ಹಾನಗಲ್ಲ: ವಿಶ್ವಗುರು ಬಸವಣ್ಣನವರ ಸಮಸಮಾಜ ನಿರ್ಮಾಣದ ಕನಸು ನನಸಾಗಿಸುವ ಪ್ರಬಲ ಇಚ್ಛಾಶಕ್ತಿ ಇರುವ ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಹಿತ ಕಾಯುವ ಅಭಿವೃದ್ಧಿ ಪರ ಚಿಂತನೆಯ ಪಕ್ಷವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಹಾನಗಲ್ಲ ತಾಲೂಕಿನ ಗಡಿಯಂಕನಹಳ್ಳಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ, ಸಿದ್ಧಾಂತಗಳಿವೆ. ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವದ ವಹಿಸಿದ್ದ ಕಾಂಗ್ರೆಸ್ ಭೇದಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಂಡಿದೆ. ವಿಶ್ವಗುರು ಬಸವಣ್ಣನವರ ಸಮ ಸಮಾಜ ನಿರ್ಮಾಣದ ಗುರಿಯೊಂದಿಗೆ ಕಾಂಗ್ರೆಸ್ ಕಾರ್ಯನಿರತವಾಗಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಸದಾ ಬಡವರು, ಜನಸಾಮಾನ್ಯರ ಪರ ನಿಂತಿದೆ. ಬೆಲೆ ಏರಿಕೆಯ ಬಿಸಿಯಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಆಸರೆಯಾಗಿದೆ. ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಮತ್ತು ಜನಕಲ್ಯಾಣದ ಕಾರ್ಯಗಳನ್ನು ಮೆಚ್ಚಿ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಕ್ತಿ ತುಂಬುತ್ತಿದ್ದಾರೆ ಎಂದರು.ಶಿವನಗೌಡ ಹಳೆಗೌಡ್ರ, ಚನ್ನಬಸಪ್ಪ ಕಳಲಿ, ಈರಪ್ಪ ಯತ್ನಳ್ಳಿ, ಶಾಂತಯ್ಯ ಚಿಕ್ಕಮಠ, ನಿಂಗಪ್ಪ ಮಣ್ಣೂರ, ಶಂಭು ಯತ್ನಳ್ಳಿ, ಕೃಷ್ಣ ಹರಿಜನ, ಬಸವನಗೌಡ ಅಗಸನಹಳ್ಳಿ, ಚಂದ್ರಪ್ಪ ಯಲ್ಲಾಪುರ, ಬಸವರಾಜ ಯಲ್ಲಾಪುರ, ತಿಪ್ಪಣ್ಣ ಕಳಲಿ, ಈರಯ್ಯ ಚಿಕ್ಕಮಠ, ತಿಪ್ಪಣ್ಣ ಮಣ್ಣೂರ, ಚನ್ನಬಸಪ್ಪ ಮಿರ್ಜಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಗ್ರಾಮದ ಮುಖಂಡರಾದ ಸಿದ್ದಣ್ಣ ಯಲ್ಲಾಪುರ, ಭರಮಗೌಡ ಅಗಸಹಳ್ಳಿ, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ಶಾಂತನಗೌಡ ಹಲಗೌಡ್ರ, ಗದಿಗೆಪ್ಪ ಹನುಮಗೌಡ್ರ, ಸೋಮಣ್ಣ ಹಳೆಗೌಡ್ರ, ಶಂಕ್ರಪ್ಪ ಬಾರ್ಕಿ, ಪುಟ್ಟಪ್ಪ ಬಾರ್ಕಿ, ಶಂಭು ಯಲ್ಲಾಪುರ, ಶಂಭು ಬಾರ್ಕಿ, ಮಹಲಿಂಗಪ್ಪ ಬಾರ್ಕಿ, ಪರಸಪ್ಪ ಮಡಿವಾಳರ, ಸತೀಶ ಸಾಗರವಳ್ಳಿ ಇದ್ದರು.
ದೇಶದ ಹಿತ ಕಾಯುವ ಅಭಿವೃದ್ಧಿ ಪರ ಚಿಂತನೆಯ ಪಕ್ಷ ಕಾಂಗ್ರೆಸ್
ಗಡಿಯಂಕನಹಳ್ಳಿ ಗ್ರಾಮದಲ್ಲಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊರೆದು ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.