ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು10 ಕ್ವಿಂಟಲ್ ಬದಲಾಗಿ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ 150 ಕ್ವಿಂಟಲ್ ನಿಗದಿತ ಮಿತಿ ತೆಗೆದು ಹಾಕಿ ರೈತರು ಬೆಳೆದ ಎಲ್ಲ ಜೋಳವನ್ನು ಸರ್ಕಾರ ಖರೀದಿ ಮಾಡಿಸಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಜಂಟಿಯಾಗಿ ಮಂಗಳವಾರ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ಶಾಸಕ ಹಂಪನಗೌಡರು, ಕೃಷಿ ಸಚಿವರಿಗೆ ಪತ್ರ ಬರೆದು ಸುಮ್ಮನೆ ಕುಳಿತಿದ್ದಾರೆ. ಮೇಲಾಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸುವ ಇಚ್ಚಾಶಕ್ತಿ ಇರಬೇಕು. ಅದು ಶಾಸಕರಲ್ಲಿ ಇಲ್ಲ. ರೈತರ ಪರ ಇದ್ದೇವೆಂದು ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ 8 ಲಕ್ಷ ಟನ್ ರಾಗಿ ಖರೀದಿಸುವ ಗುರಿ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಬಾರಿ 4 ಲಕ್ಷ ಟನ್ ಜೋಳ ಖರೀದಿ ಗುರಿ ಇತ್ತು. ಆದರೀಗ 1 ಲಕ್ಷ ಟನ್ ಮಾತ್ರ ಇದೆ. ಹೀಗಾದರೆ ಈ ಭಾಗದ ನಾಯಕರಿಗೆ ಸರ್ಕಾರವನ್ನು ಪ್ರಶ್ನಿಸುವ ತಾಕತ್ತು ಇಲ್ಲವೇ ಎಂದು ಕಿಡಿಕಾರಿದರು.ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ ಮಾತನಾಡಿದರು. ಮುಖಂಡರಾದ ಅಮರೇಗೌಡ ವಿರುಪಾಪುರ,ಅಶೋಕಗೌಡ ಗದ್ರಟಗಿ, ಎಂ.ದೊಡ್ಡಬಸವರಾಜ, ಸೈಯ್ಯದ್ ಆಸೀಫ್ ಮತ್ತಿತರರು ಇದ್ದರು.