ದೇಹ ಕಸದ ಬುಟ್ಟಿಯಲ್ಲ, ಸಮತೂಕದ ಆಹಾರ ಸೇವಿಸಿ: ಡಾ. ಸ್ಮಿತಾ ಭಟ್‌

| Published : Jun 08 2024, 12:33 AM IST

ದೇಹ ಕಸದ ಬುಟ್ಟಿಯಲ್ಲ, ಸಮತೂಕದ ಆಹಾರ ಸೇವಿಸಿ: ಡಾ. ಸ್ಮಿತಾ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಭಾ ಕಾರ್ಯಕ್ರಮಕ್ಕೂ ಮುನ್ನ, ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎಂಬ ಕಿರುನಾಟಕ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಹಾರ ಕೇವಲ ಒಂದು ಜಡವಸ್ತುವಲ್ಲ, ಅದು ನಮ್ಮದೇಹವನ್ನು ಪ್ರವೇಶಿಸಿ ದೇಹಕ್ಕೆ ಶಕ್ತಿ ತುಂಬುವ ವಸ್ತು. ನಮ್ಮ ದೇಹ ಕಸದ ಬುಟ್ಟಿಯಲ್ಲ. ಹಾಗಾಗಿ ಆಹಾರವೆಂದುಕೊಂಡು ಸಿಕ್ಕಿದನ್ನೆಲ್ಲ ತಿನ್ನದೆ ಸಮತೂಕದ ಆಹಾರವನ್ನುಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಡಾ. ಸ್ಮಿತಾ ಭಟ್‌ ಯು.ಎಸ್‌. ನುಡಿದರು.

ಅವರು ಎಕ್ಸಲೆಂಟ್ ಪ್ರೌಢಶಾಲಾ ವತಿಯಿಂದ ಜರುಗಿದ ಆಹಾರ ಸುರಕ್ಷತಾ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿರು.

ಆಹಾರದ ಘಟಕಗಳು, ಅವುಗಳ ಮೂಲಗಳು ಮತ್ತು ಅವುಗಳ ಉಪಯುಕ್ತತೆ ತಿಳಿಸಿಕೊಟ್ಟು, ಅದರ ಜೊತೆಗೆ ಸಿಕ್ಕಿದನ್ನೆಲ್ಲ ತಿನ್ನುತ್ತಾ ಹೋದರೆ, ನಾವು ತಿಂದ ಆಹಾರವೇ ಮುಂದೆ ವಿಷವಾಗಿ ನಮಗೆ ಅಪಾಯ ತರುತ್ತದೆ. ಜಂಕ್‌ಫುಡ್ ಎಂಬ ಮಾರಿಯನ್ನು ದೂರವಿಟ್ಟು, ಅತಿಯಾದ ಸಕ್ಕರೆ, ಉಪ್ಪು, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಎಂದರು ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ, ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎಂಬ ಕಿರುನಾಟಕ ಪ್ರದರ್ಶನ, ನಂತರದಲ್ಲಿ ನಮ್ಮ ಸುತ್ತಮುತ್ತ ಸುಲಭದಲ್ಲಿ ದೊರೆಯುವ ಅನೇಕ ಅಹಾರ ಪದಾರ್ಥಗಳಾದ ಮಾವಿನಕಾಯಿ, ಎಳನೀರು, ಒಂದೆಲಗ, ಪೇರಳೆ, ಬಾಳೆಹಣ್ಣು, ಈರುಳ್ಳಿ ಇತ್ಯಾದಿಗಳ ಉಪಯೋಗಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು.

ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್ ಮಾತಾನಾಡಿ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ಅದರ ಬಗ್ಗೆ ಮನಗೆ ಸ್ಪಷ್ಟ ಅರಿವಿರಬೇಕು ಎಂದರು. ಆಹಾರ ಸುರಕ್ಷತಾ ದಿನದ ಮಹತ್ವ ಸಾರುವ ವೀಡಿಯೊ ಸಂದೇಶವನ್ನು ಪ್ರಸ್ತುತಪಡಿಸಲಾಯಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಚ್ಚಿನ್ ನಾಯಕ್ ವಂದಿಸಿದರು.