ಮುಖ್ಯಮಂತ್ರಿ ಮೇಲೆ ಬಿಜೆಪಿ ಸುಳ್ಳು ಆರೋಪ

| Published : Aug 03 2024, 12:33 AM IST

ಸಾರಾಂಶ

ಬಿಜೆಪಿ ಭ್ರಷ್ಟಾಚಾರದ ಪಿತಾಮಹ ಆಗಿದ್ದು, ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳಿದ್ದಾರೆ.

ಶಿಗ್ಗಾಂವಿ: ಬಿಜೆಪಿ ಭ್ರಷ್ಟಾಚಾರದ ಪಿತಾಮಹ ಆಗಿದ್ದು, ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳಿದ್ದಾರೆ.

ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು, ಸಚಿವರ ಮೇಲಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಮೈಸೂರಿನಿಂದ ಬೆಂಗಳೂರು ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಸುಳ್ಳು ಅರೋಪ ಹೊರಿಸಿದ್ದಾರೆ. ಪ್ರತಿಭಟನೆ ಮಾಡಲು ನೈತಿಕತೆ ಇಲ್ಲದ ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ನೀಡುವ ಕೆಲಸ ಮಾಡುತ್ತಿದ್ದಾರೆ. ೨೦೨೩ರಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಅನ್ನು ಗೆಲ್ಲಿಸಿರುವ ರಾಜ್ಯದ ಜನರ ಮನಸ್ಸಿನಲ್ಲಿ ಸುಳ್ಳನ್ನು ತುಂಬಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅವರ ಪತ್ನಿ ಹೆಸರಲ್ಲಿ ಕಾನೂನುಬದ್ಧವಾಗಿ ಪ್ಲಾಟ್‌ ಖರೀದಿಸಲಾಗಿದ್ದು, ಬಿಜೆಪಿಯವರ ಸುಳ್ಳು ಆರೋಪವನ್ನು ಜನರು ನಂಬಬಾರದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಪ್ರದೀಪಕುಮಾರ ಗಿರೆಡ್ಡಿ, ಜಿಪಂ ಮಾಜಿ ಸದಸ್ಯ ಶಿವರಾಜ ಅಮರಾಪುರ, ತಾಪಂ ಮಾಜಿ ಸದಸ್ಯ ಮಾಲಿಂಗಪ್ಪ ಕುಂಬಾರ, ಪುರಸಭೆ ಮಾಜಿ ಅಧ್ಯಕ್ಷ ಬಾಬಾಹುಸೇನ ಗೌಡಗೇರಿ, ಅಂಜುಮನ್‌ ಕಮಿಟಿ ಮಾಜಿ ಅಧ್ಯಕ್ಷ ಫಕ್ರುದ್ದೀನ್‌ ಸವಣೂರ, ಭೂ ನಾಯ್ಯ ಮಂಡಳಿ ಮಾಜಿ ಸದಸ್ಯ ರುದ್ರೇಶ ಗುಡಗೇರಿ, ಪುರಸಭೆ ಮಾಜಿ ಸದಸ್ಯ ಮಂಜುನಾಥ ತಿಮ್ಮಾಪುರ, ಶಂಭು ನೆರ್ತಿ, ಮಾರುತಿ ವಸಂತ ಲಮಾಣಿ, ಬಸವನಗೌಡ ಪಾಟೀಲ, ಶಂಕರಗೌಡ ಪಾಟೀಲ, ಪ್ರಭು ಬಿಳಗಿ, ಇರ್ಷಾದ ಅಹ್ಮದ ಫರೋಕಿ, ಆಸಿಫ್‌ ಅಣ್ಣಿಗೇರಿ, ಹುಸೇನಸಾಬ್‌ ಕಡೆಮನಿ, ಸೀಮಣ್ಣ ಲಮಾಣಿ ಇತರರಿದ್ದರು.