ಈಶಾಗೆ ಬಿಎಂಟಿಸಿಯಿಂದ ಪ್ರವಾಸಿ ಪ್ಯಾಕೇಜ್‌ ಸೇವೆ

| Published : Mar 06 2024, 02:21 AM IST

ಈಶಾಗೆ ಬಿಎಂಟಿಸಿಯಿಂದ ಪ್ರವಾಸಿ ಪ್ಯಾಕೇಜ್‌ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಶಿವರಾತ್ರಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿರುವ ಈಶಾ ಆದಿಯೋಗಿ ಪ್ರತಿಮೆಗೆ ಬಿಎಂಟಿಸಿ ತಲಾ 500 ರು.ಗೆ ಪ್ರವಾಸಿ ಪ್ಯಾಕೇಜ್‌ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರದ ಆದಿಯೋಗಿ ಶಿವನ ಬೃಹತ್‌ ಮೂರ್ತಿ ಇರುವ ಈಶಾ ಫೌಂಡೇಷನ್‌ಗೆ ಮಾ. 8ರಿಂದ ಸಾರ್ವತ್ರಿಕ ರಜಾ ದಿನಗಳು ಹಾಗೂ ವಾರಾಂತ್ಯದ ದಿನಗಳಂದು ವಿಶೇಷ ಪ್ರವಾಸಿ ಪ್ಯಾಕೇಜ್‌ ಆರಂಭಿಸಲಾಗುತ್ತಿದೆ.ಪ್ರವಾಸಿ ಪ್ಯಾಕೇಜ್‌ ಸೇವೆಯನ್ನು ಹವಾನಿಯಂತ್ರಿತ ಬಸ್‌ಗಳ ಮೂಲಕ ನೀಡಲಾಗುತ್ತದೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 12 ಗಂಟೆಗೆ ಹೊರಡುವ ಬಿಎಂಟಿಸಿ ಎಸಿ ಬಸ್‌ ಹೊರಡಲಿದೆ. ಪ್ರವಾಸಿ ಪ್ಯಾಕೇಜ್‌ ಸೇವೆ ಮೂಲಕ ಪ್ರಯಾಣಿಕರನ್ನು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಮುದ್ದೇನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ಸಮಾಧಿ, ರಂಗಸ್ಥಳ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಈಶಾ ಫೌಂಡೇಷನ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ವೀಕ್ಷಣೆ ನಂತರ ರಾತ್ರಿ 9.30ಕ್ಕೆ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ವಾಪಾಸಾಗಲಾಗುತ್ತದೆ. ಪ್ರತಿ ಆಸನಕ್ಕೆ 500 ರು. ಪ್ರಯಾಣ ದರ ನಿಗದಿ ಮಾಡಲಾಗಿದೆ.