ನುಂಗಿರುವ ವಕ್ಫ್ ಆಸ್ತಿ ಹರಾಜಾದರೆ ಪುರುಷರಿಗೆ ಗ್ಯಾರೆಂಟಿ ಯೋಜನೆ ಸಿಗುತ್ತದೆ

| Published : Dec 17 2024, 12:46 AM IST

ನುಂಗಿರುವ ವಕ್ಫ್ ಆಸ್ತಿ ಹರಾಜಾದರೆ ಪುರುಷರಿಗೆ ಗ್ಯಾರೆಂಟಿ ಯೋಜನೆ ಸಿಗುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ಆಸ್ತಿ ಕಬಳಿಕೆಗೆ ಕಾಂಗ್ರೆಸ್ ನಾಯಕರೇ ಸಹಕಾರ ನೀಡಿರುವಾಗ ವಿಜಯೇಂದ್ರ ಅವರೇಕೆ ಮಣಿಪ್ಪಾಡಿಗೆ ಹಣ ಕೊಡುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರುವಕ್ಛ್ ಆಸ್ತಿ ನುಂಗಿರುವರ ಆಸ್ತಿಗಳನ್ನು ಹರಾಜು ಹಾಕಿದಲ್ಲಿ 5 ಲಕ್ಷ ಕೋಟಿ ರೂ. ಹಣ ಬರುತ್ತದೆ. ಇದರಿಂದ ಗ್ಯಾರಂಟಿ ಯೋಜನೆ ಗಂಡು ಮಕ್ಕಳಿಗೂ ಕೊಡಬಹುದು. ಉಚಿತವಾಗಿ ಎಂಎಸ್ಐಎಲ್ ಮೂಲಕ ಪುರುಷರಿಗೆ ಯಾವ ಬ್ರಾಂಡ್ ಎಣ್ಣೆ ಬೇಕಾದರೂ ಕೊಡಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ವ್ಯಂಗ್ಯವಾಡಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14ನೇ ಸಾಲಿನಲ್ಲಿ ಸುಮಾರು 2.39 ಕೋಟಿ ರೂ. ಮೌಲ್ಯದ 40 ಸಾವಿರ ಎಕರೆ ಆಸ್ತಿ ಕಬಳಿಕೆ ಆಗಿದೆ ಎಂದು ಅಂದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ವರದಿ ನಿಡಲಾಗಿದೆ. ವಕ್ಫ್ ಆಸ್ತಿ ಕಬಳಿಕೆಗೆ ಕಾಂಗ್ರೆಸ್ ನಾಯಕರೇ ಸಹಕಾರ ನೀಡಿರುವಾಗ ವಿಜಯೇಂದ್ರ ಅವರೇಕೆ ಮಣಿಪ್ಪಾಡಿಗೆ ಹಣ ಕೊಡುತ್ತಾರೆ. ಇದು ಈ ವರ್ಷದ ದೊಡ್ಡ ಜೋಕ್ ಅಲ್ಲವೇ ಎಂದು ಪ್ರಶ್ನಿಸಿದರು.ವಕ್ಫ್ ಮಂಡಳಿ ಅಧ್ಯಕ್ಷರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು. ಬಳಿಕ ಈ ಬಗ್ಗೆ ಲೋಕಾಯುಕ್ತ ಕೂಡ ತನಿಖೆ ನಡೆಸಿದೆ. ಅಂದು ಉಪ ಲೋಕಾಯುಕ್ತರಾಗಿದ್ದ ಆನಂದ್ ಅವರು ನೀಡಿರುವ 9 ಸಂಪುಟಗಳ ವರದಿ ಇಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಅವರು ಈಗಲೂ ತನಿಖೆ ನಡೆಸಬಹುದು ಎಂದು ಸವಾಲು ಹಾಕಿದರು.