ತುರ್ತು ಸಂದರ್ಭದಲ್ಲಿ ಜನರ ಉಳಿಸಲು ರಕ್ತದಾನ ಮುಖ್ಯ: ಗುರುಸಿದ್ದನಗೌಡ

| Published : Aug 31 2025, 01:09 AM IST

ತುರ್ತು ಸಂದರ್ಭದಲ್ಲಿ ಜನರ ಉಳಿಸಲು ರಕ್ತದಾನ ಮುಖ್ಯ: ಗುರುಸಿದ್ದನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಅನ್ಯರ ಜೀವಗಳ ಉಳಿಸಬಹುದು. ನಮ್ಮ ಆರೋಗ್ಯವನ್ನು ಸಹ ಇನ್ನಷ್ಟು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಹೇಳಿದ್ದಾರೆ.

- ಜಗಳೂರಿನ ಬ್ರಹ್ಮಕುಮಾರೀಸ್‌ ವಿ.ವಿ.ಯಲ್ಲಿ ರಕ್ತದಾನ ಶಿಬಿರ

- - -

ಜಗಳೂರು: ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಅನ್ಯರ ಜೀವಗಳ ಉಳಿಸಬಹುದು. ನಮ್ಮ ಆರೋಗ್ಯವನ್ನು ಸಹ ಇನ್ನಷ್ಟು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾನಿಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಕುಮಾರಿ ಸಂಸ್ಥೆ, ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಹಾಸ್ಪಿಟಿಲ್ ದಾವಣಗೆರೆ ಸಹಯೋಗದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯವಂತರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇಲ್ಲವೇ ವರ್ಷಕ್ಕೆ ಕನಿಷ್ಠ 3 ಬಾರಿ ರಕ್ತದಾನ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಣೆ ಆಗುತ್ತದೆ. ಹೊಸ ರಕ್ತ ಸೃಷ್ಠಿಯಾಗಿ, ಅನ್ಯರ ಜೀವ ಉಳಿಸಿದ ತೃಪ್ತಿ ಸಿಗುತ್ತದೆ ಎಂದ ಅವರು, ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ವಿ.ವಿ.ಯ ಭಾರತಿ ಅಕ್ಕ ಮಾತನಾಡಿ, ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನ ಅಂಗವಾಗಿ ಈ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ. ರಕ್ತ ಸಂಗ್ರಹಣ ಮಾಡುವುದು ಅತಿ ಮುಖ್ಯ ಸೇವೆ ಎಂದು ಪರಿಗಣಿಸಿ ರಕ್ತದಾನ ಶಿಬಿರ ಹಮ್ಮಿಕಂಡಿದ್ದೇವೆ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಂಸ್ಥೆಯ ಉದ್ದೇಶವೂ ಆಗಿದೆ ಎಂದರು.

ಈ ಸಂದರ್ಭ ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಹಾಸ್ಪಿಟಿಲ್, ವೈದ್ಯರು, ವಿ.ವಿ.ಯ ಪ್ರತಿನಿಧಿಗಳು ಇದ್ದರು.

- - -

-28ಜೆಜಿಎಲ್1: ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕ ಗುರುಸಿದ್ದನಗೌಡ ಚಾಲನೆ ನೀಡಿದರು.