ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ ವ್ಯಂಗ್ಯ

| Published : Apr 23 2024, 12:46 AM IST

ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಖಾತೆಗೆ ಹಣವೂ ಹಾಕದೆ ಉದ್ಯೋಗವೂ ನೀಡದ ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಡೂರು ಎಪಿಎಂಸಿ ಮೈದಾನದಲ್ಲಿ ಹಾಸನ ಲೋಕಸಭಾ ಕಾಂಗ್ರೆಸ್ ಶ್ರೇಯಸ್ ಪಟೇಲ್ ಪರ ಮತ ಯಾಚನೆ

ಕನ್ನಡಪ್ರಭ ವಾರ್ತೆ, ಕಡೂರು

ಜನರ ಖಾತೆಗೆ ಹಣವೂ ಹಾಕದೆ ಉದ್ಯೋಗವೂ ನೀಡದ ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಡೂರಿನ ಎಪಿಎಂಸಿ ಮೈದಾನದಲ್ಲಿ ನಡೆದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಶ್ರೇಯಸ್ ಪಟೇಲ್ ಪರ ಮತ ಯಾಚನೆ ಸಭೆಯಲ್ಲಿ ಮಾತನಾಡಿದರು. ಕಳೆದ 2023- 24 ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ 123 ತಾಲೂಕು ಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. 2023 ಸೆಪ್ಟೆಂಬರ್ ನಲ್ಲಿ ರಾಜ್ಯದ ಬರದ ಸ್ಥಿತಿ ಕುರಿತು ಕೇಂದ್ರಕ್ಕೆ ಮನವಿ ನೀಡಿದರೂ ಕೇಂದ್ರದ ಬಿಜೆಪಿ ಸರ್ಕಾರ 2 ರು. ಕೂಡ ಬಿಡುಗಡೆ ಮಾಡಲಿಲ್ಲ. ಈ ಕುರಿತು ನಾವು ಸುಪ್ರೀಂ ಕೋರ್ಟಿಗೆ ಹೋಗಿದ್ದು ನ್ಯಾಯಾಲಯ ಶೀಘ್ರವೇ ಈ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದೆ ಎಂದರು.

ಕಳೆದ ಡಿಸೆಂಬರ್ 19 ರಂದು ಪ್ರಧಾನಿ ಮೋದಿ ಅವರನ್ನು ಶಾಸಕರೊಂದಿಗೆ ಭೇಟಿ ನೀಡಿ ಸಮಸ್ಯೆ ವಿವರಿಸಿದರೂ ಸಮಸ್ಯೆ ಬಗೆಹರಿಸಿಲ್ಲ. ಈ ಕುರಿತು ನಿರ್ಮಲಾ ಸೀತಾರಾಮನ್ ಆಗಲಿ ಅಮಿತ್ ಶಾ ಆಗಲಿ ಇದುವರೆಗೂ ಸಭೆ ನಡೆಸಿಲ್ಲ ಇದು ಕನ್ನಡಿಗರಿಗೆ ಮಾಡಿದ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.

