ಇಂಧನ ಬೆಲೆ ಏರಿಕೆ ಖಂಡಿಸಿ ಹಿರೇಕೆರೂರಿನಲ್ಲಿ ಬಿಜೆಪಿ ಪ್ರತಿಭಟನೆ

| Published : Jun 21 2024, 01:04 AM IST

ಇಂಧನ ಬೆಲೆ ಏರಿಕೆ ಖಂಡಿಸಿ ಹಿರೇಕೆರೂರಿನಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹಿರೇಕೆರೂರು ಬಿಜೆಪಿ ಮಂಡಲದ ವತಿಯಿಂದ ಗುರುವಾರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿರೇಕೆರೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹಿರೇಕೆರೂರು ಬಿಜೆಪಿ ಮಂಡಲದ ವತಿಯಿಂದ ಗುರುವಾರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆಯಾಗಿದೆ. ಬಿತ್ತನೆ ಬೀಜಗಳ ದರಗಳನ್ನು ಹೆಚ್ಚಿಗೆ ಮಾಡಿದ್ದೀರಿ, ಈಗಾಗಲೇ ಅನೇಕ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಕೂಡಲೇ ಬೆಲೆ ಕಡಿಮೆ ಮಾಡಬೇಕು. ಸರ್ಕಾರ ಬಂದು ಒಂದು ವರ್ಷ ಎರಡು ತಿಂಗಳು ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ಅಗಿಲ್ಲ. ಸರ್ಕಾರ ಭಾಗ್ಯಗಳಿಗೆ ಕಾಳಜಿ ವಹಿಸದೇ ಜನರ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ. ಎಮ್. ಸಾಲಿ, ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಕಲಾಲ, ಗುರುಶಾಂತ ಯತ್ತಿನಹಳ್ಳಿ, ಮುಖಂಡರಾದ ದುರಗೇಶ್ ತೀರಕಪ್ಪನವರ, ಪ್ರಕಾಶ್ ಗೌಡರ ಮಾತನಾಡಿದರು. ಈ ಪ್ರತಿಭಟನೆಯಲ್ಲಿ ನಿಂಗಾಚಾರ ಮಾಯಾಚಾರ, ಮನೋಹರ್ ವಡ್ಡಿನಕಟ್ಟಿ, ಜಗದೀಶ್ ದೊಡ್ಡಗೌಡರು, ರುದ್ರೇಶ್ ಬೆತುರ್, ಹುಚ್ಚಣ್ಣ ಚೌಟಗಿ, ಉಮೇಶ್ ಬಣಕಾರ್, ಬಸವರಾಜ್ ಅರಕೇರಿ, ಶಂಕರನಾಯಕ್ ಲಮಾಣಿ, ರಾಜು ಕಾರಗಿ, ಹನುಮಂತಪ್ಪ ಕುರಬರ, ಗೋಪಾಲ ಲೆಕ್ಕಪ್ಪಳವರ್, ಬಸವರಾಜ ಚಿಂದಿ, ಈರಣ್ಣ ಚಿತ್ತೂರು, ಪ್ರಸನ್ನ ಜಾಡಬಂಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.