ಬಿಜೆಪಿ ದಲಿತ, ಅಂಬೇಡ್ಕರ್‌ ವಿರೋದಿ ಅಲ್ಲ

| Published : Apr 17 2024, 01:23 AM IST

ಸಾರಾಂಶ

ಬಿಜೆಪಿ ಪಕ್ಷ ಎಂದರೇ ದಲಿತ ವಿರೋಧಿಯಲ್ಲ. ಅಂಬೇಡ್ಕರ್ ವಿರೋಧಿಯೂ ಅಲ್ಲ ಸರ್ವ ಧರ್ಮದ ಪಕ್ಷವಾಗಿದ್ದು, ಎಲ್ಲಾ ಧರ್ಮವನ್ನು ಸಮನಾಗಿ ಅಭಿವೃದ್ಧಿ ಮಾಡುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ಮತ ನೀಡಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಬಿಜೆಪಿ ವಿಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿ ಪಕ್ಷ ಎಂದರೇ ದಲಿತ ವಿರೋಧಿಯಲ್ಲ. ಅಂಬೇಡ್ಕರ್ ವಿರೋಧಿಯೂ ಅಲ್ಲ ಸರ್ವ ಧರ್ಮದ ಪಕ್ಷವಾಗಿದ್ದು, ಎಲ್ಲಾ ಧರ್ಮವನ್ನು ಸಮನಾಗಿ ಅಭಿವೃದ್ಧಿ ಮಾಡುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ಮತ ನೀಡಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಬಿಜೆಪಿ ವಿಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜೊತೆ ಚುನಾವಣಾ ಪ್ರಚಾರ ನಡೆಸಲು ಆಗಮಿಸಿ ನಗರದ ಖಾಸಗಿ ಹೋಟೆಲೊಂದರಲ್ಲಿ ಬಿಜೆಪಿ, ಜೆಡಿಎಸ್ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್‌ ಸಾಧನೆ ಶೂನ್ಯ:

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದೆ. ಕಾಂಗ್ರೆಸ್ ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿ ಇರಬಹುದು. ಆದರೆ ದೇಶದ ಮೋದಿ ಅಲೆಯಲ್ಲಿ ಕಾಂಗ್ರೆಸ್ ಚಿಂತೆಗೀಡಾಗಿದೆ. ಕಾಂಗ್ರೆಸ್ ಗೆ ನಾಯಕತ್ವವೇ ಇಲ್ಲ. ದೇಶದ ವಿಚಾರದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ ಎಂದು ಕುಟುಕಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ದಲಿತರನ್ನು ಕೇವಲ ಓಟ್‌ ಬ್ಯಾಂಕ್‌ ಮಾಡಿಕೊಂಡಿದೆ:

ಪ್ರಧಾನಿ ಮೋದಿ ಓರ್ವನಿಷ್ಕಳಂಕ ರಾಜಕಾರಣಿ. ಕಾಂಗ್ರೆಸ್ ಇಷ್ಟು ದಿನ ದಲಿತರನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದೆ. ನಾವು ದಲಿತರನ್ನು ಉದ್ದಾರ ಮಾಡಿದ್ದೇವೆ ಎಂದು ಕೈ ನಾಯಕರು ಹೇಳುತ್ತಾರೆ. ಆದರೆ ಅಂಬೇಡ್ಕರ್ ಸೇರಿ ಈ ಸಮುದಾಯವನ್ನು ನೋಯಿಸಿರುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ. ಬಿಜೆಪಿ ಅದಿಕಾರಕ್ಕೆ ಬಂದರೆ ಸಂವಿಧಾನ ತೆಗಿತಾರೆ, ಅವರು ಅಂಬೇಡ್ಕರ್ ವಿರೋದಿ ಎಂದು ನಮ್ಮನ್ನ ದಾರಿ ತಪ್ಪಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಸಂವಿಧಾನ ಬಂದು 50 ವರ್ಷವಾದರೂ ಕೂಡ ಯಾಕೆ ಸಂವಿಧಾನ ಜಾರಿ ಮಾಡೊಕೆ ಆಗಿರಲಿಲ್ಲ. ಈ ಸಮಾಜದಲ್ಲಿ ಅಸ್ಪ್ರಶ್ಯತೆ ನಾಶ ಆಗೊವರೆಗೆ, ಸಮಾನತೆ ಬರೋಬರೆಗೆ ಮೀಸಲಾತಿ ಇರುತ್ತೆ ಎಂದು ಪ್ರಧಾನಿ ಅವರೇ ಹೇಳಿದಾರೆ. ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದ್ದು ಸಂವಿಧಾನ ವಿರೋದಿ ಅಲ್ಲವೇ? ಬಿಜೆಪಿ ದಲಿತ ವಿರೋಧಿ ಅಲ್ಲ, ಅಂಬೇಡ್ಕರ್ ವಿರೋಧಿಯೂ ಅಲ್ಲ. ಕಾಂಗ್ರೆಸ್ ಮುಂದಿನ ಐವತ್ತು ವರ್ಷ ಅಧಿಕಾರದ ಕನಸನ್ನು ಕಾಣದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.

