ಸಾರಾಂಶ
- ನಿಂಚನ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ - - - ದಾವಣಗೆರೆ: ಮಕ್ಕಳಿಗೆ ಪಠ್ಯದ ಚೌಕಟ್ಟಿನೊಳಗೆ ವಿನೂತನ ನಾವಿನ್ಯತೆಗಳ ವಿಚಾರಗಳನ್ನು ಕಟ್ಟಿಕೊಡುವುದು ಕೂಡ ಪ್ರತಿಯೊಂದು ಶಾಲೆ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಹೇಳಿದರು.
ನಗರದ ನಿಟ್ಟುವಳ್ಳಿಯ ನಿಂಚನ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂಥ ವಿಶಾಲ ವ್ಯಾಪ್ತಿಯ ಕಲಿಕೆಯನ್ನು ವಸ್ತು ಪ್ರದರ್ಶನಗಳು, ಕಾರ್ಯಕ್ರಮಗಳು ಕಟ್ಟಿಕೊಡುತ್ತವೆ. ಅಷ್ಟೇ ಅಲ್ಲದೇ, ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸುವ ಮಕ್ಕಳಷ್ಟೇ ಅಲ್ಲ, ನೋಡುವಂತಹ ಮಕ್ಕಳಿಗೂ ಇದು ಕಲಿಕೆಯಾಗುತ್ತದೆ ಎಂದರು.ಕವಿ ಬೇಂದ್ರೆ ಹೇಳಿದಂತೆ ನಾವೆಲ್ಲರೂ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಿದ್ದು ಇತಿಹಾಸದ ಸತ್ಯ. ಆದರೆ, ಇಂದು ನಮ್ಮ ಭಾರತ ಮಾತೆ ಸ್ವತಂತ್ರಳಾಗಿದ್ದಾಳೆ. ಸ್ವತಂತ್ರ ಅಷ್ಟೇ ಸಾಲದು, ತಾಯಿ ಭಾರತ ಮಾತೆ ತಲೆಎತ್ತಿ ನಿಲ್ಲುವಂತೆ ಮಾಡಬೇಕು. ಅಂದರೆ ಇವತ್ತಿನ ಬಾಲ್ಯದ, ಭವಿಷ್ಯದ ಪ್ರಜೆಗಳನ್ನು ಸಮರ್ಥರಾಗಿ ಬೆಳೆಸುವಂತಹದ್ದು ಶಿಕ್ಷಣ, ಇಲಾಖೆ, ಶಾಲೆಗಳ, ಶಿಕ್ಷಕರ ಮತ್ತು ಸಮಾಜಮುಖಿ ಚಿಂತರಕ ಮೇಲಿದೆ ಎಂದು ಹೇಳಿದರು.
ಮಕ್ಕಳಲ್ಲಿ ವಿಚಾರ, ಆಲೋಚನಾ ಶಕ್ತಿ ಮತ್ತು ಅನುಷ್ಠಾನದ ಪ್ರೇರೇಪಣೆ ನೀಡುವ ಮೂಲಕ ಅವರು ಸಮರ್ಥವಾಗಿ ಬೆಳೆಯುವಂತಾಗಬೇಕು. ಆ ಮೂಲಕ ಸಮಾಜಮುಖಿ ಚಿಂತನೆ ಅಲ್ಲದೇ ಸಮಾಜದ ಆರೋಗ್ಯ ಕಾಯ್ದುಕೊಳ್ಳುವುದು ಮತ್ತು ರಾಷ್ಟ್ರದ ಪ್ರಗತಿ ನಿರೀಕ್ಷಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಉಪನ್ಯಾಸಕ ಡಾ. ಎಂ.ಆರ್. ಜಗದೀಶ, ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಸಂಪನ್ಮೂಲ ವ್ಯಕ್ತಿ ಆರ್.ಎಂ. ಭರತ್, ಶಾಲೆ ಅಧ್ಯಕ್ಷ ನಿಂಗಪ್ಪ, ಶೈಕ್ಷಣಿಕ ನಿರ್ದೇಶಕರಾದ ಡಾ. ಶೃತಿ ಇನಾಮ್ದಾರ್, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - - -30ಕೆಡಿವಿಜಿ38ಃ:ದಾವಣಗೆರೆಯ ನಿಟ್ಟುವಳ್ಳಿಯ ನಿಂಚನ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಡಾ.ಪುಷ್ಪಲತಾ ಉದ್ಘಾಟಿಸಿ ವೀಕ್ಷಣೆ ಮಾಡಿದರು.