ಸಾರಾಂಶ
ಬಿಜೆಪಿ ಮುಖಂಡರು ರಾಮಮಂದಿರ ಒಂದೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ: ಬಿಜೆಪಿ ಮುಖಂಡರು ರಾಮಮಂದಿರ ಒಂದೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಬೇರೆ ಸಾಧನೆಗಳು ಇಲ್ಲ,ಸರಕಾರದ ಸಾಧನೆಯನ್ನು ವಿವೇಕದಿಂದ ನೋಡುತ್ತಿದ್ದಾರೆ. ಇವರು ಏನೇ ಸುಳ್ಳು ಹೇಳಿದರೂ ಜನ ನಂಬಲ್ಲ.
ರಾಮಮಂದಿರ ಅಪೂರ್ಣ ಅಂತಾ ನಾನು ಹೇಳೋದಲ್ಲ, ಶಂಕರಾಚಾರ್ಯರು ಹೇಳುತ್ತಾರೆ.ಧರ್ಮದಲ್ಲಿ ನಿಷ್ಠೆ ಇರುವವರು ಶಂಕರಾಚಾರ್ಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತೇವೆ.
ಶಂಕರಾಚಾರ್ಯರು ಹೇಳೋದನ್ನ ನಂಬುತ್ತೇವೆ ಹೊರತು, ಬಿಜೆಪಿ ಅಧ್ಯಕ್ಷ ಹೇಳೋದನ್ನ ನಂಬಬೇಕಾ?ದೇಶದಲ್ಲಿ ರಾಜಕೀಯ ವ್ಯಕ್ತಿಗಳು ಧರ್ಮವನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಅನ್ನೋದನ್ನ ಶಂಕರಾಚಾರ್ಯರು ಮಾರ್ಗದರ್ಶನ ಮೂಲಕ ತಿಳಿಸಿದ್ದಾರೆ. ರಾಜಕೀಯವಾಗಿ ಧರ್ಮ ಹೇಗೆ ಬಳಕೆಯಾಗುತ್ತೆ ಅನ್ನೋದನ್ನ ತಿಳಿಯಲು ಇದು ಪರ್ವಕಾಲ ಎಂದರೆ ತಪ್ಪಾಗಲಾರದು ಎಂದರು.
ಶಂಕರಾಚಾರ್ಯರೇ ಹೋಗಲ್ಲ ಎಂದರೆ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ, ಯಾರು ಅತ್ಯಂತ ಎತ್ತರದವರು ಅಂತಾ ನಾವು ಪರಿಗಣಿಸುತ್ತೇವೋ ಅವರೇ ಹೋಗುತ್ತಿಲ್ಲ ಎಂದರೆ ಇನ್ನೇನು? ನಾಲ್ಕು ಮಠಗಳ ಪೈಕಿ ಇಬ್ಬರು ಸ್ವಾಮೀಜಿಗಳು ಹೇಳಿಕೆ, ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚಿನ ಅವಶ್ಯಕತೆ ಇದೆ ಎಂದರು.