2023 -24 ರಲ್ಲಿ ಕರ್ನಾಟಕದಿಂದ 4,23, 3000 ಕೋಟಿ ರು. ತೆರಿಗೆ ನೀಡಲಾಗಿದೆ. ನಮಗೆ ವಾಪಸ್ ಬಂದಿದ್ದು ಕೇವಲ 50,000 ಕೋಟಿ ಮಾತ್ರ. ಹಾಗಾಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಘೋಷಣೆಯಂತೆ ಎಂಎಲ್ಎಗಳು, ಸಂಸದ ರೊಂದಿಗೆ ದೆಹಲಿಯಲ್ಲಿ ಪ್ರತಿಭಟಿಸಿದರು. ಜೊತೆಗೆ, ಕೇಂದ್ರದ ಬರಗಾಲ ಅಧ್ಯಯನ ತಂಡ ವರದಿ ನೋಡಿಯೂ ಪರಿಹಾರ ಕೊಡಲಿಲ್ಲ ಎಂದರೆ ಕೇಂದ್ರ ರಾಜಕಾರಣ ಮಾಡುತ್ತಿದೆ ಎಂದರು. 2014ರಲ್ಲಿ ಮೋದಿಯವರು ನೀಡಿದ ಭರವಸೆಯಂತೆ ಯಾರ ಖಾತೆಗೂ 15 ಲಕ್ಷ ರು. ಬರಲಿಲ್ಲ. ಯಾವುದೇ ಉದ್ಯೋಗ ಸೃಷ್ಟಿ ಆಗಲಿಲ್ಲ. ಆದರೆ ಮೋದಿ.. ಮೋದಿ ಎಂದು ಜಪ ಮಾಡುತ್ತಿದ್ದ ಯುವಕರನ್ನು ಭ್ರಮಾ ಲೋಕಕ್ಕೆ ತಳ್ಳಿ ಅಚ್ಚೇ ದಿನ್ ಆಯೇಗಾ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ನಿಗದಿತ ಬೆಲೆ, ಬೆಂಬಲ ಬೆಲೆ ನೀಡದೆ ಸಾಲ ಮನ್ನಾ ಮಾಡಲಿಲ್ಲ ಬದಲಾಗಿ ಅಧಾನಿ, ಅಂಬಾನಿಯಂತ ಬಂಡವಾಳ ಶಾಹಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದರು ಎಂದು ಟೀಕಿಸಿದರು. ಮನಮೋಹನ್ ಸಿಂಗ್ ರವರು 75,000 ಕೋಟಿ ರು. ರೈತರ ಸಾಲವನ್ನು ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ 27 ಲಕ್ಷ ರೈತರ ತಲಾ 50 ಸಾವಿರದಂತೆ 8,150 ಸಾವಿರ ಕೋಟಿ ರು. ಮನ್ನಾ ಮಾಡಿದೆ. ಯಡಿಯೂರಪ್ಪ ನಮ್ಮಲ್ಲಿ ಹಣಕಾಸಿಲ್ಲ, ನಮ್ಮಲ್ಲಿ ನೋಟಿನ ಮಿಷಿನ್ ಇಲ್ಲ ಅಂದರು. ಆದರೆ ಅವರು ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದಾರಲ್ಲ ಎಂದು ವ್ಯಂಗ್ಯವಾಡಿದರು. ಮೋದಿಯವರು ಮನ್ ಕಿ ಬಾತ್ ಮಾಡುವುದನ್ನು ಬಿಟ್ಟರೆ ಏನನ್ನು ಹೇಳುವುದಿಲ್ಲ. ಪ್ರಶ್ನೆ ಕೇಳುತ್ತಾರೆಂದು ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ. ಮೋದಿಗೆ ಚುನಾವಣೆಗಳು ಬಂದಾಗ ಮಾತ್ರ ಕರ್ನಾಟಕ ನೆನಪಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮೇ 21 ರಂದು ಗ್ಯಾರಂಟಿಗಳಿಗೆ ಚಾಲನೆ ನೀಡಿದೆವು. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 26 ರಂದು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಕೆ.ಎಸ್ ಆನಂದ್ ರವರ ಕೈ ಬಲಪಡಿಸ ಬೇಕು. ಎಐಸಿಸಿ ದೇಶದ ಬಡ ಮಹಿಳೆಯರ ಜೀವನಕ್ಕಾಗಿ ವರ್ಷಕ್ಕೆ 1 ಲಕ್ಷ ಕೊಡುವ ಯೋಜನೆ ಜೊತೆಗೆ ಅನೇಕ ಪ್ರಣಾಳಿಕೆ ಗಳನ್ನು ನೀಡಿದೆ. ವಿಜಯೇಂದ್ರ ನೀನು ಈಗ ಕಣ್ಣು ಬಿಡುತ್ತಿದ್ದೀಯಾ... ಎಚ್ಚರಿಕೆ ಇನ್ನು ಪೂರ್ಣ ನಾವು ಅಧಿಕಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಕಳೆದ ಬಾರಿ ಕಾಂಗ್ರೆಸ್ ಮೈತ್ರಿ ಇಲ್ಲದಿದ್ದರೆ ಪ್ರಜ್ವಲ್ ರೇವಣ್ಣ ಸೋಲುತಿದ್ದರು. ಈ ಬಾರಿ ಹಾಸನದಿಂದ ಶ್ರೇಯಸ್ ಪಟೇಲ್ ಗೆ ಮತ ನೀಡಿ ಆನಂದ್ ಗೆ ಕೈಜೋಡಿಸಬೇಕು ಎಂದರು.

