ಇಲ್ಲಿನ ಸಾಲಿಗ್ರಾಮದ ಆಧ್ಯಾತ್ಮಿಕ ಕೇಂದ್ರ ಡಿವೈನ್ ಪಾರ್ಕಿನ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ 12 ವರ್ಷದ ಸಾಧನೆಗಳ ಕುರಿತ ಪುಸ್ತಕವನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಸಾಲಿಗ್ರಾಮದ ಆಧ್ಯಾತ್ಮಿಕ ಕೇಂದ್ರ ಡಿವೈನ್ ಪಾರ್ಕಿನ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ 12 ವರ್ಷದ ಸಾಧನೆಗಳ ಕುರಿತ ಪುಸ್ತಕವನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು.

ಡಿವೈನ್ ಪಾರ್ಕಿನ ಸಹಕೇಂದ್ರವಾಗಿರುವ, ಪ್ರಕೃತಿ ರಮಣೀಯತೆಯಿಂದ ಕೂಡಿರುವ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಂಡಿರುವ ಗಿಳಿಯಾರಿನ ಯೋಗಬನಕ್ಕೆ ಭೇಟಿ ನೀಡಿದ ಸಂಸದ ಕೋಟ ಗುರೂಜಿ ಎಂದು ಗೌರವದಿಂದ ಕರೆಯುತ್ತಿದ್ದ ಡಾ. ಚಂದ್ರಶೇಖರ ಉಡುಪರ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ 12 ವರ್ಷಗಳ ಸಾಧನೆಯ ಪುಸ್ತಕವನ್ನು ಹಸ್ತಾಂತರಿಸಿ, ಗುರುವಾರ ನರೇಂದ್ರ ಮೋದಿಯವರ ಜನ್ಮದಿನವಾಗಿರುವುದು ಯೋಗಬನದ ಭೇಟಿಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ, ತಮ್ಮಂತಹ ಸಜ್ಜನರ ಶುಭಹಾರೈಕೆಗಳು ಮೋದಿ ಆಡಳಿತಕ್ಕಿರಲಿ ಎಂದು ವಿನಂತಿಸಿದರು.

ಸಂಸದರೊಂದಿಗೆ ಕೋಟ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ಯೋಗೀಶ್, ಶೇಖರ್ ಮತ್ತು ಅಜಿತ್ ಹೆಗ್ಡೆ ಮುಂತಾದವರಿದ್ದರು.ಉಡುಪಿ ಜಿಲ್ಲೆಯ, ಸಾಲಿಗ್ರಾಮದ ಆಧ್ಯಾತ್ಮಿಕ ಕೇಂದ್ರ ಡಿವೈನ್ ಪಾರ್ಕ್ನ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ 12 ವರ್ಷದ ಸಾಧನೆಯ ಕುರಿತ ಪುಸ್ತಕವನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು.

ಉಡುಪಿ ಜಿಲ್ಲೆಯ, ಸಾಲಿಗ್ರಾಮದ ಆಧ್ಯಾತ್ಮಿಕ ಕೇಂದ್ರ ಡಿವೈನ್ ಪಾರ್ಕ್ 1970ರ ಆಸು ಪಾಸು ಡಾ. ಚಂದ್ರಶೇಖರ ಉಡುಪರ ಮೂಲಕ ಸ್ಥಾಪನೆಯಾಗಿದ್ದು, ವಿವೇಕಾನಂದರ ತತ್ವದಿಂದ ಪ್ರೇರಿತರಾದ ಉಡುಪರು ಸ್ವಾಮಿ ವಿವೇಕಾನಂದರ ಸಂದೇಶ ಬಿತ್ತುತ್ತಾ, ಡಿವೈನ್ ಪಾರ್ಕ್ ಕಟ್ಟಿದ್ದರು. ವ್ಯಕ್ತಿಯಲ್ಲಿರುವ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಜೀವನದಲ್ಲಿ ಯೋಗ, ಧ್ಯಾನದ ಮೂಲಕ ಶಾಂತಿ ಮತ್ತು ಆನಂದದ ಬದುಕು ಕಟ್ಟಿಕೊಳ್ಳಲು ಡಿವೈನ್ ಪಾರ್ಕ್ ಮನುಕುಲಕ್ಕೆ ತೆರೆದುಕೊಂಡಿದೆ.

ಡಿವೈನ್ ಪಾರ್ಕ್ನ ಸಹಕೇಂದ್ರವಾಗಿರುವ, ಪ್ರಕೃತಿ ರಮಣೀಯತೆಯಿಂದ ಕೂಡಿರುವ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಂಡಿರುವ ಗಿಳಿಯಾರಿನ ಯೋಗಬನಕ್ಕೆ ಭೇಟಿ ನೀಡಿದ ಸಂಸದ ಕೋಟ ಗುರೂಜಿ ಎಂದು ಗೌರವದಿಂದ ಕರೆಯುತ್ತಿದ್ದ ಡಾ. ಚಂದ್ರಶೇಖರ ಉಡುಪರ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ 12 ವರ್ಷದ ಸಾಧನೆಯ ಪುಸ್ತಕವನ್ನು ಹಸ್ತಾಂತರಿಸಿ, ಗುರುವಾರ ನರೇಂದ್ರ ಮೋದಿಯವರ ಜನ್ಮದಿನವಾಗಿರುವುದು ಯೋಗಬನದ ಭೇಟಿಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ, ತಮ್ಮಂತಹ ಸಜ್ಜನರ ಶುಭಹಾರೈಕೆಗಳು ಮೋದಿ ಆಡಳಿತಕ್ಕಿರಲಿ ಎಂದು ವಿನಂತಿಸಿದರು.

ಸಂಸದರೊಂದಿಗೆ ಕೋಟ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ಯೋಗೀಶ್, ಶೇಖರ್ ಮತ್ತು ಅಜಿತ್ ಹೆಗ್ಡೆ ಮುಂತಾದವರಿದ್ದರು.