಇಚ್ಚಂಗಿ, ದೀಪಾ ದಳವಾಯಿ ಇದ್ದರು.