ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅಂಕೋಲಾಬಿಜೆಪಿಯ ತತ್ವ, ಆದರ್ಶ ಹಾಗೂ ವೈಚಾರಿಕ ನಿಲುವುಗಳು ಇಂದು ಜಗತ್ತಿನ ಗಮನ ಸೆಳೆಯುವಂತಾಗಿದ್ದು, ಇದು ಪಕ್ಷದ ವೈಚಾರಿಕ ಜಾಗೃತಿಯ ಶಕ್ತಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಸೋಮವಾರ ಅವರ್ಸಾದ ಶ್ರೀ ಕಾತ್ಯಾಯನಿ ಸಭಾಭವನದಲ್ಲಿ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಎಡಪಂಥೀಯ ಅಥವಾ ಬಲಪಂಥೀಯ ಮನೋಭಾವದ ಪಕ್ಷವಲ್ಲ. ಅದು ರಾಷ್ಟ್ರವಾದದ ತತ್ವವನ್ನು ಅಳವಡಿಸಿಕೊಂಡಿರುವ ರಾಜಕೀಯ ಶಕ್ತಿಯ ಪ್ರತಿಬಿಂಬವಾಗಿದೆ. ವೈಚಾರಿಕ ಸ್ಪಷ್ಟತೆ, ಸಂಘಟನಾ ಬದ್ಧತೆ ಮತ್ತು ರಾಷ್ಟ್ರಪ್ರೇಮದ ಧ್ಯೇಯದಿಂದಲೇ ಬಿಜೆಪಿ ಇಂದು ದೇಶವನ್ನು ಮುನ್ನಡೆಸುವ ಸ್ಥಾನದಲ್ಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಪ್ರಶಿಕ್ಷಣ ವರ್ಗಗಳು ಪಕ್ಷದ ಸಂಘಟನೆಗೆ ಬಲ ತುಂಬುವ ಜೊತೆಗೆ ಕಾರ್ಯಕರ್ತರ ವೈಯಕ್ತಿಕ ಆತ್ಮವಿಶ್ವಾಸ ಹಾಗೂ ಕಾರ್ಯಚಟುವಟಿಕೆಗೆ ಹೊಸ ಚೈತನ್ಯ ನೀಡಲಿವೆ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಶಿವಾನಂದ ನಾಯ್ಕ, ರಾಜ್ಯ ಸಹ ಸಂಚಾಲಕ ವಿಕಾಸ ಪುತ್ತೂರು, ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಕಾವೇರಿ, ಕೊಡಗು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಸಂತೋಷ ತಳವಾರ, ಜಿಲ್ಲಾ ಪ್ರ. ಕಾರ್ಯದರ್ಶಿ ಶಿವಾಜಿ ಹಾಗೂ ಜಿಲ್ಲಾ ವಕ್ತಾರ ಹರಿಪ್ರಕಾಶ ಕೋಣೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಪ್ರ. ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ ವಂದಿಸಿದರು.
ರಾಷ್ಟ್ರವಾದದ ತತ್ವ ಅಳವಡಿಸಿಕೊಂಡಿರುವ ಬಿಜೆಪಿ: ಸಂಸದ ಕಾಗೇರಿ
ಬಿಜೆಪಿಯ ತತ್ವ, ಆದರ್ಶ ಹಾಗೂ ವೈಚಾರಿಕ ನಿಲುವುಗಳು ಇಂದು ಜಗತ್ತಿನ ಗಮನ ಸೆಳೆಯುವಂತಾಗಿದ್ದು, ಇದು ಪಕ್ಷದ ವೈಚಾರಿಕ ಜಾಗೃತಿಯ ಶಕ್ತಿಯಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.