16ಕ್ಕೆ 2ನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ

| Published : Apr 13 2025, 02:05 AM IST

ಸಾರಾಂಶ

ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರ ನೀತಿ ವಿರುದ್ಧ ಎರಡನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ಏ.16 ರಂದು ಬೆಳಗಾವಿಯಿಂದ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರ ನೀತಿ ವಿರುದ್ಧ ಎರಡನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ಏ.16 ರಂದು ಬೆಳಗಾವಿಯಿಂದ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಬೆಳಗಾವಿಯಲ್ಲಿ ಈ ಯಾತ್ರೆ ಆರಂಭವಾಗಲಿದೆ. ಬಳಿಕ ಹುಬ್ಬಳ್ಳಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ, ನಾರಾಯಣಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಹಾಲಿ ಮತ್ತು ಮಾಜಿ ಶಾಸಕರೊಂದಿಗೆ ಸಭೆ ನಡೆಸಲಾಗಿದೆ ಎಂದರು.ಮಸೀದಿಗಳಿಗೆ ಮದರಸಾಗಳಿಗೆ ಹಣ ಕೊಡಲಾಗುತ್ತಿದೆ. ಅಲ್ಲಾ ಹು ಅಕ್ಬರ್ ಎಂದು ಪೂಜೆ ಮಾಡುವ ಇಮಾಮಿಗಳಿಗೆ ₹6 ಸಾವಿರ ಕೊಡಲಾಗುತ್ತಿದೆ. ನಮ್ಮ ಪೂಜಾರಿಗಳಿಗೆ ₹1 ಕೊಡುತ್ತಿಲ್ಲ. ಮುಸ್ಲಿಂ ನವದಂಪತಿಗಳಿಗೆ ₹50 ಸಾವಿರ ಕೊಡಲಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ಅಸಹ್ಯ ಹುಟ್ಟಿಸುತ್ತಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ರಾಜ್ಯದಲ್ಲಿ ನಡೆಯುತ್ತಿದೆ. ವಿದೇಶಕ್ಕೆ ಓದಲು ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ₹30 ಲಕ್ಷ ಹಣ ಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾತಿ ಗಣತಿಯ ಕುರಿತು ಚರ್ಚೆ ಆಗುತ್ತಿದೆ. ಅಂಕಿ ಅಂಶಗಳನ್ನು ಮಂತ್ರಿಗಳಿಗೆ ಕೊಡಲಾಗುತ್ತದೆ. ನಂತರ ಇದನ್ನು ಜಾರಿಗೊಳಿಸುವ ಕುರಿತು ಯೋಚನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 2013ರಲ್ಲಿ ಈ ಜಾತಿಗಣತಿ ಆಗಿದೆ, ಲಕ್ಷಾಂತರ ಮನೆಗಳಿಗೆ ಹೋಗಿಲ್ಲ. ನನ್ನ ಮನೆಗೂ ಬಂದಿಲ್ಲ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸರ್ವೆ ಎಂದು ಪರಿಗಣಿಸೋದು ಎಂದು ಪ್ರಶ್ನಿಸಿದರು.ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಜಾತಿ ಗಣತಿ ಬಗ್ಗೆ ಕಾಂಗ್ರೆಸ್ಸಿನವರಿಗೆ ಅಸಮಾಧಾನ ಇದೆ. ಸರ್ಕಾರ ಒಂದು ವಾರ ವಿಶೇಷ ಸದನ ಕರೆಯಲಿ. ಇದರ ಕುರಿತು ವಿಸ್ತೃತ ಚರ್ಚೆ ಮಾಡೋಣ ಎಂದು ಆಗ್ರಹಿಸಿದರು.ಗ್ಯಾರಂಟಿ ಹೆಸರಲ್ಲೇ ಲೂಟಿ:

