ಸಾರಾಂಶ
ಈ ಚುನಾವಣೆ ದೇಶದ ಯುವ ಜನತೆಯ ಭವಿಷ್ಯದ ಚುನಾವಣೆ
ಗದಗ: ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರಕ್ಕೆ ಜನತೆ ಆರ್ಶೀವದಿಸಬೇಕು ಎಂದು ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ಶಶಿಧರ ದಿಂಡೂರ ಹೇಳಿದರು.
ಅವರು ನಗರದ ವಾರ್ಡ ನಂ. ೩,೪,೫,೧೨,೧೭,೨೧ರಲ್ಲಿ ಮನೆ ಮನೆಗೆ ಭೇಟಿ ನೀಡಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಿ ಮಾತನಾಡಿದರು.ಕಾಂಗ್ರೆಸ್ ಅಧಿಕಾರದ ಆಸೆಗೆ ಗ್ಯಾರಂಟಿ ಯೋಜನೆ ಕೊಟ್ಟು ನವ ಯುವಕರ ಕೈಯಲ್ಲಿ ಖಾಲಿ ಚಂಬು ಕೊಟ್ಟು ಯುವಕರಿಗೆ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿ ತಪ್ಪು ದಾರಿ ಹಿಡಿಯುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ಮುಂದೆಯು ನಡೆದರೇ ರಾಷ್ಟ್ರದ ಭವಿಷ್ಯದೊಂದಿಗೆ ಭದ್ರತೆಗೂ ದೊಡ್ಡ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಜನತೆ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಮತ ನೀಡಬೇಕು. ಈ ಚುನಾವಣೆ ದೇಶದ ಯುವ ಜನತೆಯ ಭವಿಷ್ಯದ ಚುನಾವಣೆಯಾಗಿದೆ. ಕಾರಣ ಮಹಿಳೆಯರು ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭುವನೇಶ್ವರಿ ಹಿರೇಮಠ,ವೀಣಾ ಚನ್ನದಾಸರ್, ಶ್ರೀದೇವಿ ಹುಣಸಿಕಟ್ಟಿ,ರತ್ನಕ್ಕ ಪಟೇಲ್, ಮಾಲಶೆಟ್ಟಿ,ಇಂದಿರಾ ಹಳ್ಳಿಕೇರಿ, ಅನ್ನಪೂರ್ಣ ಕಂಠಿ ಸೇರಿದಂತೆ ಮಹಿಳೆಯರು, ಹಿರಿಯರು ಉಪಸ್ಥಿತರಿದ್ದರು.