ಸೈನಿಕರ ಮನೋಸ್ಥೈರ್ಯಕ್ಕೆ ಪ್ರಾರ್ಥಿಸಿ ಬಿಜೆಪಿಯಿಂದ ವಿಜಯ ಸಿದ್ಧಿ ವಿಶೇಷ ಪೂಜೆ

| Published : May 10 2025, 01:04 AM IST

ಸೈನಿಕರ ಮನೋಸ್ಥೈರ್ಯಕ್ಕೆ ಪ್ರಾರ್ಥಿಸಿ ಬಿಜೆಪಿಯಿಂದ ವಿಜಯ ಸಿದ್ಧಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ನಮ್ಮ ಸೈನಿಕರು ಶತ್ರು ದೇಶದ ವಿರುದ್ಧ ವಿಜಯಿಗಳಾಗಲಿ ಎಂದು ಪ್ರಾರ್ಥಿಸಿದರು.

ಹಾವೇರಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಯೋಧರ ಮನೋಸ್ಥೈರ್ಯ ಹೆಚ್ಚಿಸಲು, ಅವರ ರಕ್ಷಣೆಗಾಗಿ ಹಾಗೂ ಕಾರ್ಯಾಚರಣೆಯಲ್ಲಿ ವಿಜಯ ಸಾಧಿಸುವಂತೆ ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಗಜಾನನ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ನಮ್ಮ ಸೈನಿಕರು ಶತ್ರು ದೇಶದ ವಿರುದ್ಧ ವಿಜಯಿಗಳಾಗಲಿ ಎಂದು ಪ್ರಾರ್ಥಿಸಿದರು.

ಹಾವೇರಿಯ ಗಜಾನನ ದೇವಸ್ಥಾನದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಸಂತೋಷ ಆಲದಕಟ್ಟಿ, ನಾಗೇಂದ್ರ ಕಡಕೋಳ, ಸುರೇಶ ಹೊಸಮನಿ, ಗಿರೀಶ ತುಪ್ಪದ, ಪ್ರಕಾಶ ವಜನಕೊಪ್ಪ, ಗುಡ್ಡಪ್ಪ ಭರಡಿ, ಲಲಿತಾ ಗುಂಡನಹಳ್ಳಿ, ಚೆನ್ನಮ್ಮ ಬ್ಯಾಡಗಿ, ಪುಷ್ಪಲತಾ ಚಕ್ರಸಾಲಿ, ರಾಜು ಹರಿಗೋಲ್, ಶಂಭುಲಿಂಗಪ್ಪ ಹತ್ತಿ, ಮಂಜುನಾಥ ತಾಂಡೂರ, ಬಸವರಾಜ ಹಾಲಪ್ಪನವರ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರ ಜಿಲ್ಲಾ ಘಟಕ, ತಾಲೂಕು ಘಟಕದ ಅನೇಕ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದುರ್ಗಾದೇವಿಗೆ ಪೂಜೆ: ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ನಮ್ಮ ಸೈನಿಕರು ವಿಜಯಶಾಲಿಯಾಗಲೆಂದು ವಿಜಯಸಿದ್ಧಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಮಂಡಲ ಅಧ್ಯಕ್ಷರಾದ ಶಿವಕುಮಾರ ತಿಪ್ಪಶೆಟ್ಟಿ, ಮುಖಂಡರಾದ ಪರಮೇಶಪ್ಪ ಹಲಗೇರಿ, ದುರಗೇಶ್ ತೀರಕಪ್ಪನವರ, ಲಕ್ಷ್ಮಣ ಪೂಜಾರ್, ಜಗದೀಶ್ ದೊಡ್ಡಗೌಡರ, ಚನ್ನಬಸಪ್ಪ ಮಾಳಗಿ, ಬಸವರಾಜ ಅರಕೇರಿ, ಉಮೇಶ್ ಬಣಕಾರ್, ಹುಚ್ಚಪ್ಪ ಚೌಟಗಿ, ಪ್ರವೀಣ್ ತಳವಾರ, ಜೀತೇಂದ್ರ ಅಂಗಡಿ, ಶಂಕರನಾಯಕ ಲಮಾಣಿ, ನಾಗರಾಜ ರಾಯನಗೌಡ್ರ, ಚಂದ್ರು ಸುಣಗಾರ, ನಾಗರಾಜ ಬಣಕಾರ್ ಇತರರು ಇದ್ದರು.

ಭಾರತೀಯ ಯೋಧರ ಗೆಲುವಿಗಾಗಿ ರಾಣಿಬೆನ್ನೂರಿನ ಗ್ರಾಮದೇವತೆ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ವಿಶೇಷ ಪೂಜೆ ಸಲ್ಲಿಸಿದರು.ಯೋಧರ ಚೈತನ್ಯಕ್ಕಾಗಿ ವಿಶೇಷ ಪೂಜೆ

ರಾಣಿಬೆನ್ನೂರು: ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ 26 ಪ್ರವಾಸಿಗರ ಪ್ರತೀಕಾರವಾಗಿ ಭಾರತವು ನಡೆಸುತ್ತಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಹೆಮ್ಮೆಯ ಭಾರತೀಯ ಯೋಧರ ಗೆಲುವಿಗಾಗಿ ನಗರದ ಗ್ರಾಮದೇವತೆ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರಳು ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದು, ಹಿಂದೂ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸುವ ದುಸ್ಸಾಹಸ ಮಾಡಿದ ಭಯೋತ್ಪಾದಕರ ನರಮೇಧಕ್ಕೆ ನಾಂದಿ ಹಾಡಿದ್ದಾರೆ.ಜಗತ್ತಿನಲ್ಲಿಯೇ ಬಲಿಷ್ಠ ಭದ್ರತಾ ಪಡೆ ಹೊಂದಿರುವ ಭಾರತೀಯ ಸೇನೆಗೆ ಸರ್ವ ರೀತಿಯಲ್ಲೂ ಗೆಲುವಾಗಲಿ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿ. ಭಾರತವು ಉಗ್ರರ ಅಟ್ಟಹಾಸದಿಂದ ಕೊನೆಗೊಳ್ಳಲಿ. ಯೋಧರಿಗೆ ಅಯುಷ್ಯ, ಅರೋಗ್ಯ ದಯಪಾಲಿಸಲಿ. ಅವರಿಗೆಗೆ ಹೆಚ್ಚಿನ ಧೈರ್ಯ, ಶಕ್ತಿ, ಚೈತನ್ಯ ನೀಡಲಿ ಎಂದು ಚೌಡೇಶ್ವರಿ ದೇವಿಯಲ್ಲಿ ಪೂಜಾರ ಪ್ರಾರ್ಥಿಸಿದರು.