ಕೊಪ್ಪಳ: ಸ್ಪಾಂಜನ್ ಐರಾನ್ ಕಾರ್ಖಾನೆಗಳ ಕಪ್ಪು ಧೂಳು ಮತ್ತು ಹೊಗೆಯಿಂದ ಜನರ ಆರೋಗ್ಯಕ್ಕೆ ಕುತ್ತು ಬಂದಿದೆ. ಇದರಿಂದ ಸಮಾರು 22 ಗ್ರಾಮಗಳು ಬಾಧಿತವಾಗಿವೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಗಮ ನಸೆಳೆಯುವ ಸೂಚನೆ ವೇಳೆಯಲ್ಲಿ ಪ್ರಶ್ನೊತ್ತರ ಸಮಯದಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳ ತ್ಯಾಜ್ಯದಿಂದ ಸಮಸ್ಯೆಯಾಗುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಇದೇ ಮೊದಲ ಬಾರಿಗೆ ಕಾರ್ಖಾನೆಯ ಸಮಸ್ಯೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ.ಹತ್ತಾರು ಸ್ಪಾಂಜ್ ಐರಾನ್ ಕಾರ್ಖಾನೆಗಳಿಂದ ಭಾರಿ ಸಮಸ್ಯೆಯಾಗಿದೆ. ಈ ನಡುವೆ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬಲ್ಡೋಟಾ ಕಾರ್ಖಾನೆ ಸ್ಥಾಪಿನೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕಳೆದ 145 ದಿನಗಳಿಂದ ಹೋರಾಟ ನಡೆಯುತ್ತಿದೆ. 1.20 ಲಕ್ಷಕ್ಕೂ ಅಧಿಕ ಜನರು ವಾಸಿಸುವ ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಕಾರ್ಖಾನೆ ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ಹಿರಬಗನಾಳ ಗ್ರಾಮದಲ್ಲಿ ಕಾರ್ಖಾನೆಯ ತ್ಯಾಜ್ಯದಿಂದ ಆಗಿರುವ ಆರೋಗ್ಯದ ಸಮಸ್ಯೆ ಕುರಿತು ಅಧ್ಯಯನ ಮಾಡಿದ್ದು, ಇದರಿಂದ ಬಂದಿರುವ ವರದಿ ಅಘಾತಕಾರಿಯಾಗಿದೆ. ಒಂದೇ ಗ್ರಾಮದಲ್ಲಿ ಇಬ್ಬರಿಗೆ ಕ್ಯಾನ್ಸರ್ ಬಂದಿದೆ.ಅಸ್ತಮಾದಿಂದ ಬಳಲುತ್ತಿದ್ದಾರೆ. ಹೃದಯ ಕಾಯಿಲೆ, ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದರು.ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.ಸ್ಪಾಂಜ ಐರಾನ್ ಕಾರ್ಖಾನೆಯಿಂದ ಹೆಚ್ಚು ಧೂಳು ಬರುವುದರಿಂದ ದೊಡ್ಡ ಸಮಸ್ಯೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ನೆಬುಲೇಜೇಶನ್ ಬಳಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರು ಸಹ ವಿಷವಾಗಿದೆ.
ಇಲ್ಲಿ ನಮಗೆ ಕೈಗಾರಿಕಾ ನೀತಿ ರೂಪಿತವಾಗಬೇಕು. ಕೇವಲ ಐದು ಕಿಮೀ ವ್ಯಾಪ್ತಿಯಲ್ಲಿ 13 ಸ್ಪಾಂಜ್ ಐರಾನ್ ಕೈಗಾರಿಕಾಗಳಿಗೆ ಐದು ಕಿಮೀ ವ್ಯಾಪ್ತಿಯಲ್ಲಿಯೇ ಇವೆ. ಹೀಗಾಗಿ, ಒಂದೇ ಸ್ಥಳದಲ್ಲಿಯೇ ಇರುವುದೇ ಸಮಸ್ಯೆಯಾಗಿದೆ.
ಈ ರೀತಿಯ ಸಮಸ್ಯೆಯ ನಡುವೆ ಕೊಪ್ಪಳ ನಗರದಲ್ಲಿ 1.20 ಲಕ್ಷ ಜನಸಂಖ್ಯೆ ಇದ್ದು, ಈ ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ₹54 ಸಾವಿರ ಕೋಟಿ ವೆಚ್ಚದಲ್ಲಿ ಮತ್ತೊಂದು ಕಾರ್ಖಾನೆ ಹಾಕಲು ಮುಂದಾಗಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.ಇದರ ವಿರುದ್ಧ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಕಳೆದ 145 ದಿನಗಳಿಂದ ನಿರಂತರವಾಗಿ ಇದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
ಸಚಿವ ಈಶ್ವರ ಖಂಡ್ರೆ ಉತ್ತರ ನೀಡಿ ಮಾತನಾಡಿ, 14 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವೆ.ಇವುಗಳ ವಿರುದ್ಧ ದೂರು ದಾಖಲಾಗಿವೆ.ನಂತರ ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಅಧ್ಯಯನ ಮಾಡಿದ್ದಾರೆ.ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಪರಿವೀಕ್ಷಣೆ ಮಾಡಿ ವರದಿ ನೀಡಿದ್ದಾರೆ. ವರದಿಯಲ್ಲಿ ತಾತ್ಕಾಲಿಕ ಕ್ರಮ ಏನು, ದೂರದೃಷ್ಠಿಯಕ್ರಮಗಳೇನು ಎನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಅವುಗಳನ್ನು ಅನುಪಾಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.