ಅಧಿಕಾರದ ಆಸೆಗಾಗಿ ಬೊಮ್ಮಾಯಿ ಲೋಕಸಭೆಗೆ ಸ್ಪರ್ಧೆ: ಸಲೀಂ ಅಹ್ಮದ್

| Published : Apr 20 2024, 01:01 AM IST

ಅಧಿಕಾರದ ಆಸೆಗಾಗಿ ಬೊಮ್ಮಾಯಿ ಲೋಕಸಭೆಗೆ ಸ್ಪರ್ಧೆ: ಸಲೀಂ ಅಹ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತಿಯಾಗಿದ್ದ ಬೊಮ್ಮಾಯಿ ಹಾನಗಲ್ಲಿಗೆ ಏನ್ ಕೊಟ್ರು ಎಂದು ವಿಧಾನಪರಿಷತ್ ಸದಸ್ಯ ಸಲೀಂಅಹ್ಮದ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಈ ರಾಜ್ಯದ ಮುಖ್ಯಮಂತ್ರಿಯಾಗಿ ಹಾವೇರಿ ಜಿಲ್ಲೆಗೂ ನ್ಯಾಯ ಒದಗಿಸಲಾಗದ ಬಸವರಾಜ ಬೊಮ್ಮಾಯಿ ಈಗ ಮತ್ತೊಂದು ಅಧಿಕಾರದ ಲಾಲಸೆಗಾಗಿ ಲೋಕಸಭೆಗೆ ಸ್ಪರ್ಧಿಸಿದ್ದು, ಮತದಾರರು ಸರಿಯಾದ ಉತ್ತರ ನೀಡಿ ಅವರಿಗೆ ಪಾಠ ಕಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಲೀಂಅಹ್ಮದ ಕರೆ ನೀಡಿದರು.

ಶುಕ್ರವಾರ ಹಾನಗಲ್ಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಅವರ ರೋಡ್ ಶೋ ಬಳಿಕ ಮಾತನಾಡಿದ ಅವರು, ಮುಖ್ಯಮಂತಿಯಾಗಿದ್ದ ಬೊಮ್ಮಾಯಿ ಹಾನಗಲ್ಲಿಗೆ ಏನ್ ಕೊಟ್ರು? ಏನನ್ನೂ ಕೊಡಲಾರದವರಿಗೆ ಮತದಾರರು ಸೋಲನ್ನು ಕೊಡಬೇಕು. ಸಿದ್ಧಾಂತದ ಆಧಾರದ ಮೇಲೆ ಪಕ್ಷ ಕಟ್ಟಿ ಜನರಿಗೆ ನ್ಯಾಯ ಒದಗಿಸಿಕೊಡುತ್ತಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ನಾಯಕರು ಕಟ್ಟಿದ ಕನಸು ನನಸಾಗಲು ಕಾಂಗ್ರೆಸ್ ಬೆಂಬಲಿಸಿ. ನಾವು ಕಷ್ಟಕ್ಕೆ ಸ್ಪಂದಿಸುತ್ತೇವೆ. ಬಿಜೆಪಿಯದ್ದು ಕೇವಲ ಅಧಿಕಾರ ದಾಹ. ಕರ್ನಾಟಕದಲ್ಲಿ 25ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಲು ಗೆಲ್ಲುತ್ತಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ದೇಶಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆಶೀರ್ವದಿಸಿ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಮತದಾರರು ಈಗ ಬುದ್ಧಿವಂತರಾಗಿದ್ದಾರೆ. ಕರ್ನಾಟಕದಲ್ಲಿ ಭಾಗ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಿವೆ. ಎಲ್ಲ ಸಂದರ್ಭಗಳಲ್ಲಿ ಜನತೆಯ ಕಷ್ಟಕ್ಕೆ ನಿಲ್ಲುವ ಕಾಂಗ್ರೆಸ್ ನಿಮ್ಮೆಲ್ಲರ ಆಯ್ಕೆಯಾಗಲಿ. ನಿಮ್ಮ ಮನೆಗೆ ಒಂದು ಲಕ್ಷ ತಂದು ಕೊಡುವ ಮಹಾಲಕ್ಷ್ಮೀ ಬರುತ್ತಾಳೆ. ರೈತರ ಸಾಲ ಮನ್ನಾ ನಮ್ಮ ಘೋಷಣೆ. ಅಲ್ಲದೇ ಪ್ರತಿನಿತ್ಯ ₹400 ಕೂಲಿಯೊಂದಿಗೆ ಕಾರ್ಮಿಕರಿಗೆ ತಮ್ಮ ತಮ್ಮ ಊರಲ್ಲೇ ಕೆಲಸ ನೀಡುತ್ತೇವೆ. ಈಗ ನಿಮ್ಮ ಆಯ್ಕೆ ಕಾಂಗ್ರೆಸ್ ಮಾತ್ರ ಆಗಿರಲಿ. ಆರೋಗ್ಯ ಭಾರತ ನಮ್ಮ ಧ್ಯೇಯ. ಪ್ರತಿ ಕುಟುಂಬಕ್ಕೆ ₹25 ಲಕ್ಷ ಆರೋಗ್ಯ ವಿಮೆ ನಮ್ಮ ನಿರ್ಣಯ ಎಂದರು.

ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರ ನೀಡಿರುವ ಯೋಜನೆಗಳು ಸಾಫಲ್ಯವಾಗಿರುವ ಬಗ್ಗೆ ಆ ತಾಲೂಕಿನ ಜನತೆ ಬಹಿರಂಗವಾಗಿ ಕಾಂಗ್ರೆಸ್ ಯೋಜನೆಗಳಿಗೆ ಧನ್ಯತೆ ಹೇಳುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಈ ಜಿಲ್ಲೆಗೆ ಏನೂ ಮಾಡದ ಬಸವರಾಜ ಬೊಮ್ಮಾಯಿ ಮತ್ತೆ ಲೋಕಸಭೆಗೆ ಹೋಗಲು ಹವಣಿಸುತ್ತಿದ್ದಾರೆ. ನಾನು ನಿಮ್ಮ ಸೇವಕನಾಗಿ ಈ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಷ್ಠೆ ಹೊಂದಿದ್ದೇನೆ. ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ಮಂಜಣ್ಣ ನೀಲಗುಂದ, ಯಾಸೀರಖಾನ ಪಠಾಣ, ಸಿದ್ದನಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಗೀತಾ ಪೂಜಾರ, ಫಯಾಜ ಲೋಹಾರ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ಖುರ್ಷಿದ ಅಹ್ಮದ ಹುಲ್ಲತ್ತಿ, ಮಹೇಶ ಪವಾಡಿ, ಶಂಸಿಯಾಬಾನು ಬಾಳೂರ, ಮಮತಾ ಆರೇಗೊಪ್ಪ, ಮಾರುತಿ ತಾಂದಲೆ, ದುದ್ದು ಅಕ್ಕಿವಳ್ಳಿ, ಇರ್ಫಾನ, ಜಾಫರ ಬಾಳೂರ, ಸಿಕಂದರ ವಾಲಿಕಾರ, ವಿನಯ ಬಂಕನಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು.

ರೋಡ್ ಶೋ

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಹಾನಗಲ್ಲ ಪಟ್ಟಣದ ಕಿತ್ತೂರು ಚೆನ್ನಮ್ಮ ರಸ್ತೆ ಮೂಲಕವಾಗಿ, ಕಂಚಗಾರ ಓಣಿ, ಸ್ಟೇಟ್ ಬ್ಯಾಂಕ್‌ ರಸ್ತೆ, ಮಹಾತ್ಮಾಗಾಂಧಿ ವೃತ್ತದಿಂದ ಹಳೆ ಬಸ್‌ ನಿಲ್ದಾಣದ ವರೆಗೆ ಸಾವಿರಾರು ಜನರ ನಡುವೆ ರೋಡ್ ಶೋ ನಡೆಯಿತು.ಕನ್ನಡಪ್ರಭ ವಾರ್ತೆ ಹಾನಗಲ್ಲ

ಈ ರಾಜ್ಯದ ಮುಖ್ಯಮಂತ್ರಿಯಾಗಿ ಹಾವೇರಿ ಜಿಲ್ಲೆಗೂ ನ್ಯಾಯ ಒದಗಿಸಲಾಗದ ಬಸವರಾಜ ಬೊಮ್ಮಾಯಿ ಈಗ ಮತ್ತೊಂದು ಅಧಿಕಾರದ ಲಾಲಸೆಗಾಗಿ ಲೋಕಸಭೆಗೆ ಸ್ಪರ್ಧಿಸಿದ್ದು, ಮತದಾರರು ಸರಿಯಾದ ಉತ್ತರ ನೀಡಿ ಅವರಿಗೆ ಪಾಠ ಕಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಲೀಂಅಹ್ಮದ ಕರೆ ನೀಡಿದರು.

