ರಾಮನಗರ: ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಆರಪೇಷನ್ ಕಮಲದ ಮೂಲಕ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾಗಿ, ದೊಡ್ಡ ಆಫರ್ ಗಳನ್ನು ಕೊಡುತ್ತಿದೆ. ನಮ್ಮ ಪಕ್ಷದ ಶಾಸಕರನ್ನು ಕಾಪಾಡುವುದು ನಮ್ಮ ಡ್ಯೂಟಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು
ರಾಮನಗರ: ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಆರಪೇಷನ್ ಕಮಲದ ಮೂಲಕ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾಗಿ, ದೊಡ್ಡ ಆಫರ್ ಗಳನ್ನು ಕೊಡುತ್ತಿದೆ. ನಮ್ಮ ಪಕ್ಷದ ಶಾಸಕರನ್ನು ಕಾಪಾಡುವುದು ನಮ್ಮ ಡ್ಯೂಟಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಮಾಡೋದನ್ನು ಮಾಡಲಿ, ನಮ್ಮಕೆಲಸ ನಾವು ಮಾಡುತ್ತೇವೆ ಎಂದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಆಗದಂತೆ ತಡೆಯಲು ಪಕ್ಷದ ವರಿಷ್ಠರು ಟಾಸ್ಕ್ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಯಾವ ಟಾಸ್ಕೂ ಇಲ್ಲ. ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್, ಬಿಜೆಡಿ ಮತ್ತು ಕಮ್ಯೂನಿಸ್ಟ್ ಪಾರ್ಟಿಯವರು ಸೇರಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಡಾ.ದತ್ತೇಶ್ವರ ಹೋಟಾ ಅವರನ್ನು ಕಣಕ್ಕಿಳಿಸಿರುವುದಾಗಿ ತಿಳಿಸಿದ್ದಾಗಿ ಹೇಳಿದರು.ಪಕ್ಷದ ಅಧ್ಯಕ್ಷರು ಸಂಪರ್ಕಿಸಿದಾಗ ಅವರಿಗೆ ಗೌರವ ಸಲ್ಲಿಸುವುದು ನನ್ನ ಕರ್ತವ್ಯ. ನಾನೂ ಒಬ್ಬ ಪಕ್ಷದ ಅಧ್ಯಕ್ಷನಾಗಿರುವ ಕಾರಣ ಜವಾಬ್ದಾರಿಯೂ ಇದೆ. ಇಲ್ಲಿಗೆ ಬನ್ನಿ ವಾತಾವರಣ ಚೆನ್ನಾಗಿದೆ ಅಂತ ಹೇಳಿ ಅವರಿಗೆಲ್ಲ ಇಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಆ ಶಾಸಕರೊಂದಿಗೆ ಮುಕ್ತವಾಗಿ ಮಾತನಾಡಿದೇನೆ. ಎಲ್ಲರೂ ಖುಷಿಯಾಗಿದ್ದು, ಒಂದಷ್ಟು ಪಾಠ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ. ಇದಕ್ಕಾಗಿ ಶಾಸಕರಿಗೆ ದೊಡ್ಡ ಆಫರ್ ಗಳನ್ನು ಕೊಡುತ್ತಿದೆ. ಎಲ್ಲರ ಮೇಲೂ ಒತ್ತಡ ಇದೆ. ಏನಾದರು ಮಾಡಿ ರಾಜ್ಯಸಭಾ ಸ್ಥಾನ ಗೆಲ್ಲಲೇಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್, ಬಿಜೆಡಿ ಹಾಗೂ ಕಮ್ಯೂನಿಸ್ಟ್ ಪಾರ್ಟಿಯವರು ಸೇರಿ ಒಗ್ಗಟ್ಟಿನಿಂದ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಇದೊಂದು ಮೊದಲ ಹಂತವಾಗಿದೆ ಎಂದರು.ನಾವೆಲ್ಲರು ಬಾಲಕೃಷ್ಣ ಮತ್ತು ಯೋಗೇಶ್ವರ್ ಕಸ್ಟಡಿಯಲ್ಲಿ ಇದ್ದೇವೆ. ಒಡಿಶಾ ಶಾಸಕರನ್ನು ಕಾಪಾಡುವುದು ನಮ್ಮ ಡ್ಯೂಟಿ. ಇಲ್ಲಿಗೆ ಯಾರೂ ಬರುವುದಕ್ಕಾಗಲ್ಲ, ಮುಟ್ಟಲು ಆಗುವುದಿಲ್ಲ. ಮಾತನಾಡಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