ತನಿಖೆ ನಡೆಸಿದರೆ ಎಲ್ಲರ ಮುಖವಾಡ ಹೊರಗೆ ಬರತ್ತದೆ. ಡ್ರೋಣ್ ಪ್ರತಾಪ್ ಇತ್ತೀಚಿಗೆ ಕವರ್ ನಲ್ಲಿ ಮದ್ದು ತುಂಬಿ ಕೆರೆಗೆ ಸಣ್ಣ ಬಾಂಬ್ ಹಾಕಿದ. ಡ್ರೋಣ್ ಪ್ರತಾಪ್ ರೀತಿ ಛೋಟಾ ಖರ್ಗೆ (ಪ್ರಿಯಾಂಕ ಖರ್ಗೆ) ಕೂಡ ಬಾಂಬ್ ಹಾಕಿದರು. ಆದರೆ, ಅದು ಟುಸ್ ಪಟಾಕಿ ರೀತಿ ಎನಿಸಿದರೂ ಕರ್ನಾಟಕದ ಯಾವ ಕಾಂಗ್ರೆಸ್ ನಾಯಕರೂ ಅವರ ವಿರುದ್ಧ ಚಕಾರವೆತ್ತಲಿಲ್ಲ. ಮುಖ್ಯಮಂತ್ರಿಗಳೂ ಕೂಡ ಆತನ ಸುಳ್ಳನ್ನು ಸಮರ್ಥಿಸಿದ್ದಾಗಿ ಲೇವಡಿಯಾಡಿದರು.ಬಿ.ವೈ. ವಿಜಯೇಂದ್ರ ಅವರು ಅವರು ಅನ್ವರ್ ಮಣಪ್ಪಾಡಿ ಮನೆಗೆ 150 ಕೋಟಿ ರೂ. ತೆಗೆದುಕೊಂಡು ಹೋಗಿದ್ದಾಗಿ ಆರೋಪಿಸಲಾಗಿದೆ. ಕಾಂಗ್ರೆಸ್ ನಾಯಕರ ಮೇಲಿರುವ ಆರೋಪ ಹೊರತರಬಾರದು ಎಂದು ಹಣ ಕೊಡಲಿಕ್ಕೆ ವಿಜಯೇಂದ್ರ ಅವರಿಗೇನು ಹುಚ್ಚು ನಾಯಿ ಕಡಿದಿತ್ತೇ ಎಂದರು.ಅಂದು ನಾನು ಹಕ್ಕು ಬಾದ್ಯತಾ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದೆ. 2013ರ ಸಮಿತಿಯಲ್ಲಿ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷರಾಗಿದ್ದರು. ಅವರ ಬಳಿಕ ನಾನು ಅಧ್ಯಕ್ಷನಾದೆ. ಐದು ಜನರ ಸಮಿತಿ ಇತ್ತು. ವೀರಣ್ಣ ಮತ್ತಿಕಟ್ಟಿ ಶುರುಮಾಡಿದ ತನಿಖೆಯನ್ನು ನಾವು ಮುಂದುವರೆಸಿದೆವು. ಅಂತಿಮ ವರದಿಯನ್ನೂ ಸಲ್ಲಿಸಿದ್ದು ಕೂಡ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲೇ ಎಂದು ಅವರು ಎಳೆ ಎಳೆಯಾಗಿ ಬಿಡಿಸಿಟ್ಟರು.ವಕ್ಛ್ ಆಸ್ತಿಯನ್ನು ಬಹುತೇಕ ಕಾಂಗ್ರೆಸ್ ನಾಯಕರೇ ಆಕ್ರಮಿಸಿಕೊಂಡಿದ್ದಾರೆ. ಕೆಲ ಆಸ್ತಿಯನ್ನು ವಶಪಡಿಸಿಕೊಂಡವರಿಗೆ ಸಹಕಾರ ನೀಡಿದ್ದಾರೆ. ಇದರಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಕ್ವಾಜಾ ಬಂದೆ ನವಾಜ್ ದರ್ಗಾಕ್ಕೆ ಸಂಬಂಧಪಟ್ಟ ಜಾಗವನ್ನು ದುರುಪಯೋಗವಾಗಿತ್ತು ಎಂದು ಆರೋಪಿಸಿದರು.ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಪಾಲುದಾರರಾಗಿದ್ದರು. ಈಗ ಅಲ್ಲಿ ದೊಡ್ಡ ವಾಣಿಜ್ಯ ಕಟ್ಟಡಗಳು, ಏಷಿಯನ್ ವಾಲ್ ಹಾಗೂ ಅಪಾರ್ಟ್ಮೆಂಟ್ ಗಳನ್ನು ಕಟ್ಟಿದ್ದಾರಲ್ಲ ಅದೆಲ್ಲಾ ಯಾರ ಆಸ್ತಿ. ಇದೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಿಗೆ ಸೇರಿದ ಆಸ್ತಿ ಅಲ್ಲವೇ? ಹೀಗಿರುವಾಗ ಬೇರೆಯವರ ಬಗ್ಗೆ ಮಾತನಾಡಲು ಜೂನಿಯರ್ ಖರ್ಗೆಗೆ ಯಾವ ನೈತಿಕತೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಉಳಿದಂತೆ ಗುಲ್ಬರ್ಗ ಜಿಲ್ಲೆಯಲ್ಲಿ ಕಮರುಲ್ಲಾ ಇಸ್ಲಾಂ, ಮಾಜಿ ಸಂಸದ ಇಕ್ಬಾಲ್ ಅಹಮದ್ ಸರದಗಿ, ಸಿ.ಎಂ. ಇಬ್ರಾಹಿಂ, ಮಾಜಿ ಸಂಸದ ರೆಹಮಾನ್ ಖಾನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಜಿ ಸಂಸದ ಆರ್. ರೆಹವಾನ್ ಖಾನ್, ಶಾಂತಿನಗರ ಶಾಸಕ ಹ್ಯಾರೀಸ್ ಅವರ ಪತ್ನಿ ತಾಹೇರಾ, ದಿ. ಜಾಫರ್ ಷರೀಫ್, ರೋಷನ್ ಬೇಗ್ ಮುಂತಾದವರು ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಿರುವ ಬಗ್ಗೆ ದಾಖಲೆಗಳನ್ನು ನೀಡಲಾಗಿದೆ ಎಂದರು. ಅಜೀಜ್ ಸೇಠ್ ಕೂಡ ಕಬಳಿಸಿದ್ದಾರೆಮೈಸೂರಿನಲ್ಲಿ ಕೂಡ ವಕ್ಛ್ ಆಸ್ತಿ ಕಬಳಿಕೆ ಆಗಿದೆ. ಮಾಜಿ ಸಚಿವ ದಿ. ಅಜೀಜ್ ಸೇಠ್ ಅವರು ಹಾಗೂ ಅವರ ಪುತ್ರ ಹಾಲಿ ಶಾಸಕ ತನ್ವೀರ್ ಸೇಠ್ ಸಹ ಕಬಳಿಕೆ ಮಾಡಿದ್ದಾರೆ ಎಂದರು.ನಗರದ ಸಯ್ಯಾಜಿರಾವ್ ರಸ್ತೆಯ ಗೌಸಿಯಾ ಮಂಜಿಲ್, ಅಫ್ ನಾಘರ್, ರಿಫಾ ವಾಣಿಜ್ಯ ಸಂಕೀರ್ಣಗಳು ಹಾಗೂ ಅಕ್ಬರ್ ರಸ್ತೆಯಲ್ಲಿನ ಮಜೀದ್ ಎ ಬಗ್ಟಾನ್ ಎದುರಿರುವ ಖಾಲಿ ಜಾಗವನ್ನು ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಂತೋಷ್ ಇದ್ದರು.