ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಪ್ರತಿಭಟನೆ

| Published : Jul 06 2025, 01:48 AM IST

ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಕುಪ್ಪೆಟ್ಟಿ -ಕಲ್ಲೇರಿ - ಉಪ್ಪಿನಂಗಡಿ ತನಕ ರಸ್ತೆ ಅವ್ಯವಸ್ಥೆ ಹಾಗೂ ರಾಜ್ಯ ಸರ್ಕಾರ ಬೇಗ ಅನುದಾನ ನೀಡಿ ರಸ್ತೆ ಸರಿ ಪಡಿಸುವಂತೆ ಆಗ್ರಹಿಸಿ ಕಲ್ಲೇರಿ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರಿಗೆ ಆರು ಭಾರಿ ಮನವಿ ಮಾಡಿದರೂ ಒಂದು ರುಪಾಯಿ ಅನುದಾನ ಈ ರಸ್ತೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ. ವಾಣಿಜ್ಯ, ಶೈಕ್ಷಣಿಕ, ಸಹಿತ ಹಲವಾರು ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ ಎಂದು ಅನುದಾನ ನೀಡಲು ಸತತ ಬೇಡಿಕೆ ಮಾಡಿದ್ದೇನೆ. ಆದಾಗ್ಯೂ ನಮ್ಮ ಕೂಗೂ ಸರ್ಕಾರದ ಕಿವಿಗೆ ಬೀಳದೆ ನಿರ್ಲಕ್ಷ್ಯ ನೀತಿ ಅನಾವರಣಗೊಳ್ಳುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಕುಪ್ಪೆಟ್ಟಿ -ಕಲ್ಲೇರಿ - ಉಪ್ಪಿನಂಗಡಿ ತನಕ ರಸ್ತೆ ಅವ್ಯವಸ್ಥೆ ಹಾಗೂ ರಾಜ್ಯ ಸರ್ಕಾರ ಬೇಗ ಅನುದಾನ ನೀಡಿ ರಸ್ತೆ ಸರಿ ಪಡಿಸುವಂತೆ ಆಗ್ರಹಿಸಿ ಕಲ್ಲೇರಿ ಪೇಟೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಪದ್ಮುಂಜ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ ಪೊರ್ಕಳ, ಕಣಿಯೂರು ಗ್ರಾ.ಪಂ.ಅಧ್ಯಕ್ಷ ಸೀತರಾಮ ಮಡಿವಾಳ, ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಗೌಡ ಖಡಿಂಗ, ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕರಾದ ಸುನಿಲ್ ಅಣಾವು, ಜಯಂತಿ ಪಾಲೇದು, ಪದ್ಮುಂಜ ಪ್ಯಾಕ್ಸ್ ಉಪಾಧ್ಯಕ್ಷ ಅಶೋಕ್ ಪಾಂಜಳ, ನಿರ್ದೇಶಕ ಉದಯ್ ಬಿ.ಕೆ, ಇಳಂತಿಲ ಗ್ರಾ.ಪಂ,.ಸದಸ್ಯ ತಿಮ್ಮಪ್ಪ ಗೌಡ, ತಣ್ಣೀರುಪಂತ ಗ್ರಾ.ಪಂ.ಸದಸ್ಯ ಸಾಮ್ರಾಟ್ ಕರ್ಕೇರ ಹಾಗೂ ಅನಿಲ್ ಪಾಲೇದು ಸಹಿತ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸೀತರಾಮ ಬೆಳಾಲು ಸ್ವಾಗತಿಸಿ, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕ ಪ್ರಭಾಕರ ಗೌಡ ವಂದಿಸಿ, ಕಣಿಯೂರು ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ ನಿರೂಪಿಸಿದರು.ಉಪ್ಪಿನಂಗಡಿ ಪೊಲೀಸ್ ಠಾಣೆಯ ತನಿಖಾ ವಿಭಾಗದ ಎಸ್‌ಐ ಗೋಪಿನಾಥ್ ಭದ್ರತೆ ನೀಡಿದರು.