ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಆಯುರ್ವೇದ ವೈದ್ಯರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಬರೆದ ‘ಆಯುರ್ವೇದ - ಆಶಾವಾದ’ ಕೃತಿ ಲೋಕಾರ್ಪಣಾ ಸಮಾರಂಭ ಡಿ.25ರಂದು ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್‌ನಲ್ಲಿ ನಡೆಯಿತು.

ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಆಯುರ್ವೇದ ವೈದ್ಯರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಬರೆದ ‘ಆಯುರ್ವೇದ - ಆಶಾವಾದ’ ಕೃತಿ ಲೋಕಾರ್ಪಣಾ ಸಮಾರಂಭ ಡಿ.25ರಂದು ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್‌ನಲ್ಲಿ ನಡೆಯಿತು.

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಪ್ರಕಾಶನದಲ್ಲಿ ಪ್ರಕಟಗೊ೦ಡಿರುವ ಈ ಕೃತಿಯನ್ನು ರೋಟರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಹಾಗೂ ಶ್ರೀ ಗುರು ರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕ ಕಲ್ಲಮ ಡಾ. ಸೀತಾರಾಮ ಭಟ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳ, ಮಹಿಳೆಯರ, ವೃದ್ಧರ ವಿವಿಧ ಕಾಯಿಲೆಗಳ ಬಗ್ಗೆ ಆಯುರ್ವೇದ ಪರಿಹಾರ ಹಾಗೂ ಆರೋಗ್ಯ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವರಿಸುವ ಮಹೋನ್ನತ ಪುಸ್ತಕ ಇದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಈ ಕೃತಿಯು ಅತ್ಯಮೂಲ್ಯ ಕೊಡುಗೆಯಾಗಿದೆ ಎಂದರು

ಕಾಂಚನಮಾಲಾ ಸಿಂದೂರ ಮನೆ ದೀಪ ಪ್ರಜ್ವಲನೆ ನಡೆಸಿದರು. ನರಿಮೊಗರು ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ಅವಿನಾಶ್ ಕೊಡೆಂಕಿರಿ, ಪುರುಷರಕಟ್ಟೆ ಶ್ರೀಗುರು ಭಜನಾ ಮಂದಿರದ ಅಧ್ಯಕ್ಷ ಕೆ. ಪದ್ಮನಾಭ ಪ್ರಭು ಬೀರ್ನಹಿತ್ಲು, ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್ ಹೆಚ್. ಬಿ. ಶುಭಹಾರೈಸಿದರು. ಆರ್ಟ್ ಆಫ್ ಲಿವಿಂಗ್ ತರಬೇತುದಾರೆ ಶರಾವತಿ ರವಿನಾರಾಯಣ ಕೃತಿಕಾರರ ಪರಿಚಯ ಮಾಡಿದರು. ಕೃತಿಕಾರ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾರಾಯಣ ಬನ್ನಿಂತಾಯ ಸ್ವಾಗತಿಸಿದರು. ಡಾ . ಶ್ರುತಿ . ಎಂ . ಎಸ್ ವಂದಿಸಿದರು. ಶಿಕ್ಷಕ ತಾರಾನಾಥ್ ಸವಣೂರು ನಿರೂಪಿಸಿದರು.