ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಶಾರ್ಪ್ ಶೂಟರ್‌ಗಳಿಗೆ ಓಪನ್ ಶೂಟಿಂಗ್ ಸ್ಪರ್ಧೆ ‘ಬೊಡಿ ನಮ್ಮೆ’ ನಡೆಯಿತು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ .22 (50 ಮೀ.), 12 " ಬೋರ್ (30 ಮೀ.) ಹಾಗೂ ಏರ್ ರೈಫಲ್ ಎಗ್ ಶೂಟಿಂಗ್ (15 ಮೀ.) ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.50, 30 ಮೀ. ದೂರದಲ್ಲಿದ್ದ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವಲ್ಲಿ ಹಲವು ಮಂದಿ ಯಶಸ್ವಿಯಾದರು. ಜಿಲ್ಲೆಯ ವಿವಿಧೆಡೆಯಿಂದ ಬಂದ ಸುಮಾರು 396ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡು ಗುರಿ ಪರೀಕ್ಷೆಯಲ್ಲಿ ತೊಡಗಿದ್ದು, ಮಹಿಳೆಯರೂ ಬಂದೂಕು ಹಿಡಿದು ತಮ್ಮ ಗುರಿ ಪ್ರದರ್ಶನ ನೀಡಿದರು.ಬೊಡಿ ನಮ್ಮೆ ಸ್ಪರ್ಧೆಗೆ ಕುಟುಂಬದ ಹಿರಿಯರಾದ ಎಂ.ಬಿ.ಪೊನ್ನಪ್ಪ ಹಾಗೂ ಹಾಕಿ ಉತ್ಸವದ ಮುಖ್ಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರಿನಿವಾಸ್ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ, ಕೋವಿಯನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ಬಳಸುವಂತೆ ಸಲಹೆ ನೀಡಿದರು.ಈ ಸಂದರ್ಭ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಸಂಯೋಜಕ ಮುದ್ದಂಡ ರಾಯ್ ತಮ್ಮಯ್ಯ, ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಪ್ರಮುಖರಾದ ವಿಜು ಚಂಗಪ್ಪ ಸೇರಿದಂತೆ ಮತ್ತಿತರು ಇದ್ದರು.ಸ್ಪರ್ಧಾ ವಿಜೇತರು:ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ .22 (50ಮೀ)ನಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ, ಚಿಯಕಪೂವಂಡ ಜೀವನ್ ದ್ವಿತೀಯ, ಪುತ್ತರೀರ ನಂಜಪ್ಪ ತೃತೀಯ ಸ್ಥಾನ ಪಡೆದುಕೊಂಡರು.
