ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಹೇಳಿ ಮಾಡಿಸಿದಂತಿದೆ ಎಂದು ಬೆಂಗಳೂರು ನಿಮ್ಹಾನ್ಸ್ ನ ಡಿ-ಎಡಿಕ್ಷನ್ ಸೆಂಟರ್ ಮುಖ್ಯಸ್ಥ ಮತ್ತು ಸೈಕ್ಯಾಟ್ರಿಕ್ ವಿಭಾಗದ ಮಾಜಿ ಮುಖ್ಯಸ್ಥ ಡಾ.ವಿವೇಕ ಬೆನೆಗಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಹೇಳಿ ಮಾಡಿಸಿದಂತಿದೆ ಎಂದು ಬೆಂಗಳೂರು ನಿಮ್ಹಾನ್ಸ್ ನ ಡಿ-ಎಡಿಕ್ಷನ್ ಸೆಂಟರ್ ಮುಖ್ಯಸ್ಥ ಮತ್ತು ಸೈಕ್ಯಾಟ್ರಿಕ್ ವಿಭಾಗದ ಮಾಜಿ ಮುಖ್ಯಸ್ಥ ಡಾ.ವಿವೇಕ ಬೆನೆಗಲ್‌ ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ್ದ ದಿ.ಡಾ.ಸಿ.ಆರ್.ಬಿದರಿ ಅವರ ಸ್ಮರಣಾರ್ಥ ರಾಷ್ಟ್ರ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ.ಆರ್.ಸಿ.ಬಿದರಿ ಮಾತನಾಡಿ, ತಮ್ಮ ತಂದೆ ದಿ.ಡಾ.ಸಿ.ಆರ್.ಬಿದರಿ ಅವರು ರೋಗಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಿದ್ದರು. ಪ್ರೀತಿ, ಕರುಣೆ, ಕಾಳಜಿ ಮತ್ತು ಆತ್ಮೀಯತೆಯಿಂದ ಚಿಕಿತ್ಸೆ ನೀಡುತ್ತಿದ್ದರು. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲ ಕುಟುಂಬ ಸದಸ್ಯರು ಮುನ್ನಡೆಯುತ್ತಿದ್ದೇವೆ ಎಂದರು.ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ಪ್ರಾಥಃಸ್ಮರಣೀಯರ ಕಾಯಕದ ಫಲವಾಗಿ ಬಿ.ಎಲ್.ಡಿ.ಇ ಸಂಸ್ಥೆ ಇಂದು ನರ್ಸರಿಯಿಂದ ಸ್ನಾತಕೋತ್ತರವರೆಗೆ ಶಿಕ್ಷಣ ನೀಡುತ್ತಿದೆ. ಡೀಮ್ಡ್ ವಿವಿ ದೇಶದ ಮುಂಚೂಣಿ ವಿವಿಗಳಲ್ಲಿ ಒಂದಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಂದ ರಾಷ್ಟ್ರ ಮಟ್ಡದಲ್ಲಿ ಉನ್ನತ ಸ್ಥಾನದಲ್ಲಿದೆ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮತ್ತು ಸಮಕುಲಾಧಿಪತಿ ಬಿ.ಎಂ.ಪಾಟೀಲ ಅವರ ಸಮರ್ಥ ಆಡಳಿತದಲ್ಲಿ ಡೀಮ್ಡ್ ವಿವಿ ಸಾಧನೆಗಳ ಮೂಲಕ ಹೆಸರು ಮಾಡುತ್ತಿದೆ. ಅಧುನಿಕ ತಂತ್ರಜ್ಞಾನ ಸದ್ಬಳಕೆ ಮಾಡುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಡದ ಶಿಕ್ಷಣ ನೀಡುತ್ತಿದೆ ಎಂದರು.ಕುಲಪತಿ ಡಾ.ಅರುಣ ಇನಾಮದಾರ ಮಾತನಾಡಿ, 1991ರಲ್ಲಿ ನಾನು ಡಾ. ಸಿ.ಆರ್.