ದೇವೇಗೌಡ, ಯಡಿಯೂರಪ್ವರ ನೇತೃತ್ವದಲ್ಲಿ ಬಿಜೆಪಿ ಗೆಲವು

| Published : Jun 17 2024, 01:38 AM IST / Updated: Jun 17 2024, 10:06 AM IST

ದೇವೇಗೌಡ, ಯಡಿಯೂರಪ್ವರ ನೇತೃತ್ವದಲ್ಲಿ ಬಿಜೆಪಿ ಗೆಲವು
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ಅಭಿನಂದನಾ ಸಮಾರಂದಲ್ಲಿ ಸಂಸದ ಕಾರಜೋಳ ಅಭಿಮತ

ಹೊಸದುರ್ಗ :  ರಾಜ್ಯದ ಎರಡು ದೈತ್ಯ ಶಕ್ತಿಗಳಾದ ದೇವೇಗೌಡ ಹಾಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ ತಾಲೂಕಿನ ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನರು ಅತ್ಯಂತ ಪ್ರೀತಿಯಿಂದ ಮತ ನೀಡಿ ಗೆಲುವಿನ ಕಾಣಿಕೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದು ವಿಶ್ಲೇಷಣೆ ಮಾಡುತ್ತಿದ್ದರು ಆದರೆ ಜಿಲ್ಲೆಯ ಜನರು ಮನೆ ಮಗನಂತೆ ಸ್ವೀಕರಿಸಿ ಗೆಲ್ಲಿಸಿದ್ದಾರೆ. ಜಿಲ್ಲೆಯ ಜನರ ಪ್ರೀತಿ, ವಿಶ್ವಾಸಕ್ಕೆ ದ್ರೋಹ ಮಾಡದೆ ಕೆಲಸ ಮಾಡುವೆ ಎಂದರು.22 ಸಾವಿರ ಕೋಟಿ ರು ವೆಚ್ಚದ ಅಪ್ಪರ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ರು ಅನುದಾನ ಮಿಸಲಿಟ್ಟಿಸದ್ದು, ಅದನ್ನು ಬಿಡುಗಡೆ ಮಾಡಿಸಲಾಗುತ್ತದೆ. 2.55 ಸಾವಿರ ಹೇಕ್ಟರ್ ನೀರಾವರಿ ಆಗಬೇಕು. 550ಕ್ಕೂ ಹೆಚ್ಚು ಕೆರೆ ತುಂಬಿಸುವ ಕೆಲಸವನ್ನು ನನ್ನ ಅವಧಿಯಲಿ ಪೂರ್ಣಗೋಳಿಸುವೆ. ದಾವಣಗೆರೆ ಬೆಂಗಳೂರು ತುಮಕೂರು ರೈಲ್ವೆ ಮಾರ್ಗ ಕೆಲಸ ಚುರುಕುಗೊಳಿಸುವೆ. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಕಾಮಗಾರಿಗೆ ಕೇಂದ್ರದ ಹಣಕಾಸಿನ ನೆರವು ತರಲಾಗುವುದು ಎಂದರು.

ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ ಮಾತನಾಡಿ, ಕಾಂಗ್ರೆಸ್‌ ದಿವಾಳಿ ಸರ್ಕಾರವಾಗಿದ್ದು, ಗ್ಯಾರಂಟಿ ಯೋಜನೆ ಮೂಲಕ ಚುನಾವಣೆ ಗೆಲ್ಲಲು ಹೋರಟವರಿಗೆ ರಾಜ್ಯದ ಜನ ತಕ್ಕ ಪಾಠ ಕಳಿಸಿದ್ದಾರೆ. ಬಿಜೆಪಿ ಗೆಲುವಿನಲ್ಲಿ ಜೆಡಿಎಸ್ ಕಾರ್ಯಕರ್ತರು ಶಕ್ತಿ ತುಂಬಿದ್ದಾರೆ ಎಂದರು.

ಲೋಕ ಚುನಾವಣೆ ಗೆಲ್ಲಲು ಕಾಂಗ್ರೇಸ್ ಏನೆಲ್ಲಾ ಒಳ ಸಂಚು ಮಾಡಿದ್ದರು ಬಿಜೆಪಿ ಗೆದ್ದು, ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಿದ್ದಾರೆ. ದೇಶದ ಸಮಗ್ರತೆ, ಏಕತೆ ಹಾಗೂ ಶಾಂತಿ ಯಿಂದ ಬದುಕಬೇಕಾದರೆ ಅದು ಮೋದಿಯಿಂದ ಮಾತ್ರ. ಅದು ಸಾಧ್ಯವಾಗಿದೆ ಎಂದರು.

ನೀರಾವರಿ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿತ್ತು. ಯಡಿಯೂರಪ್ಪ ಅವರು ಭದ್ರಾ ಯೋಜನೆಗೆ ಚಾಲನೆ ನೀಡಿದ್ದರು. ರಾಜ್ಯದ ಬೊಕ್ಕಸ ಇಂದು ಖಾಲಿಯಾಗಿದೆ. ರಾಜ್ಯ ಸರಕಾರ ಜನರ ಮೇಲೆ1.35 ಸಾವಿರ ಕೋಟಿ ರು. ಸಾಲದ ಹೊರೆ ಹೊರೆಸಿದೆ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬುರುಡೆಕಟ್ಟೆ ರಾಜೇಶ್ ಮಾತನಾಡಿ, ಸ್ವಾರ್ಥ ರಹಿತ ಶ್ರಮ ವಹಿಸಿ ದುಡಿದ ಕಾರ್ಯಕರ್ತರಿಗೆ ಕೆಲಸ ಕೊಡಬೇಕು. ಗಡಿ ಭಾಗದಲ್ಲಿರುವ ಹೊಸದುರ್ಗ ತಾಲೂಕಿನ ವಿಚಾರದಲ್ಲಿ ಎಲ್ಲರು ಮಲತಾಯಿ ಧೋರಣೆ ತೋರಿದ್ದಾರೆ. ಹಿಂದೆ ಸುತ್ತುವ ಹಿಂಬಾಲಕರಿಗೆ ಹೆಚ್ಚಿನ ಆದ್ಯತೆ ಕೊಡದೆ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಎಂದು ನೂತನ ಸಂಸದರಿಗೆ ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಕೆ. ಎಸ್. ಕಲ್ಮಟ್, ಸದ್ಗುರು ಡಿ. ಎಸ್. ಪ್ರದೀಪ್, ಗೂಳಿಹಟ್ಟಿ ಜಗದೀಶ್, ನಾಯಿಗೆರೆ ಜಗದೀಶ್, ಮರಿದಿಮ್ಮಣ್ಣ, ದೊಡ್ಡಘಟ್ಟ ಲಕ್ಷ್ಮಣಪ್ಪ, ಗೂಳಿಹಟ್ಟಿ ಕೃಷ್ಣಮೂರ್ತಿ, ಜೆಡಿಎಸ್ ಅಧ್ಯಕ್ಷ ಗಣೇಶ್ ಮೂರ್ತಿ ಮತ್ತಿತರರು ಹಾಜರಿದ್ದರು.