ಕೆಂಪು ಕಲ್ಲು, ಮರಳು ನಿಯಮ ಸಡಿಲಗೊಳಿಸಲು ಬಿಎಂಎಸ್‌ ವಾರದ ಗಡುವು

| Published : Jul 10 2025, 12:49 AM IST

ಕೆಂಪು ಕಲ್ಲು, ಮರಳು ನಿಯಮ ಸಡಿಲಗೊಳಿಸಲು ಬಿಎಂಎಸ್‌ ವಾರದ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರು ತೊಂದರೆಗೆ ಒಳಗಾಗಿದ್ದು ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಬೆಳ್ತಂಗಡಿ ತಾಲೂಕು ಸೌಧದ ಎದುರು ಬಿಎಂಎಸ್‌ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಕಟ್ಟಡ ಕೆಲಸಕ್ಕೆ ಬೇಕಾದ ಮರಳು, ಕೆಂಪು ಕಲ್ಲು ಸಿಗದೆ ಕಟ್ಟಡದ ಕಾಮಗಾರಿ ನಡೆಯಿತ್ತಿಲ್ಲ. ವಾರದೊಳಗೆ ನಿಯಮ ಸಡಿಲಗೊಳಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ದ.ಕ. ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್‌ ಎಚ್ಚರಿಸಿದ್ದಾರೆ.ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರು ತೊಂದರೆಗೆ ಒಳಗಾಗಿದ್ದು ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಬೆಳ್ತಂಗಡಿ ತಾಲೂಕು ಸೌಧದ ಎದುರು ಬಿಎಂಎಸ್‌ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಬಿಎಂಎಸ್‌ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ, ಕಾರ್ಮಿಕ ಸಚಿವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಮರಳು , ಕೆಂಪುಕಲ್ಲು ಸಿಗದೆ ಕಾರ್ಮಿಕರ ಬದುಕು ನರಕಸದೃಶವಾಗಿದೆ. ಇಂತಹ ಕಾರ್ಮಿಕ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ ಎಂದರು.ಅಧಿಕಾರಿಗಳ ಗೊಡ್ಡು ಬೆದರಿಕೆಗೆ ಕಾರ್ಮಿಕರು ಹೆದುರುವುದಿಲ್ಲ. ತಕ್ಷಣ ಮರಳು ,ಕೆಂಪುಕಲ್ಲಿನ ನಿಯಮ ಸಡಿಲಗೊಳಿಸಿ ಎಂದರು. ರಾಜ್ಯ ಅಸಂಘಟಿತ ಕಾರ್ಮಿಕ ಸಂಘಗಳ ಮುಖಂಡ ಅಶೋಕ್ ಮಾತನಾಡಿ, ಇದು ಕಾರ್ಮಿಕ ವಿರೋಧಿ ಸರ್ಕಾರ ಎಂದರು.ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅದ್ಯಕ್ಷ ಶ್ರಿನಿವಾಸ್, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅದ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಸಂಚಾಲಕ ಕುಮಾರ್ ವೈ ಚಿತ್ರದುರ್ಗ, ರಾಜ್ಯ ಗೌರವಾಧ್ಯಕ್ಷ ಶಿವಣ್ಣ ಮೈಸೂರು, ರಾಜ್ಯ ಅಧ್ಯಕ್ಷ ಎನ್ ರಮೇಶ್ ಚಿತ್ರದುರ್ಗ, ಉಪಾಧ್ಯಕ್ಷ ರಮೇಶ್ ಮರಿಗೌಡ್ರು ಬೆಂಗಳೂರು, ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಕುಮಾರ್ ಗೌಡ ಗಂಗಾವತಿ ಕೊಪ್ಪಳ, ಚಂದ್ರು ಮೈಸೂರು, ಲಿಂಗರಾಜು ಮೈಸೂರು, ತಿಮ್ಮಣ್ಣ ಚಿತ್ರದುರ್ಗ, ನಾಗೇಶ್ ಮೈಸೂರು ಮತ್ತಿತರರಿದ್ದರು.

ನೂರಾರು ಕಾರ್ಮಿಕರು ಬಿಎಂಎಸ್‌ ಕಚೇರಿಯಿಂದ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.