ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಮಂದಿ ಹಿಂದೂಗಳನ್ನು ಹತ್ಯೆ ಮಾಡಿದ ಘಟನೆಗೆ ಪ್ರತಿಕಾರವಾಗಿ ಭಾರತ ಸೇನೆಯು ಪಾಕಿಸ್ತಾನದ ೪ ಭಾಗಗಳಲ್ಲಿ ಹಾಗೂ ಪಾಕ್ ಆಕ್ರಮಿತಿ ಕಾಶ್ಮೀರದ ವ್ಯಾಪ್ತಿಯ ೫ ಕಡೆಗಳಲ್ಲಿ ಭಯೋತ್ಪಾದಕರ ೯ ನೆಲೆಗಳ ಮೇಲೆ ದಾಳಿ ಮಾಡಿ ೧೦೦ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹೇಳಿದರು.ನಗರದ ಸರ್ಕಾರಿ ಬಾಲಕರ ಕಾಲೇಜು ಬಳಿ ಜನಾಕೋಶದ ೪ ಹಂತದ ಮೊದಲನೇ ಹಂತದ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ೨೬ ಮಂದಿ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿರುವ ಪಾಪಿ ಪಾಕಿಸ್ತಾನದ ಉಗ್ರರರ ವಿರುದ್ದ ಪ್ರತಿಯೋರ್ವ ಭಾರತಿಯರಲ್ಲೂ ರಕ್ತ ಕುದಿಯುತ್ತಿದೆ, ಸೇನೆ ಯಾವಾಗ ತಕ್ಕ ಪಾಠ ಕಲಿಸುತ್ತೇವೆ ಎಂಬ ಕಾತುರದಲ್ಲಿದ್ದರು ಎಂದರು.ಉಗ್ರರ ಹುಡುಕಿ, ಹುಡುಕಿ ಹತ್ಯೆ
ಈ ದುರ್ಘಟನೆ ನಡೆಸಿದ ಲಷ್ಕರ ತೊಯಿಬಾ ಭಯೋತ್ಪಾದಕರ ಸಂಘಟನೆ ಸೇರಿದಂತೆ ಯಾವುದೇ ಸಂಘಟನೆಗಳಾಗಿದ್ದರೂ ಬಿಡುವ ಮಾತಿಲ್ಲ, ಭಯೋತ್ಪಾಧಕರು ಎಲ್ಲೇ ಅಡಗಿದ್ದರೂ ಹುಡುಕಿ...ಹುಡುಕಿ... ಹತ್ಯೆ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಘೋಷಿಸಿದಂತೆ ಇಂದು ಬೆಳಗಿನ ಜಾವ ಉಗ್ರರ ತಾಣಗಳಿಗೆ ಭಾರತದ ಸೇನೆಯನ್ನು ನುಗ್ಗಿಸಿ ದಾಳಿ ಮಾಡಿಸುವ ಮೂಲಕ 100ಕ್ಕೂ ಹೆಚ್ಚು ಮಂದಿ ಉಗ್ರರನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದರು. ನಾವೆಲ್ಲಾ ಕೋಲಾರಮ್ಮ ದೇವರಲ್ಲಿ ಭಾರತದ ಯೋಧರ ಪರವಾಗಿ ಒಟ್ಟಾಗಿ ನೈತಿಕ ಶಕ್ತಿ ತುಂಬಲು ಪ್ರಾರ್ಥಿಸೋಣಾ, ಪ್ರಧಾನಿ ಮೋದಿರಿಗೆ ಎಲ್ಲಾ ರಾಷ್ಟ್ರಗಳು ಶಕ್ತಿ ತುಂಬಬೇಕು ಉಗ್ರಾಗಾಮಿಗಳನ್ನು ಬುಡ ಸಮೇತ ಕಿತ್ತೊಗೆಯಲು ಶಕ್ತಿ ನೀಡಲು ಪ್ರಾರ್ಥಿಸೋಣ ಎಂದು ಕರೆ ನೀಡಿದರು. ಈಗ ರಾಜಕೀಯ ಬೇಡಬಡಜನರ ಮತ್ತು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಕ್ರೋಶ ಪ್ರತಿಭಟನೆ ರಾಜ್ಯಾದಾದ್ಯಂತ ಹಮ್ಮಿಕೊಂಡಿದ್ದು ಮುಂದುವರೆದ ೪ನೇ ಹಂತದ ರ್‍ಯಾಲಿಯು ಕೋಲಾರದಲ್ಲಿ ಮಾಡಬೇಕಾಗಿತ್ತು, ಆದರೆ ಇಂದಿನ ಪರಿಸ್ಥಿತಿ ರಾಜಕೀಯ ಮಾಡುವುದು ಸಮಂಜಸವಲ್ಲ, ನಮಗೆ ಜಾತಿ, ಧರ್ಮ, ಪಕ್ಷಗಳಿಗಿಂತ ದೇಶ ಮುಖ್ಯ, ನಾವುಗಳು ದೇಶದ ಪರವಾಗಿ ಪ್ರಧಾನಿಗೆ ಮತ್ತು ಯೋಧರಿಗೆ ಬೆಂಬಲ ನೀಡಬೇಕು, ಉಗ್ರಗಾಮಿಗಳ ಸಂಘಟನೆಗಳನ್ನು ಕೊನೆಗಾಣಿಸಬೇಕೆಂದು ಹೇಳಿದರು. ಸ್ವಾತಂತ್ರ್ಯದ ಸಂದರ್ಭದಲ್ಲಿಯೇ ಬಿಜೆಪಿ ಸಂಸ್ಕಾಪಕರಲ್ಲಿ ಓರ್ವರಾದ ಶಾಮ್ ಪ್ರಕಾಶ್ ಮುಖರ್ಜಿ ಆಗಲೇ ಒಂದು ದೇಶಕ್ಕೆ ಎರಡು ಪ್ರಧಾನಿ, ಎರಡು ರಾಷ್ಟ್ರ ಧ್ವಜಗಳು ಸಲ್ಲದು ಎಂದು ವಿರೋಧ ವ್ಯಕ್ತಪಡಿಸಿದ್ದರು, ಜಮ್ಮು ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಿಸಬೇಕೆಂದು ಹೋರಾಟದಲ್ಲಿಯೇ ದೇಶಕ್ಕೆ ಬಲಿದಾನವಾದರು, ಅವರ ನುಡಿದಿದ್ದ ಭವಿಷ್ಯದಂತೆ ಜಮ್ಮು ಕಾಶ್ಮೀರವು ಭಾರತದಲ್ಲಿದ್ದರೂ ಇಲ್ಲದಂತೆ ಇತ್ತು. ಪ್ರತ್ಯೇಕ ಪ್ರಧಾನಿ, ಪ್ರತ್ಯೇಕ ಧ್ವಜಗಳಾಗಿತ್ತು, ಪಾಕಿಸ್ತಾನದ ಹಿಡಿತದಲ್ಲಿತ್ತು ಎಂದು ನೆನಪಿಸಿದರು.
ಉಗ್ರರು ವಿಶ್ವಕ್ಕೇ ಮಾರಕ ಉಗ್ರಗಾಮಿಗಳು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾರಕವಾಗಿದ್ದರು, ಉಗ್ರಗಾಮಿಗಳ ಚಟುವಟಿಕೆಗಳಿಗೆ ಅಂತ್ಯ ಮಾಡುವುದಾಗಿ ಮೋದಿ ಶಪಥ ಮಾಡಿ ಘೋಷಿಸಿದಂತೆ ಇಂದು ದಾಳಿ ಮಾಡಿಸಿ ಭಯೋತ್ಪಾದಕರ ತಾಣಗಳನ್ನು ಉಡಿಸ್ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲಾ ಸಂಘಟಿತರಾಗಿ ಒಂದಾಗಬೇಕಾಗಿದೆ ದೇಶಕ್ಕೆ ಬಲ ತುಂಬಬೇಕಾಗಿದೆ ಎಂದು ತಿಳಿಸಿದರು.ರ್‍ಯಾಲಿಯಲ್ಲಿ ಬಿಜೆಪಿ ಶಾಸಕ ರವಿಕುಮಾರ್, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಧ್ಯಕ್ಷ ಓಂಶಕ್ತಿ ಚಲಪತಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ಮುನಿವೆಂಕಟಪ್ಪ. ವರ್ತೂರು ಪ್ರಕಾಶ್, ಬೆಗ್ಲಿ ಸೂರ್ಯಪ್ರಕಾಶ್, ಮುನಿರಾಜು, ಸೀಕಲ್ ರಾಮಚಂದ್ರ, ಹರೀಶ್ ಪೂಂಜಾ, ಸಿದ್ದು ತಮ್ಮೇಶ್ ಇದ್ದರು.