ರಕ್ತದಾನ ಸೇವೆ ಸಮಾಜಕ್ಕೆ ಸಹಕಾರಿ

| Published : Aug 17 2025, 01:40 AM IST

ಸಾರಾಂಶ

ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಸಹಕಾರ, ವಿಶ್ವಾಸ ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬುದ್ಧ ಪೌಂಡೇಶನ್ ಅವರ ಕಾರ್ಯ ಶ್ಲಾಘನೀಯ ಎಂದು ಬಾಲಯೋಗಿ ಜಗದೀಶ್ವರ ಸ್ವಾಮೀಜಿ ನುಡಿದಿದ್ದಾರೆ.

- ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬಾಲಯೋಗಿ ಜಗದೀಶ್ವರ ಶ್ರೀ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಸಹಕಾರ, ವಿಶ್ವಾಸ ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬುದ್ಧ ಪೌಂಡೇಶನ್ ಅವರ ಕಾರ್ಯ ಶ್ಲಾಘನೀಯ ಎಂದು ಬಾಲಯೋಗಿ ಜಗದೀಶ್ವರ ಸ್ವಾಮೀಜಿ ನುಡಿದರು.

ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರಿಹರದ ಬುದ್ಧ ಫೌಂಡೇಶನ್, ದಾವಣಗೆರೆಯ ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ ಶುಕ್ರವಾರ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಕ್ತದಾನ ನಿರ್ಣಯ ಹಲವರ ಬದುಕಿಗೆ ಬೆಳಕನ್ನು ತರುವಂತಹ ಹಾಗೂ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವಾರು ಜನರು ತಮ್ಮ ಅಮೂಲ್ಯವಾದ ರಕ್ತವನ್ನು ದಾನ ಮಾಡಿ ಮಾನವೀಯತೆಗೆ ಮಾದರಿಯಾಗಿದ್ದಾರೆ. ಇದು ನಾಗರಿಕರಲ್ಲಿ ಸೇವಾ ಮನೋಭಾವನೆ ಹುಟ್ಟಿಸುವುದರಲ್ಲಿ ಬಹುದೊಡ್ಡ ಹಂತವಾಗಿದೆ. ಇದೇ ರೀತಿಯಲ್ಲಿ ಟ್ರಸ್ಟ್‌ನ ಸೇವೆಗಳು ಸಾಗಬೇಕು. ಆಡಂಬರದ ಆಚರಣೆಗಳನ್ನು ಮಾಡದೇ ರಕ್ತದಾನ ಶಿಬಿರ ಆಯೋಜನೆ ಮೂಲಕ ಸ್ವಾತಂತ್ರ್ಯ ದಿನ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

ಬುದ್ಧ ಫೌಂಡೇಶನ್‍ ಅಧ್ಯಕ್ಷ ಮಹೇಶ್‍ಕುಮಾರ್ ಎನ್.ಮಾತನಾಡಿ, ಸದೃಢ ಹಾಗೂ ಸುಭದ್ರ ಸಮಾಜ ನಿರ್ಮಾಣವೇ ನಮ್ಮ ಟ್ರಸ್ಟ್‌ ಉದ್ಧೇಶವಾಗಿದೆ. ತುರ್ತು ಹಾಗೂ ಅಗತ್ಯ ರೋಗಿಗಳಿಗೆ ರಕ್ತದಾನ ಮೂಲಕ ಸಾವಿರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಇಂದಿನ ಶಿಬಿರ ಆಯೋಜಿಸಲಾಗಿದೆ ಎಂದ ಅವರು, ಸದರಿ ರಕ್ತದಾನ ಶಿಬಿರಕ್ಕೆ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಗಣ್ಯರು, ರಕ್ತದಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಲಯನ್ಸ್ ಕ್ಲಬ್ ಆಸರೆ ದಾವಣಗೆರೆಯ ಅಧ್ಯಕ್ಷ ವೀರೇಶ್ ಎಸ್., ವಲಯ ಅಧ್ಯಕ್ಷ ಮೌನೇಶ್ ಎನ್.ಎಚ್., ಬುದ್ಧ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಷಣ್ಮುಖ ಎಸ್., ತಿಪ್ಪೇಶ್, ಪ್ರಭಾಕರ್ ವೈ.ಬಿ., ಸದಾಶಿವ, ಲಕ್ಷ್ಮೀನಾರಾಯಣ, ಅಭಿಷೇಕ್‌, ಆಕಾಶ್, ಗಗನ್, ಪ್ರಜ್ವಲ್, ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

- - -

-16ಎಚ್‍ಆರ್‍ಆರ್02, 02ಎ:

ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಬಾಲಯೋಗಿ ಜಗದೀಶ್ವರ ಶ್ರೀ, ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.