ಸಾರಾಂಶ
ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಟ್ಟಣದ ನೌಕರರ ಭವನದಲ್ಲಿ ಚನ್ನರಾಯಪಟ್ಟಣದ ಸ್ವಯಂಪ್ರೇರಿತ ರಕ್ತ ನಿಧಿ ಕೇಂದ್ರ ಮತ್ತು ರೋಟರಿ ಕ್ಲಬ್ ವಿಷನ್ ವತಿಯಿಂದ ಶಿಕ್ಷಕರಿಗೆ ರಕ್ತದಾನ ಶಿಬಿರವನ್ನು ಮತ್ತು ಮಧುಮೇಹ ತಪಾಸಣೆ ಕಣ್ಣಿನ ಪರೀಕ್ಷೆ ಉಚಿತ ಇಸಿಜಿ ಪರೀಕ್ಷೆ ಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟನೆಯನ್ನು ಮಾಡಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಸುಮಾರು ೩೦ ಜನರು ರಕ್ತದಾನವನ್ನು ಮಾಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಟ್ಟಣದ ನೌಕರರ ಭವನದಲ್ಲಿ ಚನ್ನರಾಯಪಟ್ಟಣದ ಸ್ವಯಂಪ್ರೇರಿತ ರಕ್ತ ನಿಧಿ ಕೇಂದ್ರ ಮತ್ತು ರೋಟರಿ ಕ್ಲಬ್ ವಿಷನ್ ವತಿಯಿಂದ ಶಿಕ್ಷಕರಿಗೆ ರಕ್ತದಾನ ಶಿಬಿರವನ್ನು ಮತ್ತು ಮಧುಮೇಹ ತಪಾಸಣೆ ಕಣ್ಣಿನ ಪರೀಕ್ಷೆ ಉಚಿತ ಇಸಿಜಿ ಪರೀಕ್ಷೆ ಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟನೆಯನ್ನು ಮಾಡಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಸ್ವಯಂಪ್ರೇರಿತ ರಕ್ತದಾನ ಕೇಂದ್ರದ ಮಾಲೀಕರಾದ ಎಚ್. ಜಿ. ಭರತ್ ಕುಮಾರ್, ರೋಟರಿ ಕ್ಲಬ್‌ನ ಅಧ್ಯಕ್ಷ ಬಿ. ವಿ. ವಿಜಯ್, ರೋಟರಿ ಕ್ಲಬ್ ನ ಸದಸ್ಯರಾದ ಬಿ. ಆರ್. ಸಿ. ಅನಿಲ್ ಕುಮಾರ್, ಸುಂದರೇಶ್, ಹೇಮಚಂದ್ರ ಬಾಬು ಜಾರ್ಜ್ ಭಾಗವಹಿಸಿದ್ದು ಸುಮಾರು ೨೦೦ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು ಸುಮಾರು ೩೦ ಜನರು ರಕ್ತದಾನವನ್ನು ಮಾಡಿರುತ್ತಾರೆ.