ಮನುಷ್ಯನಿಗೆ ಅರಿವಿನಿಂದ ಮುಕ್ತಿ ಸಿಗಲು ಸಾಧ್ಯ

| Published : Apr 20 2024, 01:00 AM IST / Updated: Apr 20 2024, 01:01 AM IST

ಸಾರಾಂಶ

ಯಮಕಮರಡಿ: ಪೃಕೃತಿ ವಿಕೋಪದಿಂದ ಇಂದು ಭಾರಿ ಬಿಸಿಲು ಸೇರಿದಂತೆ ನಿಸರ್ಗದಲ್ಲಿ ವಿವಿಧ ಬದಲಾವಣೆಗಳಾಗುತ್ತಿವೆ ಎಂದು ಚಿಕ್ಕಲದಿನ್ನಿಯ ಅದೃಶ್ಯಾನಂದ ಸ್ವಾಮೀಜಿ ಹೇಳಿದರು,

ಕನ್ನಡಪ್ರಭ ವಾರ್ತೆ ಯಮಕಮರಡಿ

ಪೃಕೃತಿ ವಿಕೋಪದಿಂದ ಇಂದು ಭಾರಿ ಬಿಸಿಲು ಸೇರಿದಂತೆ ನಿಸರ್ಗದಲ್ಲಿ ವಿವಿಧ ಬದಲಾವಣೆಗಳಾಗುತ್ತಿವೆ ಎಂದು ಚಿಕ್ಕಲದಿನ್ನಿಯ ಅದೃಶ್ಯಾನಂದ ಸ್ವಾಮೀಜಿ ಹೇಳಿದರು,

ಸಮೀಪದ ಶಹಾಬಂದರ ಗ್ರಾಮದ ಸದ್ಗುರು ಬಾಳಯ್ಯಜ್ಜನವರ 33ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಸೇವೆಗಾಗಿ ಅನಿಯಾಗಬೇಕು. ಅರಿವೇ ಗುರು ಎಂಬಂತೆ ಮನಿಷ್ಯನಿಗೆ ಅರಿವಿನಿಂದ ಮುಕ್ತಿ ಸಿಗಲು ಸಾಧ್ಯ. ಕಾರಣ ಮನುಷ್ಯ ಅರಿವಿನಿಂದ ಬದುಕಿದಾಗ ಶ್ರೇಷ್ಠನಾಗುತ್ತಾನೆ. ಆ ನಿಟ್ಟಿನಲ್ಲಿ ಅಜ್ಞಾನ ಕತ್ತಲನ್ನು ಕಳೆದು ಭಕ್ತರ ಬಾಳಿನಲ್ಲಿ ಬೆಳಕನ್ನು ಕರುಣಿಸುವ ಶಕ್ತಿ ಗುರುವಿಗಿದೆ ಎಂದರು.

ಶರಣರಾದ ಸದಾಶಿವ ಹಗೆದಾಳ, ಶರಣರಾದ ವಿಠ್ಠಲ, ಪರಸಪ್ಪ ನಂದನವಾಡ, ವಿನೊದ ಜಗಜಂಪಿ, ಬಸೀರ್‌ ಮುಲ್ಲಾ , ಸೇರಿದಂತೆ ಸುತ್ತಲಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

ಜಾತ್ರಾಮಹೋತ್ಸವ ಅಂಗವಾಗಿ ಕರ್ತೃಗದ್ದುಗೆಗೆ ವಿಶೇಷ ಪೂಜೆ, ಶ್ರೀಮಠದಲ್ಲಿ ವಚನಾಭೀಷೇಕ, ಭಜನಾ ಕಾರ್ಯಕ್ರಮ ನಡೆದವು.17ರಂದು ವಿಶೇಷ ಪ್ರವಚನ, ಮಹಾ ಪ್ರಸಾದ ಕಾರ್ಯಕ್ರಮ ಜರುಗಿದವು.