ಶುಕ್ರವಾರ ಹಾನಗಲ್ಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಅವರ ರೋಡ್ ಶೋ ಬಳಿಕ ಮಾತನಾಡಿದ ಅವರು, ಮುಖ್ಯಮಂತಿಯಾಗಿದ್ದ ಬೊಮ್ಮಾಯಿ ಹಾನಗಲ್ಲಿಗೆ ಏನ್ ಕೊಟ್ರು? ಏನನ್ನೂ ಕೊಡಲಾರದವರಿಗೆ ಮತದಾರರು ಸೋಲನ್ನು ಕೊಡಬೇಕು. ಸಿದ್ಧಾಂತದ ಆಧಾರದ ಮೇಲೆ ಪಕ್ಷ ಕಟ್ಟಿ ಜನರಿಗೆ ನ್ಯಾಯ ಒದಗಿಸಿಕೊಡುತ್ತಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ನಾಯಕರು ಕಟ್ಟಿದ ಕನಸು ನನಸಾಗಲು ಕಾಂಗ್ರೆಸ್ ಬೆಂಬಲಿಸಿ. ನಾವು ಕಷ್ಟಕ್ಕೆ ಸ್ಪಂದಿಸುತ್ತೇವೆ. ಬಿಜೆಪಿಯದ್ದು ಕೇವಲ ಅಧಿಕಾರ ದಾಹ. ಕರ್ನಾಟಕದಲ್ಲಿ 25ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಲು ಗೆಲ್ಲುತ್ತಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ದೇಶಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆಶೀರ್ವದಿಸಿ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಮತದಾರರು ಈಗ ಬುದ್ಧಿವಂತರಾಗಿದ್ದಾರೆ. ಕರ್ನಾಟಕದಲ್ಲಿ ಭಾಗ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಿವೆ. ಎಲ್ಲ ಸಂದರ್ಭಗಳಲ್ಲಿ ಜನತೆಯ ಕಷ್ಟಕ್ಕೆ ನಿಲ್ಲುವ ಕಾಂಗ್ರೆಸ್ ನಿಮ್ಮೆಲ್ಲರ ಆಯ್ಕೆಯಾಗಲಿ. ನಿಮ್ಮ ಮನೆಗೆ ಒಂದು ಲಕ್ಷ ತಂದು ಕೊಡುವ ಮಹಾಲಕ್ಷ್ಮೀ ಬರುತ್ತಾಳೆ. ರೈತರ ಸಾಲ ಮನ್ನಾ ನಮ್ಮ ಘೋಷಣೆ. ಅಲ್ಲದೇ ಪ್ರತಿನಿತ್ಯ ₹400 ಕೂಲಿಯೊಂದಿಗೆ ಕಾರ್ಮಿಕರಿಗೆ ತಮ್ಮ ತಮ್ಮ ಊರಲ್ಲೇ ಕೆಲಸ ನೀಡುತ್ತೇವೆ. ಈಗ ನಿಮ್ಮ ಆಯ್ಕೆ ಕಾಂಗ್ರೆಸ್ ಮಾತ್ರ ಆಗಿರಲಿ. ಆರೋಗ್ಯ ಭಾರತ ನಮ್ಮ ಧ್ಯೇಯ. ಪ್ರತಿ ಕುಟುಂಬಕ್ಕೆ ₹25 ಲಕ್ಷ ಆರೋಗ್ಯ ವಿಮೆ ನಮ್ಮ ನಿರ್ಣಯ ಎಂದರು.

ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರ ನೀಡಿರುವ ಯೋಜನೆಗಳು ಸಾಫಲ್ಯವಾಗಿರುವ ಬಗ್ಗೆ ಆ ತಾಲೂಕಿನ ಜನತೆ ಬಹಿರಂಗವಾಗಿ ಕಾಂಗ್ರೆಸ್ ಯೋಜನೆಗಳಿಗೆ ಧನ್ಯತೆ ಹೇಳುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಈ ಜಿಲ್ಲೆಗೆ ಏನೂ ಮಾಡದ ಬಸವರಾಜ ಬೊಮ್ಮಾಯಿ ಮತ್ತೆ ಲೋಕಸಭೆಗೆ ಹೋಗಲು ಹವಣಿಸುತ್ತಿದ್ದಾರೆ. ನಾನು ನಿಮ್ಮ ಸೇವಕನಾಗಿ ಈ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಷ್ಠೆ ಹೊಂದಿದ್ದೇನೆ. ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ಮಂಜಣ್ಣ ನೀಲಗುಂದ, ಯಾಸೀರಖಾನ ಪಠಾಣ, ಸಿದ್ದನಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಗೀತಾ ಪೂಜಾರ, ಫಯಾಜ ಲೋಹಾರ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ಖುರ್ಷಿದ ಅಹ್ಮದ ಹುಲ್ಲತ್ತಿ, ಮಹೇಶ ಪವಾಡಿ, ಶಂಸಿಯಾಬಾನು ಬಾಳೂರ, ಮಮತಾ ಆರೇಗೊಪ್ಪ, ಮಾರುತಿ ತಾಂದಲೆ, ದುದ್ದು ಅಕ್ಕಿವಳ್ಳಿ, ಇರ್ಫಾನ, ಜಾಫರ ಬಾಳೂರ, ಸಿಕಂದರ ವಾಲಿಕಾರ, ವಿನಯ ಬಂಕನಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು.

ರೋಡ್ ಶೋ

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಹಾನಗಲ್ಲ ಪಟ್ಟಣದ ಕಿತ್ತೂರು ಚೆನ್ನಮ್ಮ ರಸ್ತೆ ಮೂಲಕವಾಗಿ, ಕಂಚಗಾರ ಓಣಿ, ಸ್ಟೇಟ್ ಬ್ಯಾಂಕ್‌ ರಸ್ತೆ, ಮಹಾತ್ಮಾಗಾಂಧಿ ವೃತ್ತದಿಂದ ಹಳೆ ಬಸ್‌ ನಿಲ್ದಾಣದ ವರೆಗೆ ಸಾವಿರಾರು ಜನರ ನಡುವೆ ರೋಡ್ ಶೋ ನಡೆಯಿತು.