ಸಾರಾಂಶ
- ಸಂವಿಧಾನದಲ್ಲಿ ಕಾಂಗ್ರೆಸ್ ಬೇಡದಿರುವ ಅಂಶ ಸೇರಿಸಿದೆ
- ಅದನ್ನು ತೆಗೆಯಲು ಬಿಜೆಪಿಗೆ 3ನೇ 2ರಷ್ಟು ಬಹುಮತ ಬೇಕುಕನ್ನಡಪ್ರಭ ವಾರ್ತೆ ಸಿದ್ದಾಪುರಈ ಬಾರಿ ಪ್ರಧಾನಿ ಮೋದಿ ಅವರು ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಹೇಳಿದ್ದಾರೆ. ಅವರು ಈ ರೀತಿ ಯಾಕೆ ಹೇಳಿದ್ದಾರೆಂದರೆ, ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಸೇರಿಸಿರುವ ಬೇಡದ ಅಂಶಗಳನ್ನು ತೆಗೆದು ಹಾಕಿ, ತಿದ್ದುಪಡಿ ಮಾಡಬೇಕಿದ್ದರೆ ಲೋಕಸಭೆಯಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಅತ್ಯಗತ್ಯ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.ಸಿದ್ದಾಪುರದ ಹಲಗೇರಿ ಮತ್ತಿತರ ಕಡೆ ಸಭೆಗಳಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆ, ಕಾಂಗ್ರೆಸ್ಸಿಗರು ಸಂವಿಧಾನದ ಮೂಲಸ್ವರೂಪವನ್ನೇ ತಿರುಚಿದ್ದಾರೆ. ಬೇಡದ ಅಂಶಗಳನ್ನು ಸಂವಿಧಾನದೊಳಗೆ ತುರುಕಿದ್ದಾರೆ. ಇಡೀ ಹಿಂದೂ ಸಮಾಜವನ್ನು ಧಮನಿಸುವ ರೀತಿಯ ಕಾನೂನು ತಂದಿಟ್ಟಿದ್ದಾರೆ. ಇದೆಲ್ಲವೂ ಬದಲಾಗಬೇಕಾದರೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯ. ಸಿಎಎಗೆ ಎಲ್ಲ ರಾಜ್ಯಗಳಿಂದ ಒಪ್ಪಿಗೆ ಸಿಕ್ಕಿಲ್ಲ. ಸಿಎಎ ತಾರದಿದ್ದರೆ ಕಾನೂನು ವ್ಯವಸ್ಥೆ ನಮ್ಮ ಕೈಯಲ್ಲಿರಲ್ಲ. ಎಲ್ಲ ಕಡೆ ಮೂರನೇ ಎರಡರಷ್ಟು ಬಹುಮತ ಬರಲಿ. ಆಮೇಲೆ ನೋಡಿ ಮಾರಿಜಾತ್ರೆ. ಜಾತ್ರೆಗೆ ಕಳೆ ಬರೋದು ಆ ನಂತರವೇ ಎಂದರು.ನಮ್ಮ ದೇಶ ಸರಿ ಆಗಬೇಕೆಂದರೆ ನಮ್ಮವರಿಂದಲೇ ಹೊರತು ಬೇರಿನ್ಯಾರಿಂದಲೂ ಸಾಧ್ಯವಿಲ್ಲ ಎಂದ ಅನಂತ ಕುಮಾರ್ ಹೆಗಡೆ, ರಾಜ್ಯದಲ್ಲಿ ಈ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಕಿಡಿಕಾರಿದರು.