ಪ್ರಾಮಾಣಿಕ ಸೇವೆಯೇ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೇಯ: ಪಿಎಂಜೆಎಫ್ ಎರಲೆ ಬ್ರಿಟೋ

| Published : Apr 15 2024, 01:18 AM IST

ಪ್ರಾಮಾಣಿಕ ಸೇವೆಯೇ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೇಯ: ಪಿಎಂಜೆಎಫ್ ಎರಲೆ ಬ್ರಿಟೋ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ: ಸಮಾಜದಲ್ಲಿ ಕೆಳಹಂತದಲ್ಲಿರುವ ಬಡವರಿಗೆ ವಿವಿಧ ಜೀವನಾವಶ್ಯಕ ವಸ್ತುಗಳ ಅವಶ್ಯಕತೆ ಇದ್ದಂತೆಯೇ, ನೇತ್ರ ಹೀನರಿಗೆ ದೃಷ್ಠಿಯ ಅವಶ್ಯಕತೆ ಇರುತ್ತದೆ. ಅಂಥ ಅವಶ್ಯಕತೆಯುಳ್ಳವರನ್ನು ಗುರ್ತಿಸಿ ಪ್ರಾಮಾಣಿಕ ಸೇವೆ ಗೈಯುವುದೇ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೆಯವಾಗಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್-317ಬಿ ಪ್ರಾಂತಪಾಲ ಪಿಎಂಜೆಎಫ್ ಎರಲೆ ಬ್ರಿಟೋ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕಸಮಾಜದಲ್ಲಿ ಕೆಳಹಂತದಲ್ಲಿರುವ ಬಡವರಿಗೆ ವಿವಿಧ ಜೀವನಾವಶ್ಯಕ ವಸ್ತುಗಳ ಅವಶ್ಯಕತೆ ಇದ್ದಂತೆಯೇ, ನೇತ್ರ ಹೀನರಿಗೆ ದೃಷ್ಠಿಯ ಅವಶ್ಯಕತೆ ಇರುತ್ತದೆ. ಅಂಥ ಅವಶ್ಯಕತೆಯುಳ್ಳವರನ್ನು ಗುರ್ತಿಸಿ ಪ್ರಾಮಾಣಿಕ ಸೇವೆ ಗೈಯುವುದೇ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೆಯವಾಗಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್-317ಬಿ ಪ್ರಾಂತಪಾಲ ಪಿಎಂಜೆಎಫ್ ಎರಲೆ ಬ್ರಿಟೋ ಹೇಳಿದರು.ಇಲ್ಲಿನ ಡಾಲರ್ಸ್‌ ಕಾಲೋನಿಯ ಕ್ಲಬ್ ಹೌಸ್‌ನಲ್ಲಿ ಇತ್ತೀಚೆಗೆ ಆಯೋಜಿತ ಲಯನ್ಸ್ ಡಿಸ್ಟ್ರೀಕ್ಟ್-317ಬಿ ಪ್ರಾಂತಪಾಲರ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಆಯೋಜಿತ ಸಭೆಯಲ್ಲಿ ಮಾತನಾಡಿದ ಅವರು, ಅದೇ ರೀತಿ ಕಲಿಕಾ ಸಾಮಗ್ರಿಗಳ ಅವಶ್ಯತೆಯುಳ್ಳ ಬಡ ವಿದ್ಯಾರ್ಥಿಗಳನ್ನೂ ಗುರ್ತಿಸಿ ಲಯನ್ಸ್ ಸಂಸ್ಥೆ ತನ್ನ ಪ್ರಾಮಾಣಿಕ ಸೇವೆಯನ್ನು ಒದಗಿಸುತ್ತಿರುವ ಗೋಕಾಕ ಲಯನ್ಸ್ ಕ್ಲಬ್‌ನ ಸೇವಾ ಮನೋಭಾವನೆಯನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಾದ ಸುರೇಶ ಹನಗಂಡಿ, ಪ್ರಕಾಶ ಗರಗಟ್ಟಿ, ಧರೆಪ್ಪ ಮಗದುಮ್, ರಮೇಶ ಬಾಗೋಜಿ, ಶಕುಂತಲಾ ಜೋಡಟ್ಟಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಶೋಕ ಪಾಟೀಲ, ಗಾಂಡಾ ಬ್ರಿಟೋ ವಾಡವಿ, ಕಾರ್ಯದರ್ಶಿ ಹನಮಂತ ಪಾಟೀಲ, ಖಜಾಂಚಿ ಶಂಕರ ದೊಡಮನಿ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಕೆ.ಮಠದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.