ಸಾರಾಂಶ
ಶಿರಾಳಕೊಪ್ಪ ಹತ್ತಿರದ ಕೊಳಗಿ ಗ್ರಾಮದಲ್ಲಿ ಶಿರಾಳಕೊಪ್ಪ ಸ.ಪ.ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಿಬಿರಾರ್ಥಿಗಳು ರಕ್ತ ನೀಡಿದರು.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ರಕ್ತದಾನವು ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನವಾಗಿದೆ. ರಕ್ತದಾನದಿಂದ ಜೀವ ಕಾಪಾಡಿದ ಖುಷಿ ಹಾಗೂ ಆರೋಗ್ಯದಲ್ಲಿ ಸಾಕಷ್ಟು ಅನುಕೂಲತೆ ಕಂಡುಬರುತ್ತವೆ ಎಂದು ತಾಲೂಕು ಆರೋಗ್ಯಾಧಿಕಾರಿ ನವೀದ್ ಖಾನ್ ಹೇಳಿದರು.ಶಿರಾಳಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಒಂದು ಮತ್ತ ಎರಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಶಿರಾಳಕೊಪ್ಪ, ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಕೊಳಗಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ನಡೆದ ರಕ್ತದಾನ ಶಿಬಿರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿರಾಳಕೊಪ್ಪ ಭಾಗದಲ್ಲಿ ಅತಿಹೆಚ್ಚು ರಕ್ತದಾನ ಶಿಬಿರ ಏಪರ್ಡಿಸಲಾಗುತ್ತಿದ್ದು, ಈ ಶಿಬಿರಗಳ ಯಶಸ್ಸಿಗೆ ಎಲ್ಲಾ ಸಮುದಾಯದವರ ಪಾತ್ರ ಅತಿ ಪ್ರಮುಖವಾಗಿದೆ. ತಾಲೂಕಿನಲ್ಲಿ ನಡೆಸುವ ಎಲ್ಲಾ ರಕ್ತದಾನ ಶಿಬಿರಗಳನ್ನು ಜಿಲ್ಲಾ ಮೆಗ್ಗಾನ ಆಸ್ಪತ್ರೆ ಸಹಯೋಗದಿಂದ ಮಾಡುತ್ತಿರುವುದರಿಂದ ಸಮಾಜದ ಕಟ್ಟಕಡೆ ಜನರಿಗೂ ಕೂಡ ಇದರ ಉಪಯೋಗವಾಗುತ್ತಿದೆ ಎಂದರು.ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಮಂಟೂರೆ ಮಾತನಾಡಿ, ನಮ್ಮ ಕಾಲೇಜಿನಿಂದ ಕಳೆದ ನಾಲ್ಕು ವಷರ್ಗಳಿಂದ ಅನೇಕ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಎಲ್ಲಾ ಇಲಾಖೆ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಅತಿ ಪ್ರಮುಖವಾಗಿದೆ. ಈ ಶಿಬಿರ ಯಶಸ್ವಿ ಆಗಲಿ ಎಂದು ಹಾರೈಸಿದರು.
ರಕ್ತದಾನ ಶಿಬಿರವನ್ನು ಕೊಳಗಿ ರೇವಣಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು. ಇಲ್ಲಿಯ ಪ್ರಾ.ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಪವನ್, ಹಿರಿಯ ಆರೋಗ್ಯ ನಿರೀಕ್ಷಕ ಸುರೇಶ್, ರೇವಣಪ್ಪ, ಎನ್ಎಸ್ಎಸ್ ಘಟಕದ ಮುಖ್ಯಸ್ಥರಾದ ಮಲ್ಲಿಕಾಜುರ್ನ, ಪ್ರಶಾಂತ್, ಶಿಕ್ಷಕರಾದ ಷಡಾಕ್ಷರಪ್ಪ, ಯೋಗಿಶ, ಪ್ರಿಯಾ ಹಾಗೂ ಎಳಗೆರೆ ಪ್ರಾ.ಆ.ಕೇಂದ್ರದ ಸಿಬ್ಬಂದಿ ಮೆಗ್ಗಾನ ರಕ್ತ ಕೇಂದ್ರದ ಸಿಬ್ಬಂದಿ ಇದ್ದರು.