ಸಾರಾಂಶ
ನರೇಂದ್ರ ಮೋದಿ ಪ್ರಧಾನಿಯಾಗಿ ಜನಸಾಮಾನ್ಯರ ಕಷ್ಟನಷ್ಟಗಳಿಗೆ ಸ್ಪಂದಿಸುವ ಯೋಜನೆಯ ಮೂಲಕ ಹಲವಾರು ಕೊಡುಗೆ
ಕುಷ್ಟಗಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾದಿಂದ ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಸಿದರು.
ಶಾಸಕ ದೊಡ್ಡನಗೌಡ ಪಾಟೀಲ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಮಹತ್ವದ ಕಾರ್ಯವಾಗಿದೆ, ಅಪಘಾತ ಅಥವಾ ಹೆರಿಗೆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ.ಅಂತವರಿಗೆ ಸಕಾಲದಲ್ಲಿ ರಕ್ತದಾನ ಮಾಡಿದರೆ ಜೀವ ಉಳಿಸುವ ಜತೆಗೆ ಮಾನವೀಯ ಸಂಬಂಧಗಟ್ಟಿಗೊಳ್ಳುವದು ಎಂದು ಅಭಿಪ್ರಾಯಪಟ್ಟರು.ನರೇಂದ್ರ ಮೋದಿ ಪ್ರಧಾನಿಯಾಗಿ ಜನಸಾಮಾನ್ಯರ ಕಷ್ಟನಷ್ಟಗಳಿಗೆ ಸ್ಪಂದಿಸುವ ಯೋಜನೆಯ ಮೂಲಕ ಹಲವಾರು ಕೊಡುಗೆ ನೀಡಿದ್ದು, ಅವರ ಜನ್ಮದಿನದ ಈ ಸಾಮಾಜಿಕ ಕಾರ್ಯ ಮಾಡುವ ಮೂಲಕ ಆಚರಣೆ ಮಾಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಇದೆ ವೇಳೆ ತಾಯಿ ಹೆಸರಿನಲ್ಲಿ ಗಿಡವೊಂದನ್ನು ನೆಟ್ಟು ಕಾರ್ಯಕರ್ತರ ಕಾರ್ಯ ಶ್ಲಾಘೀಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬದಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ, ಮಾಜಿ ಜಿಪಂ ಸದಸ್ಯ ಕೆ.ಮಹೇಶ್, ಬಸವರಾಜ ಹಳ್ಳೂರ, ದುರಗಪ್ಪ ವಡಗೇರಿ, ಸಂಗನಗೌಡ ಜೈನರ್, ವಿಜಯ್ ದೇಸಾಯಿ, ದೊಡ್ಡಬಸವ ಸುಂಕದ, ಮನೋಹರ, ಮಾರುತಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೈಲಜಾ ಬಾಗಲಿ ಹಾಗೂ ಮಹಿಳಾ ಮೋರ್ಚಾ ಸೇರಿದಂತೆ ಪಕ್ಷದ ಪದಾಧಿಕಾರಿಗಳು ನೂರಾರು ಕಾರ್ಯಕರ್ತರು ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿ ರಕ್ತದಾನ ಮಾಡಿದರು.