ಸಾರಾಂಶ
ಹೊಂಬಾಳೇಗೌಡನ ಗ್ರಾಮದ ಮನೆಯೊಂದರಲ್ಲಿ ಹಲವೆಡೆ ರಕ್ತ ಚೆಲ್ಲಿದ್ದು, ವಾಮಾಚಾರದ ಶಂಕೆ ಮೂಡಿದೆ. ಗ್ರಾಮದ ಸತೀಶ್- ಸೌಮ್ಯ ದಂಪತಿಗೆ ಸೇರಿದ ಮನೆಯ ಒಳ ಆವರಣ ಮತ್ತು ಸ್ನಾನಗೃಹ ಸೇರಿದಂತೆ ಕೆಲವೆಡೆ ರಕ್ತದ ಕಲೆಗಳು ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಹೊಂಬಾಳೇಗೌಡನ ಗ್ರಾಮದ ಮನೆಯೊಂದರಲ್ಲಿ ಹಲವೆಡೆ ರಕ್ತ ಚೆಲ್ಲಿದ್ದು, ವಾಮಾಚಾರದ ಶಂಕೆ ಮೂಡಿದೆ.ಗ್ರಾಮದ ಸತೀಶ್- ಸೌಮ್ಯ ದಂಪತಿಗೆ ಸೇರಿದ ಮನೆಯ ಒಳ ಆವರಣ ಮತ್ತು ಸ್ನಾನಗೃಹ ಸೇರಿದಂತೆ ಕೆಲವೆಡೆ ರಕ್ತದ ಕಲೆಗಳು ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.ಕುಟುಂಬಸ್ಥರು ಮನೆಯಲ್ಲಿ ಇಲ್ಲದಿದ್ದಾಗ ಕಿಡಿಗೇಡಿಗಳು ವಾಮಾಚಾರ ಮಾಡಿಸಿರೋ ಶಂಕೆ ಮೂಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮನೆ ಬಳಿ ತಂಡೋಪ ತಂಡವಾಗಿ ಜನರು ಸೇರುತ್ತಿದ್ದಾರೆ. ಪ್ರಕರಣದ ಬಗ್ಗೆ ಗ್ರಾಮದ ಒಬ್ಬರಿಗೊಬ್ಬರು ಅಂತೆ ಕಂತೆಗಳಂತೆ ಮಾತನಾಡುತ್ತಿರುವುದು ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ಮೂಡಿಸಿದೆ.ವಿಷಯ ತಿಳಿದು ಗ್ರಾಮದ ಮನೆಗೆ ಆಗಮಿಸಿದ ತಾಲೂಕಿನ ಬೆಸಗರಹಳ್ಳಿ ಠಾಣೆ ಪೊಲೀಸರು, ಶ್ವಾನದಳ ತಂಡ ಪರಿಶೀಲನೆ ನಡೆಸಿದರು. ಮನೆಯಲ್ಲಿದ್ದ ರಕ್ತದ ಕಲೆ ಸ್ಯಾಂಪಲ್ ಅನ್ನು ಸಂಗ್ರಹಿಸಿದ ಎಫ್‌ಎಸ್‌ಎಲ್ ತಜ್ಞರ ತಂಡ ಪ್ರಯೋಗಾಲಯಕ್ಕೆ ಕಳಿಸಿದೆ. ವರದಿ ಬಂದ ನಂತರವೇ ಇದು ಮನುಷ್ಯನದೋ ಅಥವಾ ಪ್ರಾಣಿಯ ರಕ್ತವೋ ಎಂಬುದು ತಿಳಿಯಲಿದೆ.ಪ್ರಕರಣದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಮನೆ ತೊರೆಯಲು ಸತೀಶ್ ಸೌಮ್ಯ ದಂಪತಿ ಕುಟುಂಬ ನಿರ್ಧರಿಸಿದೆ ಎಂದು ಹೇಳಲಾಗಿದೆ.ಒಂದೇ ದಿನ ಪತಿ ಪತ್ನಿ ಸಾವು; ಸಾವಿನಲ್ಲೂ ಒಂದಾದ ದಂಪತಿ..!
ಕೆ.ಆರ್.ಪೇಟೆ: ಗಂಡ, ಹೆಂಡತಿ ಇಬ್ಬರು ಒಂದೇ ದಿನ ನಿಧನರಾಗಿ ಸಾವಿನಲ್ಲೂ ಒಂದಾಗಿರುವ ಘಟನೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೌರಮ್ಮ ಭಾನುವಾರ ಅನಾರೋಗ್ಯದಿಂದ ನಿಧನರಾಗಿದ್ದರು. ಗೌರಮ್ಮರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಅವರ ಪತಿ ಲಿಂಗರಾಜ ನಾಯಕ ಪತ್ನಿ ಶವಕ್ಕೆ ಪೂಜೆ ಸಲ್ಲಿಸುವ ವೇಳೆ ಅಸ್ವಸ್ಥಗೊಂಡು ಕುಸಿದು ಸಾವನ್ನಪ್ಪಿದ್ದಾರೆ.ಕಳೆದ 46 ವರ್ಷಗಳ ಹಿಂದೆ ವಿವಾಹವಾಗಿದ್ದ ಗೌರಮ್ಮ ಮತ್ತು ನಿಂಗರಾಜ ನಾಯಕ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಹೋಗಿ ಬರುತ್ತಿದ್ದರು. ಈ ದಂಪತಿಗೆ ಜಗದೀಶ್ ಮತ್ತು ವಿಜಯ್ ಕುಮಾರ್ ಎಂಬ ಇಬ್ಬರು ಪುತ್ರರಿದ್ದರು.
ನಂತರ ಕುಟುಂಬಸ್ಥರು, ಬಂಧುಗಳು ಮೃತಪಟ್ಟ ಇಬ್ಬರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರ ನೆರವಿನೊಂದಿಗೆ ಅವರ ಜಮೀನಿನಲ್ಲಿ ಅಕ್ಕಪಕ್ಕ ಹೂಳುವ ಮೂಲಕ ಅಂತ್ಯ ಸಂಸ್ಥಾರ ನೆರವೇರಿಸಿದ್ದಾರೆ. ಒಂದೇ ದಿನ ದಂಪತಿ ಸಾವನ್ನಪ್ಪಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದು ದುಃಖ ವ್ಯಕ್ತಪಡಿಸಿದರು. ಇಬ್ಬರು ಪುತ್ರರಿಗೆ ಸಾಂತ್ವನ ಹೇಳಿದರು.;Resize=(128,128))
;Resize=(128,128))