ಸಾರಾಂಶ
ಎತ್ತಿನಹೊಳೆಗೆ ಬಿಜೆಪಿ ಸರ್ಕಾರ ತಾರತಮ್ಯ: ಗೃಹ ಸಚಿವ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಹಣ ನೀಡಿದ್ದು ಕಾಂಗ್ರೆಸ್ ಸರ್ಕಾರ, ಕಾಮಗಾರಿ ಪೂರ್ಣಗೊಳಿಸಿ ಅದನ್ನು ಲೋಕಾರ್ಪಣೆಗೊಳಿಸುವುದು ನಮ್ಮ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದನ್ನು ಸಹಿಸದ ವಿರೋಧ ಪಕ್ಷಗಳು ಯೋಜನೆ ಬಗ್ಗೆ ಟೀಕೆ ಮಾಡುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ೨೦೧೩- ೨೦೧೮ ರವಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು 12500 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಿ ಹಣ ಬಿಡುಗಡೆ ಮಾಡಿದರು. ನಂತರ ಈ ಯೋಜನೆಯ ಮೊತ್ತವೂ ಹೆಚ್ಚಿತು ನಂತರ ನಾಲ್ಕು ವರ್ಷಗಳ ಕಾಲ ಆಳಿದ ಬಿಜೆಪಿ ಸರ್ಕಾರ ಈ ಯೋಜನೆಗೆ 5 ಸಾವಿರ ಕೋಟಿಯಿಂದ 10ಸಾವಿರ ಕೋಟಿಗಳ ಹಣ ಬಿಡುಗಡೆ ಮಾಡಬಹುದಿತ್ತು ಆದರೆ ಅವರು ಬಿಡುಗಡೆ ಮಾಡಿದ್ದು 1500 ಸಾವಿರ ಕೋಟಿ ಮಾತ್ರ ಈಗ ಪೂರ್ಣಗೊಳ್ಳುತ್ತಿರುವ ಈ ಯೋಜನೆಯನ್ನು ಕಾದು ನೋಡದೆ ಟೀಕಿಸುವುದು ಸರಿಯಿಲ್ಲ ಎಂದರು.ಎತ್ತಿನ ಹೊಳೆ ಯೋಜನೆ ಈಗಾಗಲೇ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸರ್ಕಾರದ ಸಚಿವರು ಶಾಸಕರು ಸೇರಿದಂತೆ ಹಲವರು ಉದ್ಘಾಟನೆ ಮಾಡಿದ್ದೇವೆ. ಈ ಯೋಜನೆಯಲ್ಲಿ ೧೮ ಟಿಎಂಸಿ ನೀರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲುಪುವುದು ಕಡೆಯ ಹಂತವಾಗಿದೆ. ಈಗ ಮೊದಲ ಹಂತವಾಗಿ ವಾಣಿವಿಲಾಸ ಸಾಗರಕ್ಕೆ ೧೮ ಸಾವಿರ ಕ್ಯುಸೆಕ್ಸ್ ನೀರು ತುಂಬಿಸಲಾಗುವುದು ಮೊದನೆಯದಾಗಿ ಅರಸೀಕೆರೆ, ತುಮಕೂರಿಗೆ ನೀರು ಹರಿಸಲಾಗುವುದು ೨೦೨೭ ಇಸವಿಗೆ ಈ ಯೋಜನೆ ಸಂಪೂರ್ಣವಾಗಲಿದ್ದು ಈ ಯೋಜನೆಗೆ ೭ ಸಾವಿರ ಕೋಟಿಗಳನ್ನು ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ತುಮಕೂರಿನ, ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕಿನ ೬೯ ಕೆರೆಗಳಿಗೆ ನೀರು ಹರಿಯಲಿದ್ದು ಕೊರಟಗೆರೆ ತಾಲ್ಲೂಕಿನ ೩೯ ಕೆರೆಗಳಿಗೆ ನೀರು ಹರಿಯಲಿದೆ ಎಂದು ತಿಳಿಸಿದರು. ಇತ್ತೀಚೆಗೆ ಕೊರಟಗೆರೆ ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಆಗಿರುವ ಅಪಘಾತಕ್ಕೆ ಅತಿವೇಗ ಕಾರಣ ಎಂದು ತಿಳಿದು ಬಂದಿದ್ದು ನೊಂದ ಕುಟುಂಬಕ್ಕೆ ಸಾಂತ್ವಾನ ಕೇಳಲಾಗಿದೆ. ರಾಜ್ಯದಲ್ಲಿ ರಸ್ತೆ ಅಪಘಾತ ತಡೆಯಲು ವಿಶೇಷ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿದೆ ಕಳೆದ ವರ್ಷಕಿಂತ ಈ ವರ್ಷ ಅಪಘಾತ ಪ್ರಕರಣಗಳು ಅರ್ದದಷ್ಟು ಕಡಿಮೆಯಾಗಿದ್ದು ಇಲಾಖೆ ರಸ್ತೆ ಸಾರಿಗೆ ನಿಯಮ ಪಾಲಿಸದ್ದಿದರೆ ತಕ್ಷಣ ಕ್ರಮಕೈಗೊಳ್ಳುತ್ತಿದೆ ನಮ್ಮ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ಅಪಘಾತವಾಗುತ್ತಿದ್ದು ಅದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದರು. ಶ್ವರ.