ನಮ್ಮಲ್ಲಿ ಇನ್ನೂ ಕೂಡ ಬಡತನ, ಅನಕ್ಷರತೆ ಮಾಢ್ಯ ಅಸ್ಪೃಶ್ಯತೆ ನಿವಾರಣೆ ಆಗಿಲ್ಲ ಹಾಗಾಗಿ ಜಾತಿ ಗಣತಿ ಮಾಡಿಸಿದ ವರದಿ ಬಂದಿದ್ದು ಪರಿಶೀಲಿಸಿ ನಂತರ ಸರ್ಕಾರ ಉತ್ತಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶ್ರೇಯಸ್ ರವರ ತಾಯಿ ಅನುಪಮಾ ಅವರು ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಶಾಸಕ ಕೆ.ಎಸ್ ಆನಂದ್ , ಮಾಜಿ ಸಚಿವ ಬಿ.ಎಲ್.ಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಚಿನ್ ಮೀಗಾ, ಭಂಡಾರಿ ಶ್ರೀನಿವಾಸ್, ತೋಟದ ಮನೆಮೋಹನ್, ಕೆ.ಜಿ. ಶ್ರೀನಿವಾಸ ಮೂರ್ತಿ,ಈರಳ್ಳಿ ರಮೇಶ್, ಕಂಸಾಗರ ಸೋಮಶೇಖರ್, ಅಬಿದ್ ಪಾಷಾ, ಇಮ್ರಾನ್ ಖಾನ್ , ಯಾಸೀನ್, ಕೆ.ಎಸ್.ತಿಪ್ಪೇಶ್,ಸಾಣೇಹಳ್ಳಿ ಆರಾಧ್ಯ,ರೇವಣ್ಣ ಸೇರಿದಂತೆ ಮತ್ತಿತರರು ಇದ್ದರು, -- ಬಾಕ್ಸ್--ಮಾಜಿ ಪ್ರಧಾನಿ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ. ಬಿಜೆಪಿ ಕೋಮುವಾದಿ ಪಕ್ಷ ಮೋದಿ ಅಧಿಕಾರಕ್ಕೆ ಬಂದರೆ ದೇಶ ತೊರೆಯುವುದಾಗಿ ಹೇಳಿದ್ದರು. ಅಲ್ಲದೆ ಮುಂದಿನ ಜನ್ಮವಿದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದಿದ್ದರು ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ ಇದೀಗ ಬಾಯಿ ಬಾಯಿ ಎಂದು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ.

ಅವರ ಕುಟುಂಬದ ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಸ್ವಾರ್ಥಕ್ಕಾಗಿ ಸುಳ್ಳು ಹೇಳ್ತಿದ್ದಾರೆ. ಗೌಡರು, ಸಿದ್ದರಾಮಯ್ಯನವರ ಗರ್ವಭಂಗ ಮಾಡುತ್ತೇನೆ ಎಂದಿದ್ದು ನನಗೆ ಅಹಂಕಾರ ಇದ್ದರೆ ತಾನೇ ಎಂದು ಟಾಂಗ್ ನೀಡಿದರು.

22kkdu1,2,3.