12 ಬೋರ್ ತೆಂಗಿನಕಾಯಿ ಶೂಟಿಂಗ್ (30ಮೀ) ಸ್ಪರ್ಧೆಯಲ್ಲಿ ಸಿಜು ಮಂಡ್ಯ ಪ್ರಥಮ, ಆಲೆಮಾಡ ಬೋಪಣ್ಣ ದ್ವಿತೀಯ, ಪುಗ್ಗೇರ ರಾಜೇಶ್ ತೃತೀಯ ಸ್ಥಾನ ಪಡೆದುಕೊಂಡರು. ಏರ್ ರೈಫಲ್ ಎಗ್ ಶೂಟಿಂಗ್ (15ಮೀ) ವಿಭಾಗದಲ್ಲಿ ಕೇಚಿರ ಶಮನ್ ಪ್ರಥಮ, ಕೆ.ಜೆ.ನವೀನ್, ಬಡವಂಡ ಧನು ದೇವಯ್ಯ ತೃತೀಯ ಸ್ಥಾನ ಪಡೆದುಕೊಂಡರು.ವಿಜೇತರಿಗೆ ಪ್ರಥಮ 20 ಸಾವಿರ ರು., ದ್ವಿತೀಯ 15 ಸಾವಿರ ರು. ಹಾಗೂ ತೃತೀಯ ಸ್ಥಾನ ಪಡೆದವರಿಗೆ 10 ಸಾವಿರ ರು. ನಗದು ಹಾಗೂ ಆಕರ್ಷಕ ಸಿಲ್ವರ್ ಟ್ರೋಫಿ ನೀಡಲಾಯಿತು.ರಸ ಪ್ರಶ್ನೆ ಸ್ಪರ್ಧೆ:ಮುದ್ದಂಡ ಹಾಕಿ ಉತ್ಸವದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಸ ಪ್ರಶ್ನೆ ಸ್ಪರ್ಧೆ ‘ಕೊಡವ ಚೊದ್ಯ’ ಸ್ಪರ್ಧೆಯ ಅಂತಿಮ ಸುತ್ತು ಭಾನವಾರ ನಡೆಯಿತು.ಅಂತಿಮ ಸುತ್ತಿಗೆ ಶಾಂತೆಯಂಡ, ಚಿಯಕಪೂವಂಡ, ಅಮ್ಮಣಿಚಂಡ, ಓಡಿಯಂಡ (ಸೂರ್ಲಬ್ಬಿ), ಕುಪ್ಪಂಡ (ಕೈಕೇರಿ), ಪೆಮ್ಮಡಿಯಂಡ ಸೇರಿದಂತೆ ಆರು ತಂಡಗಳು ಆಯ್ಕೆಯಾಗಿದ್ದು, ಅಂತಿಮ ಆರು ಸುತ್ತಿನ ಸ್ಪರ್ಧೆಯಲ್ಲಿ ಕುಪ್ಪಂಡ (ಕೈಕೇರಿ) ತಂಡ 150 ಅಂಕ ಪಡೆಯುವ ಮೂಲಕ ಮೊದಲನೇ ಸ್ಥಾನ ಪಡೆದುಕೊಂಡರೆ, ಪೆಮ್ಮಡಿಯಂಡ ತಂಡ 110 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಅಮ್ಮಣಿಚಂಡ ತಂಡ 100 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿತು.ರಸ ಪ್ರಶ್ನೆ ಸ್ಪರ್ಧೆಯನ್ನು ಕ್ವಿಸ್ ಮಾಸ್ಟರ್ ಬೊಳ್ಳೆರ ಪೃಥ್ವಿ ಪೂಣಚ್ಚ, ಪಟ್ಟಮಾಡ ಪ್ರೀತ್ ಚಿಣ್ಣಪ್ಪ ನಡೆಸಿಕೊಟ್ಟರು. ಸಂಚಾಲಕರಾಗಿ ಪುಡಿಯಂಡ ಸುನೀಲ್ ಪೂವಯ್ಯ ಹಾಗೂ ಸಮಿತಿ ಸದಸ್ಯರಾಗಿ ಅಮ್ಮಣಿಚಂಡ ಸುಭಾಷ್ ಕಾರ್ಯಪ್ಪ, ಅಮ್ಮಣಿಚಂಡ ನಿರ್ಜಿತ್ ಕಾರ್ಯಪ್ಪ, ಐಚೆಟ್ಟೀರ ರೋಶನ್ ತಿಮ್ಮಯ್ಯ, ಚೆನ್ನಪಂಡ ದರ್ಶನ್, ನೆರ್ಪಂಡ ನವ್ಯ ಮಂದಪ್ಪ, ಬಲ್ಟಿಕಾಳಂಡ ದಿಶಾ ಹೇಮಾವತಿ, ಮುದ್ದಂಡ ಗ್ರೀಷ್ಮ, ಮಾಚೆಟ್ಟೀರ ಬಿಶನ್ ಚಿಣ್ಣಪ್ಪ ಕಾರ್ಯನಿರ್ವಹಿಸಿದರು. ಸ್ಪರ್ಧೆಯ ಮೊದಲ ಸುತ್ತಿಗೆ 35 ತಂಡಗಳು ಸ್ಪರ್ಧಿಸಿದ್ದು, ಒಂದು ತಂಡದಲ್ಲಿ 3 ಮಂದಿ ಪಾಲ್ಗೊಂಡಿದ್ದರು. ಸ್ಪರ್ಧೆಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಉದ್ಘಾಟಿಸಿದರು.