ರಾಜ್ಯದಲ್ಲಿ ಬೆಲೆ ಏರಿಕೆಯ ದಾಳಿಯೇ ಆಗುತ್ತಿದೆ. ಮೂರು ಮೂರು ಬಾರಿ ಹಾಲಿದ ದರ ಏರಿಕೆ ಮಾಡಲಾಗಿದೆ. ರೈತರಿಗೆ ಕೊಡುತ್ತೇವೆ ಎಂದು ಹೇಳಿ ರೈತರಿಗೆ ಒಂದು ರು. ಕೊಟ್ಟಿಲ್ಲ. ನಮ್ಮ ರಾಜ್ಯದ ಅನುಭವಿ ರಾಜಕಾರಣಿ, ನಾನು ದೇವರಾಜ್ ಅರಸ್ ಅಂತ ಹೇಳುವ ಸಿದ್ದರಾಮಯ್ಯ ₹ 9 ಹಾಲಿನ ದರವನ್ನು ಹೆಚ್ಚಳ‌ ಮಾಡಿದರು. ಇದರಿಂದ ಹಾಲಿನ ಉಪ ಉತ್ಪನ್ನಗಳ ಬೆಲೆಯೂ ಜಾಸ್ತಿಯಾಗಿದೆ. ಕರ್ನಾಟಕದಲ್ಲಿ ಕಸದ ಮೇಲೂ ಸಹ ಟ್ಯಾಕ್ಸ್ ‌ಹಾಕಲಾಗುತ್ತಿದೆ ಎಂದು ಆರೋಪಿಸಿದರು.ನೀರಿನ ಮೇಲೂ ಟ್ಯಾಕ್ಸ್ ಹಾಕಲಾಗುತ್ತಿದೆ. ತೆರಿಗೆ ಹಾಗೂ ಬೆಲೆ ಏರಿಕೆಯ ದಾಳಿ ಕರ್ನಾಟಕದಲ್ಲಿ ನಡೆಯುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಮನೆಯ ತೆರಿಗೆಯ ಲೂಟಿ ಆಗುತ್ತಿದೆ ಎಂದು ದೂರಿದರು.ಮದ್ಯದ ಬೆಲೆ ದುಪ್ಪಟ್ಟು ಆಗಿದೆ. ₹42 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡುವ ಟಾರ್ಗೆಟ್ ನೀಡಲಾಗಿದೆ. ಬಸ್ ಪ್ರಯಾಣ, ಮುದ್ರಾಂಕ ಶುಲ್ಕ ಸೇರಿದಂತೆ 48 ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ₹20 ಸ್ಟಾಂಪ್ ಡ್ಯೂಟಿ ₹100 ಹೆಚ್ಚಳ ಮಾಡಿದ್ದಾರೆ. ಇದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ₹11,400 ಕೋಟಿ ಎಸ್ಸಿ, ಎಸ್ಟಿ ಹಣವನ್ನು ತೆಗೆಯಲಾಗಿದೆ. ₹38 ಸಾವಿರ ಕೋಟಿ ಸರ್ಕಾರ ತೆಗೆದುಕೊಂಡಿದೆ. ಅವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ ಎಂದರು.ಬೆಳಗಾವಿಯಲ್ಲಿ ಮರಳು ದಂಧೆ:

ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮವಾದಿ ಮರಳು, ಮಟ್ಕಾ ದಂಧೆ ಅಧಿಕವಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲ. ಅಭಿವೃದ್ಧಿ ಆಗುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ಮಟ್ಕಾ ದಂಧೆ ಜೋರಾಗಿದೆ. ಬೆಳಗಾವಿಯಲ್ಲಿ ಪೆಟ್ರೋಲ್ ದಂಧೆ ಜೋರಾಗಿಯೇ ನಡೆಯುತ್ತಿದೆ. ಪೊಲೀಸರಿಗೆ ಇದು ಗೊತ್ತಿದ್ದು ಸುಮ್ಮನಿದ್ದಾರಾ ಎಂದು ಪ್ರಶ್ನಿಸಿದ ಅವರು, ಪೆಟ್ರೋಲ್‌, ಡೀಸೆಲ್‌ ಅನ್ನು ಅರ್ಧ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಲಪ್ರಭಾ ನದಿಯ ದಡದಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸರ್ಕಾರ ಕಣ್ಣಿದ್ದೂ ಕರುಡಾಗಿ ಬುದ್ಧಿ ಇದ್ದು ಭ್ರಮಣೆಯಾದಂತಿದೆ. ಬಸವರಾಜ್ ರಾಯರೆಡ್ಡಿಯವರು ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಟೇಟ್ ಆಗಿದೆ ಅಂತ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರದಿಂದ ಸಿಲಿಂಡರ್, ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಆಯಿತೆಂಬ ವಿಚಾರವಾಗಿ ಮಾತನಾಡಿ, ಅದು‌ ಕಂಪನಿಗಳ ಮೇಲೆ ಮಾತ್ರ ಹೊರೆಯಾಗಿದೆ. ಜನರ ಮೇಲೆ ಹೊರೆಯಾಗಿಲ್ಲ. ಗ್ಯಾಸ್ ಬೆಲೆ ₹1003 ಇತ್ತು. ಅದನ್ನು ₹ 800 ಗೆ ಕಡಿಮೆ ಮಾಡಲಾಯಿತು. ಸದ್ಯ ₹ 50 ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ರವಿಕುಮಾರ ಸಮರ್ಥಿಸಿಕೊಂಡರು.ಈ ವೇಳೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಮುರಘೇಂದ್ರಗೌಡ ಪಾಟೀಲ ಉಪಸ್ಥಿತರಿದ್ದರು.