ಮಾನವೀಯತೆ: ನಿರಾಶ್ರೀತರಿಗೆ ಹೊದಿಕೆ ವಿತರಣೆ

| Published : Feb 12 2024, 01:30 AM IST

ಮಾನವೀಯತೆ: ನಿರಾಶ್ರೀತರಿಗೆ ಹೊದಿಕೆ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿರುವ ನಿರಾಶ್ರೀತರಿಗೆ ಮುಖಂಡರಾದ ಯಲ್ಲಾಲಿಂಗ ತಳವಾರ, ಬಸವರಾಜ ಫುಲಾರಿ ನೇತೃತ್ವದಲ್ಲಿ ಹೆಲ್ಪಿಂಗ್ ಹಾರ್ಟ್ಸ್ ತಂಡದವರಿಂದ ಹೊದಿಕೆ ಹಾಗೂ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿರುವ ನಿರಾಶ್ರೀತರಿಗೆ ಮುಖಂಡರಾದ ಯಲ್ಲಾಲಿಂಗ ತಳವಾರ, ಬಸವರಾಜ ಫುಲಾರಿ ನೇತೃತ್ವದಲ್ಲಿ ಹೆಲ್ಪಿಂಗ್ ಹಾರ್ಟ್ಸ್ ತಂಡದವರಿಂದ ಹೊದಿಕೆ ಹಾಗೂ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ಬಳಿಕ ಯಲ್ಲಾಳಿಂಗ ತಳವಾರ, ಬಸವರಾಜ ಫುಲಾರಿ, ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ ಹೆಲ್ಪಿಂಗ್ ಹಾಟ್ಸ್ ತಂಡದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರಿದ್ದು ಎಲ್ಲರೂ ನಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ ನಿರಾಶ್ರೀತರಿಗೆ ಹೊದಿಕೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದೇವೆ. ಜೊತೆಗೆ ರೈತರಿಗೆ, ವಿದ್ಯಾರ್ಥಿಗಳಿಗೆ ಬೇಕಾದ ಸಲಕರಣೆಗಳ ವಿತರಣೆ ಹಾಗೂ ಕಡು ಬಡತನದಲ್ಲಿದ್ದು ಮನೆ ಕಟ್ಟಿಕೊಳ್ಳಲಾಗದೆ ಪರದಾಡುವ ಜನರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಇನ್ನೂ ಸಾಕಷ್ಟು ಜನ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಮುಂದೆ ಬರುತ್ತಿರುವುದು ನಮಗೆ ಸಂತಸ ತಂದಿದೆ. ಕಳೆದ 3 ವರ್ಷಗಳಿಂದ ಕಲಬುರಗಿ, ವಿಜಯಪುರ, ಇಂಡಿ, ದೇವಲ ಗಾಣಗಾಪೂರ ಸೇರಿದಂತೆ ಹಲವು ಕಡೆಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಚವಡಾಪುರದ ಬೆಲ್ಲದ್ ಆಸ್ಪತ್ರೆಯ ವೈದ್ಯ ಡಾ. ಧೃವರಾಜ ಬೆಲ್ಲದ್, ಪ್ರಮುಖರಾದ ದಿಗಂಬರ ಯಾದವ, ಸಂತೋಷ ವಾಘ್ಮೋಡೆ, ಜಕ್ಕಪ್ಪ ಪೂಜಾರಿ, ದಗಂಬರ ಡಾಂಗೆ, ಇಮ್ರಾನ್ ಮನಿಯಾರ, ಭೀಮಾ ಮುದಕಣ, ಶರಣಪ್ಪ ಬಿದನೂರ, ಯಲ್ಲಪ್ಪ ಟೇಲರ್, ಈಶ್ವರ ಸೇರಿದಂತೆ ಅನೇಕರು ಇದ್ದರು.