ಬಿದರಿ ಅವರ ಮಾರ್ಗದರ್ಶನದಲ್ಲಿ ಸೇವೆಗೆ ಸೇರಿದ್ದೆ. ಚಿಕ್ಕಮಕ್ಕಳ ತಜ್ಞರಾಗಿದ್ದ ಅವರು ಚರ್ಮರೋಗ ವೈದ್ಯರೂ ಆಗಿದ್ದರು. ಅವರ ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ವ್ಯಸನ ಮತ್ತು ಗೀಳು ಮನುಷ್ಯನ ಮಾನಸಿಕ ಸಮಸ್ಯೆಯಾಗಿದ್ದು, ನಾನಾ ಗೀಳುಗಳಿಗೆ ಅದರಲ್ಲೂ ಡಿಜಿಟಲ್ ಮಾಧ್ಯಮ ಗೀಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಗೀಳಿಗೆ ಕಾರಣ, ಪರಿಣಾಮ, ಪರಿಹಾರ, ಮುನ್ನೆಚ್ಚರಿಕೆಯ ಕುರಿತು ಹೆಚ್ಚೆಚ್ಚು ಚರ್ಚೆ ನಡೆಯಬೇಕಿದೆ. ವ್ಯಸನ ಮತ್ತು ಗೀಳಿನ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.ಇದೇ ವೇಳೆ ಡಾ.ವಿವೇಕ ಬೆನಗಲ ಸೇರಿದಂತೆ ನಾನಾ ವೈದ್ಯರನ್ನು ಡಾ.ಸಿ.ಆರ್.ಬಿದರಿ ಕುಟುಂಬದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಆಶಾ ಪಾಟೀಲ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ಬಾಬುರಾಜೇಂದ್ರ ನಾಯಕ, ಡಾ.ಎಸ್.ಎನ್.ಬೆಂಟೂರ, ಡಾ.ವಿಜಯಕುಮಾರ ವಾರದ, ಡಾ.ರವಿಕುಮಾರ ಬಿರಾದಾರ, ಡಾ.ಶೈಲಜಾ ಬಿರಾದಾರ, ಡಾ.ಅನುಜಾ.ಎಂ.ಕೆ, ವಿಜಯೇಂದ್ರ ಬಿದರಿ, ಡಾ.ಸಿದ್ದು ಬಿರಾದಾರ, ಡಾ.ರಾಜೇಶ ಹೊನ್ನುಟಗಿ ಉಪಸ್ಥಿತರಿದ್ದರು. ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ ಸ್ವಾಗತಿಸಿದರು. ರಜಿಸ್ಟ್ರಾರ್‌ ಡಾ. ಆರ್‌.ವಿ.ಕುಲಕರ್ಣಿ ವಂದಿಸಿದರು. ಡಾ.ಅರ್ಪಿತ ಮತ್ತು ಡಾ.ಪ್ರತೀಕ್ಷಾ ನಿರೂಪಿಸಿದರು.ಪ್ರಶಾಂತ ವಾತಾವರಣ, ಕಲಿಕಗೆ ಅಗತ್ಯವಾಗಿರುವ ಸೌಲಭ್ಯಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಮತ್ತು ಓದಿನ ಮೇಲೆ ಪರಿಣಾಮ ಬೀರುತ್ತವೆ. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ಪರಿಸರ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಹೇಳಿ ಮಾಡಿಸಿದಂತಿದೆ. ಇಲ್ಲಿಯ ಕಲಿಕಾ ಸೌಲಭ್ಯಗಳು ಇತರ ಕಾಲೇಜುಗಳಿಗೆ ಮಾದರಿಯಾಗಿದೆ. ನಾನೂ ಕೂಡ ಮತ್ತೊಮ್ಮೆ ಇಲ್ಲಿಯ ಕಾಲೇಜಿನಲ್ಲಿ ಓದಬೇಕು ಎನಿಸುತ್ತಿದೆ.

- ಡಾ.ವಿವೇಕ ಬೆನೆಗಲ್‌, ಬೆಂಗಳೂರು ನಿಮ್ಹಾನ್ಸ್ ಮಾಜಿ ಮುಖ್ಯಸ್ಥರು.