7ಕ್ಕೆ ಕೋಲಾರದಲ್ಲಿ ಬಿಜೆಪಿ ಜನಾಕ್ರೋಶ ಪ್ರತಿಭಟನೆ

| Published : May 04 2025, 01:35 AM IST

ಸಾರಾಂಶ

ಭಯೋತ್ಪಾದಕ ಚಟುವಟಿಕೆಗಳು ಭಾರತದಲ್ಲಿ ಹೊಸದೇನೂ ಅಲ್ಲ. ಸ್ವಾತಂತ್ರ್ಯ ಪೂರ್ವದಿಂದಲ್ಲೂ ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ, ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಭಯೋತ್ಪಾದಕರ ದಾಳಿಯೂ ಹೇಡಿತನದ ಪರಮಾವಧಿಯಾಗಿದೆ ಎಂದು ಮಾಜಿ ಶಾಸಕ ವೈ.ಸಂಪಂಗಿ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಭಯೋತ್ಪಾದಕ ಚಟುವಟಿಕೆಗಳು ಭಾರತದಲ್ಲಿ ಹೊಸದೇನೂ ಅಲ್ಲ. ಸ್ವಾತಂತ್ರ್ಯ ಪೂರ್ವದಿಂದಲ್ಲೂ ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ, ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಭಯೋತ್ಪಾದಕರ ದಾಳಿಯೂ ಹೇಡಿತನದ ಪರಮಾವಧಿಯಾಗಿದೆ ಎಂದು ಮಾಜಿ ಶಾಸಕ ವೈ.ಸಂಪಂಗಿ ಖಂಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಜನಾಕ್ರೋಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿನ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹಿಸಲಾಗದ ಅಜನ್ಮ ವೈರಿಗಳಾದ ಪಾಪಿ ಪಾಕಿಸ್ತಾನಿಯರು ಭಯೋತ್ಪಾದಕರನ್ನು ಕಳುಹಿಸಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ ೨೭ ಮಂದಿಯನ್ನು ಅಮಾನುಷವಾಗಿ ಹತ್ಯೆಗೈದಿರುವ ರಣ ಹೇಡಿಗಳು ಎಂದು ಹೇಳಿದರು.ವಿಶ್ವದಲ್ಲಿಯೇ ವಿದೇಶಿಯರ ಅಚ್ಚು ಮೆಚ್ಚಿನ ತಾಣವಾದ ಭಾರತಕ್ಕೆ ಯಾರು ಬರಬಾರದು ಕೆಟ್ಟ ಹೆಸರು ಬರಬೇಕೆಂಬ ದುರುದ್ದೇಶ, ತಪ್ಪು ಸಂದೇಶ ಸಾರುವಂತ ಕುತಂತ್ರ ನಡೆಸಿ ಈ ದಾಳಿಯನ್ನು ನಡೆಸಿದೆ. ವಿಶ್ವಸಂಸ್ಥೆಯಲ್ಲೂ ಭಾರತದ ರಕ್ಷಣಾ ವ್ಯವಸ್ಥೆ ಬಗ್ಗೆ ಅಸಮಾಧಾನ ಸೂಚಿಸುವ ಮೂಲಕ ಅಪಮಾನ ಉಂಟು ಮಾಡುವ ಸಂಚು ನಡೆಸಿದೆ ಎಂದು ದೂರಿದರು. ರಾಜ್ಯದಲ್ಲಿ ಜನಾಕ್ರೋಶ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಜನತೆಗೆ ಅರಿವುಂಟು ಮಾಡುವ ಸಂದರ್ಭದಲ್ಲಿ ಈ ದುರ್ಘಟನೆಯಿಂದಾಗಿ ಶೋಕಾಚರಣೆ. ಸಂತಾಪ ವ್ಯಕ್ತಪಡಿಸಬೇಕಾದ ದುಃಸ್ಥಿತಿ ಉಂಟಾಗಿತ್ತು. ನಮ್ಮವರನ್ನು ಕಳೆದುಕೊಂಡ ಶೋಕಾಚರಣೆಯ ಹಿನ್ನೆಲೆಯಲ್ಲಿ ತಟಸ್ಥವಾಗಿದ್ದೇವು ಎಂದರು. ರಾಜ್ಯ ಸರ್ಕಾರವು ಜನರ ದಿನ ಬಳಕೆ ವಸ್ತುಗಳ ಏರಿಕೆ ವಿರುದ್ದ ಮೇ ೭ರಂದು ಜನಾಕ್ರೋಶ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಪೂರ್ವ ಭಾವಿ ಸಭೆಯಾಗಿ ಜಿಲ್ಲೆಯ ೬ ತಾಲೂಕುಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರುಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರಧಾನ ಮಂತ್ರಿಯಾಗಿ ಮೋದಿ ಆಡಳಿತ ಚುಕ್ಕಣಿ ಹಿಡಿದ ನಂತರ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಭಯೋತ್ಪಾದಕರನ್ನು ಮತ್ತು ಅವರನ್ನು ಬೆಂಬಲಿಸಿದರವನ್ನು ಬಗ್ಗು ಬಡಿದು ನಾಶ ಪಡೆಸುವವರೆಗೂ ವಿರಮಿಸುವುದಿಲ್ಲ, ಪ್ರಧಾನಿ ನರೇಂದ್ರ ಮೋದಿಗೆ ಏಟಿಗೆ ಎದಿರೇಟು ನೀಡುವಂತ ತಾಕತ್ತು ಇದೆ.ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ತೊಲಗಿಸಿ ಬಿಜೆಪಿಯನ್ನು ಅಧಿಕಾರ ಹಿಡಿಯುವಂತೆ ಮಾಡಬೇಕು. ಹಾಗಾಗಿ ನಮ್ಮಲ್ಲಿ ಏನೇ ಗುಂಪುಗಾರಿಕೆ, ಬಣಗಳನ್ನು ಬದಿಗೆ ಸರಿಸಿ ಪಕ್ಷದ ದೃಷ್ಠಿಯಲ್ಲಿ ಎಲ್ಲರೂ ಸಂಘಟಿತರಾಗಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಘೋಷಣೆಯನ್ನು ಪಾಲಿಸುವಂತಾಗಬೇಕೆಂದರು. ಮುಂದೆ ಬರಲಿರುವ ಚುನಾವಣೆಗೆ ಬೂತ್ ಮಟ್ಟದಿಂದ ಸಂಘಟಿತರಾಗಬೇಕು. ಪಕ್ಷದಲ್ಲಿ ಪದವಿಗಳನ್ನು ಪಡೆದವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಲ್ಲವೇ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸ ಬೇಕು. ಪದವಿ ಪಡೆದು ಮನೆಯಲ್ಲಿ ನಿದ್ದೆ ಹೋದರೆ ಪ್ರಯೋಜನವಿಲ್ಲ ಎಂದು ಎಚ್ಚರಿಸಿದರು.ಮೇ ೭ರಂದು ನಡೆಯಲಿರುವ ಜನಾಕ್ರೋಶ ಪ್ರತಿಭಟನೆ ಕೂಗು ರಾಜಧಾನಿ ಬೆಂಗಳೂರಿಗೆ ಕೇಳುವಂತಿರಬೇಕು. ಜನಾಕ್ರೋಶ ರ್‍ಯಾಲಿಯು ರಾಜ್ಯದಲ್ಲಿ ಐತಿಹಾಸಿಕ ದಾಖಲೆಯಾಗುವಂತೆ ಸಂಘಟಿಸಬೇಕು. ಈ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರೂ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಿ ದಾಖಲಿಸಬೇಕು. ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕಾಗಿರುವುದು ಜಿಲ್ಲೆಯ ಪ್ರತಿ ತಾಲೂಕಿನ ಪದಾಧಿಕಾರಿಗಳ ಜವಾಬ್ದಾರಿ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಜನಾಕ್ರೋಶ ಪ್ರತಿಭಟನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯಶಸ್ವಿಯಾಗಿದ್ದು, ೮ ಜಿಲ್ಲೆಗಳಲ್ಲಿ ಬಾಕಿ ಉಳಿದಿದ್ದು ಈಗ ಮೇ ೭ ರಿಂದ ಕೋಲಾರದಿಂದಲೇ ಪುನರ್ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಒಳಮೀಸಲಾತಿಯ ಜಾತಿ ಗಣತಿ ಜೊತೆಗೆ ಜನ ಗಣತಿ ಸಮೀಕ್ಷೆ ನಡೆಸಲು ಸೂಚಿಸಿದೆರ. ಈ ಹಿಂದೆ ಸಮೀಕ್ಷೆಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿರಲಿಲ್ಲ. ಈಗಲೂ ದುರುದ್ದೇಶಿತ ಪೂರಕವಾಗಿ ಸಮೀಕ್ಷಾ ವರದಿ ಜಾರಿಯಲ್ಲಿ ರಾಜಕೀಯ ಮಾಡಲು ಮುಂದಾಗಿದೆ ಎಂದು ದೂರಿದರು. ಜನಾಕ್ರೋಶ ಪ್ರತಿಭಟನೆಯ ರ್‍ಯಾಲಿಗೆ ಛಲವಾದಿ ನಾರಾಯಣಸ್ವಾಮಿ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲಾ ಪದಾಧಿಕಾರಿಗಳು ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರದಿದ್ದರೆ ಅವರ ಸ್ಥಾನಗಳು ಯಾವೂದೇ ಮುಲಾಜಿಲ್ಲದೆ ಸ್ಥಾನ ಪಲ್ಲಟ ಮಾಡಲಾಗುವುದು ಎಂದು ಎಚ್ಚರಿಸಿದರು, ಮಾಜಿ ಶಾಸಕ ಬಿ.ಪಿ.ಮುನಿವೆಂಕಟಪ್ಪ, ಮುಖಂಡರಾದ ಮಹೇಶ್, ಅಪ್ಪಿ ರಾಜು, ಕೆಂಬೋಡಿ ನಾರಯಾಣಸ್ವಾಮಿ, ರಾಜೇಶ್ ಸಿಂಗ್, ಸಾಮ ಅನಿಲ್, ಕಪಾಲಿ ಶಂಕರ್, ಬಾಲಾಜಿ ಮಹೇಶ್, ನಾರಾಯಣಸ್ವಾಮಿ, ಜಿ.ನಾರಾಯಣರಾಜು, ತೇಜು. ಮಾಗೇರಿ ನಾರಾಯಣಸ್ವಾಮಿ, ಮಮತಮ್ಮ, ಭಾರತಿ, ಲೋಕೇಶ್ ಇದ್ದರು.