ಸಾರಾಂಶ
- ಅನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೂ ಈ ಗೆಲವು ದಿಕ್ಸೂಚಿ: ಮುಖಂಡರು
- - -ಕನ್ನಡಪ್ರಭವಾರ್ತೆ ಜಗಳೂರುದೆಹಲಿಯಲ್ಲಿ 48ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ವಿಜಯಪತಾಕಿ ಹಾರಿಸಿದ್ದು, ಪ್ರಧಾನಿ ಮೋದಿಜಿ, ಅಭಿವೃದ್ಧಿ ಕಾರ್ಯಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರ ಪಕ್ಷ ಸಂಘಟನೆ ಹಾಗೂ ಸ್ಥಳೀಯ ಕಾರ್ಯಕರ್ತರ ಸಂಘಟನೆಯ ಶ್ರಮದ ಜೊತೆಗೆ ಎಎಪಿ ಭ್ರಷ್ಠಾಚಾರ, ದುರಾಡಳಿತಕ್ಕೆ ಬೇಸತ್ತು ಮತದಾರರು ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.ದೆಹಲಿ ರಾಜ್ಯದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು48 ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರಿಂದ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಮಹಾತ್ಮ ಗಾಂಧಿ ವೃತದಲ್ಲಿ ಪಕ್ಷದ ಮುಖಂಡರಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿದ ನಂತರ ಅವರು ಮಾತನಾಡಿದರು. ದೆಹಲಿಯ ಚುನಾವಣೆಯ ಗೆಲುವು ಕರ್ನಾಟಕ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೂ ದಿಕ್ಸೂಚಿಯಾಗಲಿದೆ ಎಂದುರ.ಪಪಂ ಅಧ್ಯಕ್ಷ ನವೀನ್ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಮುಖಂಡರುಗಳಾದ ತಿಪ್ಪೇಸ್ವಾಮಿ, ಪಪಂ ಮಾಜಿ ಅಧ್ಯಕ್ಷ ಜೆ.ವಿ. ನಾಗರಾಜ್, ಬಡಯ್ಯ. ತುಪ್ಪದಹಳ್ಳಿ ಪೂಜಾರಪ್ಪ ಇತರರು ಇದ್ದರು.
- - --08ಜೆ.ಜಿ.ಎಲ್.1: ಜಗಳೂರು ಮಹಾತ್ಮ ಗಾಂಧಿ ವೃತದಲ್ಲಿ ಬಿಜೆಪಿ ವಿಜಯೋತ್ಸವ ನಡೆಯಿತು.- - -
* ಹೊನ್ನಾಳಿಯಲ್ಲೂ ಬಿಜೆಪಿ ವಿಜಯೋತ್ಸವ ಹೊನ್ನಾಳಿ: ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಆರೋಪ, ಜೈಲಿಗೆ ಹೋಗಿದ್ದ ಅನುಕಂಪ, ಚುನಾವಣೆ ವೇಳೆ ಯಮುನಾ ನದಿಗೆ ವಿಷ ಹಾಕಿದ್ದಾರೆ ಎಂಬ ಸುಳ್ಳು ಆರೋಪ, ಮಾಡಿ ಈ ಬಾರಿಯೂ ಚುನಾವಣೆಯಲ್ಲಿ ಮತ್ತೆ ತಾವೇ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಅಹಂಕಾರಗಳ ಆಮ್ ಆದ್ಮಿ ಪಾರ್ಟಿಗೆ ಮಾತಿಗೆ ದೆಹಲಿ ಮತದಾರರರು ತಕ್ಕಪಾಠ ಕಲಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ದೆಹಲಿಯಲ್ಲಿ ಕಾಂಗ್ರೆಸ್, ಎಎಪಿ ಸೋಲುಣಿಸಿ, ಬಿಜೆಪಿ ಗೆದ್ದ ಹಿನ್ನೆಲೆ ಶನಿವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ, ಸಿಹಿ ವಿತರಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ವಿರುದ್ಧ ಸಲ್ಲದ ಟೀಕೆ ಮಾಡಿ, ಮತದಾರರನ್ನು ತಪ್ಪುದಾರಿಗೆ ಎಳೆಯುವ ಪರಿಪಾಠ ಕೇಜ್ರಿವಾಲ್ ಅವರದಾಗಿತ್ತು. ಈಗ ಸ್ವತಃ ಕೇಜ್ರಿವಾಲ್ ಹಾಗೂ ಆ ಪಕ್ಷದ ಮುಖಂಡರನ್ನು ಮತದಾರರು ಸೋಲಿಸಿದ್ದಾರೆ. ಯಾವಾಗಲೂ ಸತ್ಯಕ್ಕೆ ಜಯ ಎಂಬುದನ್ನು ಯಾರೂ ಮರೆಯಬಾರದು ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಮುಖಂಡರಾದ ಪಾಲಾಕ್ಷಪ್ಪ, ಮಂಜು ಇಂಚರ, ಮಹೇಶ್ ಹುಡೇದ್, ಸುರೇಂದ್ರ ನಾಯ್ಕ್, ಬೀರಪ್ಪ, ಪೇಟೆ ಪ್ರಶಾಂತ್, ಪಲ್ಲವಿ ರಾಜು ಇತರರು ಉಪಸ್ಥಿತರಿದ್ದರು.
- - - -8ಎಚ್.ಎಲ್.ಐ2ಜೆಪಿಜಿ:ಹೊನ್ನಾಳಿಯಲ್ಲಿ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ವಿಜಯೋತ್ಸವ ನಡೆಯಿತು.