ಆಧ್ಯಾತ್ಮಿಕ ಪ್ರವಚನಗಳಿಂದ ದೇಹ, ಮನಸ್ಸು ಶುದ್ಧಿಗೊಳ್ಳುತ್ತದೆ- ಡಾ. ಸಿದ್ಧರಾಮ ಶ್ರೀಗಳು

| Published : Nov 25 2023, 01:15 AM IST

ಆಧ್ಯಾತ್ಮಿಕ ಪ್ರವಚನಗಳಿಂದ ದೇಹ, ಮನಸ್ಸು ಶುದ್ಧಿಗೊಳ್ಳುತ್ತದೆ- ಡಾ. ಸಿದ್ಧರಾಮ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಶುಕ್ರವಾರ ಸಂಜೆಯಿಂದ 10 ದಿನಗಳ ಕಾಲ ನಡೆಯುವ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಗದಗದಲ್ಲಿ ಗವಿಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟನೆಗದಗ:

ಆಧ್ಯಾತ್ಮಿಕ ಪ್ರವಚನಗಳನ್ನು ಅದರಲ್ಲಿಯೂ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಪ್ರವಚನವನ್ನು ಕೇಳುವುದರಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧಗೊಳ್ಳುತ್ತವೆ. ನೆಮ್ಮದಿಯ ಬದುಕು ರೂಪುಗೊ‍ಳ್ಳುತ್ತದೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಹೇಳಿದರು. ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಶುಕ್ರವಾರ ಸಂಜೆಯಿಂದ 10 ದಿನಗಳ ಕಾಲ ನಡೆಯುವ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಈಗಾಗಲೇ ನಾಡಿನಾದ್ಯಂತ ತಮ್ಮ ಅಮೂಲ್ಯವಾದ ಪ್ರವಚನದ ಮೂಲಕ ಸಾರ್ವಜನಿಕರ ಬದುಕಿನಲ್ಲಿ ಅಮೂಲ್ಯ ಬದಲಾವಣೆ ತಂದಿರುವ ಶ್ರೀಗಳ ಮಾತುಗಳು ಗದಗ ಪರಿಸರದಲ್ಲಿ ನೆಮ್ಮದಿಯ ಗಾಳಿ ಬೀಸುವಂತಾ ವಾತಾವರಣ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು, ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ, ಮುಕ್ಕಣ್ಣೇಶ್ವರ ಮಠದ ಶ್ರೀಗಳು, ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು, ಅಭಿನವ ಶಿವಾನಂದ ಶ್ರೀಗಳು ಪ್ರವಚನ ಮಾಲಿಕೆ ಕಾರ್ಯಕ್ರಮದ ಕುರಿತು ಆಶೀರ್ವಚನ ನೀಡಿದರು. ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಗವಿಸಿದ್ದೇಶ್ವರ ಶ್ರೀಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ ಸೇರಿದಂತೆ ಅವಳಿ ನಗರದ ಪ್ರಮುಖರು, ಮಹಿಳೆಯರು ಪ್ರವಚನ ಆಯೋಜನೆ ಮಾಡಿರುವ ಗದಗ ಎಪಿಎಂಸಿಯ ಪ್ರಮುಖರು ಹಾಜರಿದ್ದರು.