೭೦ ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಶೆಡ್ಡು ನಿಂತ ಇಡೀ ದೇಶದ ವಿರೋಧ ಪಕ್ಷಗಳು ಒಂದಾಗಿ ಜನತಾ ಪಕ್ಷವನ್ನು ಕಟ್ಟಿದರು. ಕ್ರಮೇಣ ಈ ಜನತಾ ಪಕ್ಷ ಕೂಡ ಹೊಡೆದು ಹೋಯಿತು. ಹೊಡೆದು ಹೋದ ಭಾಗವೇ ಭಾರತೀಯ ಜನತಾ ಪಕ್ಷ ಈಗ ಹೆಮ್ಮರವಾಗಿ ಬೆಳೆದಿದೆ. ದೇಶ ಎನ್ನುವುದು ದೊಡ್ಡದು ನಿಟ್ಟಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಆಗಿದೆ. ದೌರ್ಜನ್ಯ ದಲಿತರ ಮೇಲೆ ಯಾರೆ ಮಾಡಿದರೂ ತಪ್ಪು. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ರಾಜಕೀಯ ಉದ್ದೇಶದಲ್ಲಿ ಈ ಚುನಾವಣೆಗಳ ಬಗ್ಗೆ ನಾನು ಬಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೋದಿ ಪ್ರಧಾನಿ ಆದ ಮೇಲೆ ನಿಜವಾದ ಸಂವಿಧಾನ ಬಂದಿದ್ದು:

ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಭಾರತ ದೇಶದಲ್ಲಿ ಸಂವಿಧಾನ ನಿಜವಾಗಲು ಜಾರಿಗೆ ಬಂದಿದೆ ಎಂಬುದಕ್ಕೆ ಹೆಮ್ಮೆಯಿಂದ ಹೇಳುವುದಕ್ಕೆ ಇಷ್ಟಪಡುತ್ತೇನೆ. ಇದುವರೆಗೂ ಕಾಶ್ಮೀರದಲ್ಲಿ ಮೀಸಲಾತಿ ಎಂಬುದು ಸಿಕ್ಕಿರಲಲ್ಲ. ೩೭೦ ರದ್ದಾದ ಮೇಲೆ ನಿಜವಾಗಲು ಸಹ ದಲಿತರಿಗೂ ಸಹ ಮೀಸಲಾತಿಯು ಕಾಶ್ಮೀರದಲ್ಲಿ ಆಗಲಿದೆ. ಎಲ್ಲಾ ಸಮುದಾಯದವರು ಕೂಡ ಅಂಬೇಡ್ಕರ್ ಹುಟ್ಟಿರುವ ಸ್ಥಳ, ಓದಿರುವ ಸ್ಥಳ ಹಾಗೂ ಅವರು ಐಕ್ಯವಾಗಿರುವ ಸ್ಥಳ ಕೂಡ ಪಂಚತೀರ್ಥಗಳೆಂದು ಅಭಿವೃದ್ಧಿ ಮಾಡಿ ಸಮುದಾಯಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದರು.

ಇಡೀ ಸಮಾಜ ಒಗ್ಗಟ್ಟಾಗಿ ಭಾರತೀಯ ಜನತಾ ಪಾರ್ಟಿಗೆ ಮತವನ್ನು ಕೊಡುವ ಮೂಲಕ ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತವನ್ನು ಕೊಡುವುದರ ಮೂಲಕ ಅತೀ ಹೆಚ್ಚು ಮತಗಳಿಂದ ಗೆಲುವು ತಂದುಕೊಡುವಂತೆ ಮನವಿ ಮಾಡಿದರು. ದಲಿತರ ಹಣವನ್ನು ಕಾಂಗ್ರೆಸ್ ಸರಕಾರವು ಬೇರೆಯೊಂದಕ್ಕೆ ದುರ್ಭಳಕೆ ಮಾಡಿಕೊಂಡಿರುವುದಾಗಿ ನೇರವಾಗಿ ಆರೋಪ ಮಾಡುವುದಾಗಿ ಹೇಳಿದರು.ಇದೆ ವೇಳೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬಿಜೆಪಿ ಮುಖಂಡರಾದ ಸಿ.ವಿ. ರಾಜಪ್ಪ, ಆರ್.ಪಿ.ಐ. ಸತೀಶ್, ನಗರಸಭೆ ಸದಸ್ಯ ಸಿ. ಕ್ರಾಂತಿ ಪ್ರಸಾದ್ ತ್ಯಾಗಿ, ಎಸ್.ಎಸ್.ಟಿ. ಜಿಲ್ಲಾಧ್ಯಕ್ಷ ಕೆ.ಟಿ. ಮಂಜಯ್ಯ, ಬಿಜೆಪಿ ಎಸ್.ಸಿ. ಮೋರ್ಚಾದ ಅಧ್ಯಕ್ಷ ಎಸ್.ಡಿ. ಚಂದ್ರು, ಜೈಭೀಮ್ ಬ್ರಿಗೇಡ್ ಅಧ್ಯಕ್ಷ ರಾಜೇಶ್, ಸಮತಾ ಸೈನಿಕ ದಳದ ಕುಮಾರಸ್ವಾಮಿ, ಜಗದೀಶ್ ಚೌಡಹಳ್ಳಿ, ಮಾದಿಗ ದಂಡೋರ ಸೋಮು, ಜೀವನ್ ಪ್ರಕಾಶ್ ಮತ್ತಿತರರಿದ್ದರು.