ಕುಕನೂರು: ಬಿಜೆಪಿ ಸಂಘಟನೆಯೇ ನನ್ನ ಉಸಿರು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನವೀನ ಗುಳಗಣ್ಣವರ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ನವೀನ ಗುಳಗಣ್ಣವರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಬಂಜಾರ ಸಮಾಜದ ಪ್ರಮುಖರಿಂದ ಜರುಗಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ತನ್ನದೇ ಆದ ಸ್ಥಾನವಿದೆ. ಪಕ್ಷ ಸಂಘಟನೆಯೇ ನನ್ನವುಸಿರು. ಪ್ರತಿ ಕ್ಷಣ ಬಿಜೆಪಿ ಪಕ್ಷದ ಹಿರಿಮೆ ಹೆಚ್ಚಿಸಲು ಕಾರ್ಯ ಮಾಡುತ್ತೇನೆ. ಜಿಲ್ಲೆಯಲ್ಲಿ ಹಲವಾರು ಹಿರಿಯರು ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನ ಹಾಗೂ ಪಕ್ಷದ ತತ್ವ, ಸಿದ್ಧಾಂತ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ ಎಂದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಮಾಜಿ ಶಾಸಕ ದಿ. ಈಶಣ್ಣ ಗುಳಗಣ್ಣನವರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಮಹತ್ತರ ಕಾರ್ಯ ಮಾಡಿದರು. ಅವರ ಪುತ್ರ ನವೀನ ಗುಳಗಣ್ಣವರಿಗೆ ಎರಡನೇ ಬಾರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಹೆಮ್ಮೆ ಸಂಗತಿ ಎಂದರು.

ಈ ಸಂದರ್ಭದಲ್ಲಿ ಇಂದ್ರಜಿತ ನಾಯಕ, ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪೂರ, ಹನಮಂತ ಚವ್ಹಾಣ, ಮಹೇಶ ಕಾರಭಾರಿ, ಚೇತನ ಬಳಗೇರಿ, ಶ್ರೀನಿವಾಸ ಚಿಕೆನಕೊಪ್ಪ, ನಾರಾಯಣಪ್ಪ ಕಟ್ಟಿಮನಿ, ಸೋಮಪ್ಪ ಕಾರಭಾರಿ, ವಿಶ್ವನಾಥ ಬಳಗೇರಿ, ವೆಂಕಟೇಶ ಕಾರಭಾರಿ, ಪವನ ಕಾರಭಾರಿ, ರವಿ ಕಟ್ಟಿಮನಿ, ಹನಮಂತ ಬಳಗೇರಿ, ಪ್ರಕಾಶ ಬೋರಣ್ಣವರ, ಸೋಮನಗೌಡ ಇನ್ನಿತರರಿದ್ದರು.