ಕಲ್ಲಂಗಡಿ ಬೆಳೆದು ಯಶ ಕಂಡ ಗ್ಲುಕೋಮಾ ಪೀಡಿತ ಅಂಧ ರೈತ

| Published : Mar 12 2025, 12:49 AM IST

ಕಲ್ಲಂಗಡಿ ಬೆಳೆದು ಯಶ ಕಂಡ ಗ್ಲುಕೋಮಾ ಪೀಡಿತ ಅಂಧ ರೈತ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಲುಕೋಮಾ ರೋಗದಿಂದ ಎರಡು ಕಣ್ಣು ಕಳೆದುಕೊಂಡ ರೈತ ವಿಠ್ಠಲ ಮಡೆಪ್ಪಾ ಮುಸ್ತಾಪೂರೆ ಅವರು ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಅತ್ಯುತ್ತಮ ಫಸಲು ತೆಗೆಯುವ ಮೂಲಕ ಅಧಿಕ ಇಳುವರಿ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್ ಗ್ಲುಕೋಮಾ ರೋಗದಿಂದ ಎರಡು ಕಣ್ಣು ಕಳೆದುಕೊಂಡ ರೈತ ವಿಠ್ಠಲ ಮಡೆಪ್ಪಾ ಮುಸ್ತಾಪೂರೆ ಅವರು ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಅತ್ಯುತ್ತಮ ಫಸಲು ತೆಗೆಯುವ ಮೂಲಕ ಅಧಿಕ ಇಳುವರಿ ಪಡೆದುಕೊಂಡಿದ್ದಾರೆ.ಹುಮನಾಬಾದ ತಾಲೂಕಿನ ನಂದಗಾಂವ ಗ್ರಾಮದ ರೈತ ವಿಠ್ಠಲ ಮುಸ್ತಾಪೂರೆ, ನಂದಗಾಂವ, ಹುಡಗಿ ಗ್ರಾಮದ ಮದ್ಯದ ರಾಮನಗರದಲ್ಲಿರುವ ತಮ್ಮ ಎರಡು ಎಕರೆ ಹೊಲದಲ್ಲಿ ಉತ್ಕರ್ಷ ಬೀಜದ ಕಲ್ಲಂಗಡಿ ಒಂದೊಂದು ಬಳ್ಳಿಗೆ 3 - 4 ಕಲ್ಲಂಗಡಿಯ ಕಾಯಿಗಳು ಇದ್ದು, ಅಂದಾಜು 4 ರಿಂದ 5 ಕೆಜಿಯವರೆಗೆ ಭಾರವಾಗಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಆದಾಯದ ಮೂಲಕ ಯಶಸ್ಸು ಕಂಡಿದ್ದಾರೆ. ಇದು ಕೇವಲ ಮೂರು ತಿಂಗಳಲ್ಲಿ ಬಂಪರ್ ಇಳುವರಿ ಬಂದಿದೆ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನು ಕನ್ನಡಪ್ರಭಯೊಂದಿಗೆ ಹಂಚಿಕೊಂಡಿದ್ದಾರೆ.15 ವರ್ಷಗಳ ಹಿಂದೆ ಗ್ಲುಕೋಮಾ ರೋಗದಿಂದ ಒಂದು ಕಣ್ಣು, 5 ವರ್ಷ ಹಿಂದೆ ಇನ್ನೊಂದು ಕಣ್ಣು ಕಳೆದುಕೊಂಡಿದ್ದು, ಇಡಿ ಕುಟುಂಬ ಹೊಲದ ಮೇಲೆ ಜೀವನ ಆಧರಿಕೊಂಡು ತಂದೆ, ತಾಯಿ, ತಮ್ಮ ಹಾಗೂ ಪತ್ನಿ ಎರಡು ಹೆಣ್ಣುಮಕ್ಕಳು ಒಂದು ಗಂಡು, ಉತ್ತಮ ಶಿಕ್ಷಣ ನೀಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆಬೇಸಿಗೆಯ ಕಾರಣ, ತೋಟಗಾರಿಕೆ ಬೆಳೆಯಾದ ಕಲ್ಲಂಗಡಿಗಳು ನೀರಿನಂಶವಿರುವ ಹಣ್ಣಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಕಲ್ಲಂಗಡಿಗಳನ್ನು ಸಾಮಾನ್ಯ ವಾಗಿ ರಸ ತಯಾರಿಸಲು ಸಹ ಬಳಸಲಾಗುತ್ತದೆ. ಇದು ಮಾತ್ರವಲ್ಲದೆ, ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಹಣ್ಣಿನ ಭಕ್ಷ್ಯ (ಸಲಾಡ್‌)ಗಳಲ್ಲಿಯೂ ಕಲ್ಲಂಗಡಿ ಯನ್ನು ಬಳಸಲಾಗುತ್ತದೆ. ಕಲ್ಲಂಗಡಿ ಬೆಳೆ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ. ರೈತರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿವೆ.ಎಕರೆಗೆ ನಾಲ್ಕು ಟ್ರಾಲಿಯಷ್ಟು ತಿಪ್ಪೆ ಗೊಬ್ಬರ ಹಾಕಿ, ನಾಟಿ ಪದ್ಧತಿಯಲ್ಲಿ ಕಲ್ಲಂಗಡಿ ಬಿಜಗಳನ್ನು ನೆಟ್ಟಿದ್ದಾರೆ. ಹನಿ ನೀರಾವರಿ ಹಾಗೂ ಪ್ಲಾಸ್ಟಿಕ್ ಹೊದಿಕೆ ಯನ್ನು ಅಳವಡಿಸಿದಕ್ಕೆ ಕಲ್ಲಂಗಡಿ ಬೆಳೆಗೆ ಕೀಟ ಬಾಧೆ ಮತ್ತು ಕಳೆ ಸಮಸ್ಯೆ ಕಡಿಮೆಯಾಗಿ ಅಧಿಕ ಇಳುವರಿ ದೊರೆಯುತ್ತದೆ. ಎಕರೆಗೆ 20 ರಿಂದ 30 ಟನ್ ಇಳುವರಿ ಬರುತ್ತದೆ. ಒಂದು ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು 60 ಸಾವಿರ ವೆಚ್ಚವಾಗುತ್ತದೆ. ಖರ್ಚು ಕಳೆದು ಎಕರೆಗೆ 2 ಲಕ್ಷ ನಿವ್ವಳ ಲಾಭ ಬರುತ್ತದೆ. ಕಲ್ಲಂಗಡಿಯನ್ನು ಹೈದ್ರಾಬಾದ್, ಸೋಲಾಪೂರ, ಕಲಬುರ್ಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಕಲ್ಲಂಗಡಿ ಬೆಳೆ ಯಿಂದ ಕೈತುಂಬ ದುಡ್ಡು ಸಿಗುತ್ತಿದೆ. ಸಚೀನ ಕಬ್ಬೂರ ರಾಣೆ ಬೆನ್ನೂರ ಅವರ ಮಾರ್ಗದರ್ಶನದಲ್ಲಿ ನಮ್ಮ ಜಮೀನುಗಳಿಗೆ ಭೇಟಿ ನೀಡಿ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಲ್ಲಂಗಡಿ ಬೆಳೆಯಲು ಕಾಲಕಾಲಕ್ಕೆ ನೀಡಿದ ಸಲಹೆ-ಸೂಚನೆಗಳು ಕೃಷಿಯಲ್ಲಿ ಯಶಸ್ಸು ಕಾಣುವಲ್ಲಿ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.