ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನನ್ನನ್ನು ಜಿಲ್ಲಾಧ್ಯಕ್ಷನಾಗಿ ನೇಮಕ ಮಾಡಿದ್ದು, ನಾನು ಕಾರ್ಯಕರ್ತರ ಶಕ್ತಿಯೊಂದಿಗೆ ಕಾರ್ಯಕರ್ತನಾಗಿ ಕೆಲಸ ಮಾಡುವೆ. ಪಕ್ಷದ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವೆ. ಸಮರ್ಥವಾಗಿ ನಿಭಾಯಿಸುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ರಾಜ್ಯ ಮುನ್ನಡೆಸುವ ನಾಯಕನಿಗೆ ಅಧಿಕಾರ ಕೊಟ್ಟಿದ್ದಾರೆ. ನನಗೆ ಜಿಲ್ಲಾಧ್ಯಕ್ಷವನ್ನು ಸ್ಥಾನವು ಒದಗಿಸಿಕೊಟ್ಟಿದ್ದಾರೆ. ಈ ಹಿಂದೆ ರೈತರಿಗಾಗಿ ನಾವು ಕಲಾಲಬಂಡಿಯಿಂದ ಕೊಪ್ಪಳದವರೆಗೂ ಪಾದಯಾತ್ರೆ ಮಾಡಿದೆವು. ನಮಗೆ ಕಾರ್ಯಕರ್ತರ ಪಡೆ ಇದೆ. ನಮ್ಮ ಪಕ್ಷದ ಹಿರಿಯರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿದ ಫಲವಾಗಿ ಇಂದು ಅಧಿಕಾರ ಒದಗಿದೆ ಎಂದರು.2013ರಲ್ಲಿ ಕೃಷ್ಣಾ ನಡಿಗೆ ಕಾರ್ಯಕ್ರಮದಲ್ಲಿ ನೀರಾವರಿಗೆ ₹10 ಸಾವಿರ ಕೋಟಿ ಕೊಡುವೆವು ಎಂದು ಹೇಳಿದ್ದರು. ಕಾಂಗ್ರೆಸ್ಸಿಗರುಏನು ಕೊಟ್ಟಿಲ್ಲ. ಕೊಪ್ಪಳ ಜಿಲ್ಲೆಗೆ ಆಗಿರುವ ಅನ್ಯಾಯ ಸಹಿಸಲ್ಲ. ಸರ್ಕಾರ ಅನ್ಯಾಯ ಮಾಡಿದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದರು.ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ಬಿಜೆಪಿ ಕಚೇರಿ ಕಾರ್ಯಕರ್ತರಿಂದ ನಡೆಯಬೇಕು. ಇದು ಅಧ್ಯಕ್ಷ ಮಾಜಿ ಶಾಸಕರಿಂದ ನಡೆಯಬಾರದು. ಇದು ಸ್ವಾಭಿಮಾನದ ಕಾರ್ಯಾಲಯವಾಗಿದೆ ಎಂದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದರು.ಮೋದಿ ದೇಶದ ಜನರಿಗೆ ಸ್ವಾಭಿಮಾನ ಕೊಟ್ಟಿದ್ದಾರೆ. ಕೋವಿಡ್ ವೇಳೆ ಲಸಿಕೆ ಕೊಟ್ಟು ಜನರನ್ನು ಉಳಿಸುವ ಕಾರ್ಯವನ್ನು ಮಾಡಿದ್ದಾರೆ. ಗ್ರಾಮ್ ಚಲೋ ಮಂಡ್ಯದಿಂದ ಚಾಲನೆ ದೊರೆಯುತ್ತದೆ. ಮೋದಿ ಚಾಲನೆ ನೀಡುವರು. ಗ್ರಾಮದ ಅಕ್ಕ ಪಕ್ಕದಲ್ಲಿ 24 ಗಂಟೆ ಅಲ್ಲಿಯೇ ಉಳಿದು ಸಮಸ್ಯೆ ಆಲಿಸಬೇಕು ಎಂದರು.ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳದಲ್ಲಿ ಬಿಜೆಪಿಗೆ ಯುವ ನಾಯಕತ್ವ ಕೊಟ್ಟಿದೆ. ಅವರು ರಾಜಕೀಯ ಕುಟುಂಬದಿಂದ ಬಂದಿರುವ ನಾಯಕ. ಸಂಸ್ಕಾರದಿಂದ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು. ಹಿಂದುತ್ವ ಮೊದಲು ಕಟ್ಟಿದವರು ಶಿವಾಜಿಯವರು. ದೊಡ್ಡ ವಿಚಾರದಿಂದ ರಾಷ್ಟ್ರ ಕಟ್ಟಲು ಆಗುವುದಿಲ್ಲ. ಸಣ್ಣ ವಿಚಾರದಿಂದ ರಾಷ್ಟ್ರ ಕಟ್ಟಲು ಸಾಧ್ಯವಿದೆ ಎಂದರು.ಭಾರತದಲ್ಲಿ 25 ಕೋಟಿ ಜನ ಬಡತನದಿಂದ ಹೊರಗೆ ಬಂದಿವೆ. ಲೋಕಸಭಾ ಚುನಾವಣೆ 400 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಎಂದರು. ರಾಜ್ಯದಲ್ಲಿ ಮತ್ತೆ 28 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದರು.ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ನವೀನ್ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಅವರ ಮೇಲಿದೆ. ನವೀನ್ ಅವರ ತಂದೆ ನಮ್ಮನ್ನು ಬಿಜೆಪಿಗೆ ಕರೆ ತಂದರು ನವೀನ್ ಅವರ ತಂದೆ ಹಾದಿಯಲ್ಲಿ ನಡೆಯಬೇಕು ಎಂದರು.ಮಾಜಿ ಸಚಿವ ಹಾಲಪ್ಪ ಆಚಾರ್, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.ಸಮಾರಂಭದಲ್ಲಿ ಎಂಎಲ್ಸಿ ಹೇಮಲತಾ ನಾಯಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣು ತಳ್ಳುಕೇರಿ, ಬಿಜೆಪಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಹಲಗೇರಿ, ಸಂಘಟನಾ ಕಾರ್ಯದರ್ಶಿ ಭೂಜಪ್ಪ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ನರಸಿಂಹರಾವ್ ಕುಲಕರ್ಣಿ, ಮಂಜುಳಾ ಕರಡಿ, ಬಸವಲಿಂಗಪ್ಪ ಭೂತೆ ಇದ್ದರು.
ಬಿಜೆಪಿ ಪಕ್ಷ ಕೊಟ್ಟ ಕೆಲಸವನ್ನು ಸಮರ್ಥನಾಗಿ ನಿಭಾಯಿಸುವೆ: ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್
ಕೊಪ್ಪಳದಲ್ಲಿ ಬಿಜೆಪಿಗೆ ಯುವ ನಾಯಕತ್ವ ಕೊಟ್ಟಿದೆ. ಅವರು ರಾಜಕೀಯ ಕುಟುಂಬದಿಂದ ಬಂದಿರುವ ನಾಯಕ. ಸಂಸ್ಕಾರದಿಂದ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು. ಹಿಂದುತ್ವ ಮೊದಲು ಕಟ್ಟಿದವರು ಶಿವಾಜಿಯವರು. ದೊಡ್ಡ ವಿಚಾರದಿಂದ ರಾಷ್ಟ್ರ ಕಟ್ಟಲು ಆಗುವುದಿಲ್ಲ. ಸಣ್ಣ ವಿಚಾರದಿಂದ ರಾಷ್ಟ್ರ ಕಟ್ಟಲು ಸಾಧ್ಯವಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.