ರಕ್ತದಾನದಿಂದ ಅಮೂಲ್ಯ ಜೀವ ಉಳಿಯುತ್ತವೆ: ವಿಮಲ್ ಸಿಂಗ್

| Published : Jun 15 2024, 01:10 AM IST

ರಕ್ತದಾನದಿಂದ ಅಮೂಲ್ಯ ಜೀವ ಉಳಿಯುತ್ತವೆ: ವಿಮಲ್ ಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಆಗೊಗ್ಗೆ ಈಗೊಮ್ಮೆ ರಕ್ತದಾನ ನೀಡುವ ಮೂಲಕ ಇನ್ನೊಬ್ಬರ ಜೀವ ಉಳಿಸಿದ ಪುಣ್ಯದ ಕಾರ್ಯ ಮಾಡಬೇಕು.

ಮರಿಯಮ್ಮನಹಳ್ಳಿ: ಯಾವುದೇ ಒಬ್ಬ ವ್ಯಕ್ತಿ ಈ ಸಮಾಜಕ್ಕೆ ನೀಡುವ ಮಹತ್ವರ ಕೊಡುಗೆಗಳಲ್ಲಿ ರಕ್ತದಾನವೇ ಶ್ರೇಷ್ಠದಾನವಾಗಿದೆ. ಮನುಷ್ಯ ಆಗೊಗ್ಗೆ ಈಗೊಮ್ಮೆ ರಕ್ತದಾನ ನೀಡುವ ಮೂಲಕ ಇನ್ನೊಬ್ಬರ ಜೀವ ಉಳಿಸಿದ ಪುಣ್ಯದ ಕಾರ್ಯ ಮಾಡಬೇಕು ಎಂದು ಬಿಎಂಎಂ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಡಣಾಪುರ ಬಳಿ ಇರುವ ಬಿ.ಎಂ.ಎಂ.ಇಸ್ಮಾತ್ ಸಂಸ್ಥೆ, ಜೆ.ಎಸ್.ಡಬ್ಲ್ಯೂ ಫೌಂಡೇಶನ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹೊಸಪೇಟೆ ಹಾಗೂ ವಿಮ್ಸ್ ರಕ್ತ ಭಂಡಾರ ಬಳ್ಳಾರಿ ಇವರ ಸಹಯೋಗದಲ್ಲಿ ಶುಕ್ರವಾರ ನಡೆದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಶಿಬಿರದ ಈ ಅಭೂತಪೂರ್ವ ಕಾರ್ಯದಲ್ಲಿ ಶಾಲಾ​-ಕಾಲೇಜು ವಿದ್ಯಾರ್ಥಿಗಳು, ಸಂಘ, ​ಸಂಸ್ಥೆಗಳು, ಸಾರ್ವಜನಿಕರು ಸಕ್ರೀಯವಾಗಿ ಪಾಲ್ಗೊಂಡು ಸ್ವಯಂ ಇಚ್ಛೆಯಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.

ಯಾವುದೇ ಜಾತಿ, ಧರ್ಮ, ಮತ, ಪಂಥ ಪರಿಗಣಿಸದೇ ಎಲ್ಲರನ್ನು ಒಗ್ಗೂಡಿಸುವ ಮಾನವೀಯ ಮೌಲ್ಯಉಳ್ಳ ಏಕೈಕ ದಾನವೆಂದರೆ ಅದು ರಕ್ತದಾನ. ರಕ್ತದಾನ ಮಾಡುವುದರಿಂದ ಹೃದಯಾಘಾತ, ಕ್ಯಾನ್ಸರ್‌ಗಳಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವ ಸಂಭವ ಕಡಿಮೆ ಎಂದ ಅವರು, ಸಾವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಪ್ರತಿ ವರ್ಷ ಜೂ.14ರಂದು ರಕ್ತದಾನಿಗಳ ದಿನವನ್ನಾಗಿ ಸಾವತ್ರಿಕವಾಗಿ ಆಚರಿಸಲಾಗುತ್ತಿದೆ ಎಂದರು.

ಮರಿಯಮಮನಹಳ್ಳಿಯ ಖ್ಯಾತ ವೈದ್ಯ ಹಾಗೂ ಬಿ.ಎಂ.ಎಂ. ಸಂಸ್ಥೆಯ ಮುಖ್ಯ ವೈಧ್ಯಾಧಿಕಾರಿ ಡಾ. ಪಿ. ವಿಜಯ ವೆಂಕಟೇಶ್ ಮಾತನಾಡಿ, ರಕ್ತದಾನದ ಬಗೆಗಿರುವ ಜನರಲ್ಲಿರುವ ತಪ್ಪು ತಿಳಿವಳಿಕೆ ದೂರಾಗಿಸಿ, ರಕ್ತದಾನ ಮಾಡುವುದರಿಂದಾಗುವ ನಮಗಾಗುವ ಪ್ರಯೋಜನಗಳ ಕುರಿತು ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಯ ಡಾ. ಸೋಮಶೇಖರ, ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ವಿ.ವಿ.ವಿ.ರಾಜು ಕಂಪನಿಯ ಉಪಾಧ್ಯಕ್ಷ ಮನೀಶ್ ಡಿ.ವರ್ಣೇಕರ್, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ, ಬಿಎಂಎಂ ವೃತ್ತೀಯ ಆರೋಗ್ಯ ಕೇಂದ್ರದ ಡಾ. ಅಂಜಿನಿ, ಡಾ. ಸುಧೀರ್, ಡಾ. ಜನಾರ್ಧನ, ಡಾ. ಅನುಷ, ಬಳ್ಳಾರಿ ರಕ್ತ ಭಂಡಾರದ ಸಂತೋಷ್ ಎಂ.ಜಿ. ಹನುಮೇಶ್ ಅಂಜಿನಪ್ಪ ಇದ್ದರು.