ಕೊಡಗು ಮಿಡ್ ಸಿಟಿ ಆಸ್ಪತ್ರೆಯಿಂದ ರಕ್ತ ಪರೀಕ್ಷ ಶಿಬಿರ

| Published : Oct 29 2025, 11:15 PM IST

ಸಾರಾಂಶ

ಸುಂಟಿಕೊಪ್ಪ ಕೊಡಗು ಮಿಡ್‌ಸಿಟಿ ಆಸ್ಪತ್ರೆ ವತಿಯಿಂದ ವಾಹನ ಮತ್ತು ಆಟೋ ಚಾಲಕರಿಗೆ ಉಚಿತ ರಕ್ತ ಪರೀಕ್ಷೆ ಶಿಬಿರ ನಡೆಸಲಾಯಿತು.

ಸುಂಟಿಕೊಪ್ಪ: ಸುಂಟಿಕೊಪ್ಪ ಕೊಡಗು ಮಿಡ್‌ಸಿಟಿ ಆಸ್ಪತ್ರೆ ವತಿಯಿಂದ ವಾಹನ ಮತ್ತು ಆಟೋ ಚಾಲಕರಿಗೆ ಉಚಿತ ರಕ್ತ ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಗುರುವಾರದಂದು ಸುಂಟಿಕೊಪ್ಪದ ವಾಹನ ಮತ್ತು ಆಟೋ ಚಾಲಕರಿಗಾಗಿ ಕೊಡಗು ಮಿಡ್‌ಸಿಟಿಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ. ಮನ್ಸೂರ್ ಉಚಿತವಾಗಿ ರಕ್ತ ಪರೀಕ್ಷೆ ಶಿಬಿರವನ್ನು ನಡೆಸಿದರು. ಸುಮಾರು 50 ಕ್ಕೂ ಮಿಕ್ಕಿ ಚಾಲಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಸುಂಟಿಕೊಪ್ಪ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಎಚ್.ಶರೀಫ್, ಕಾರ್ಯದರ್ಶಿ ಸಚಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.