‘ಮಣಿಪಾಲ ಆಸ್ಪತ್ರೆಯ ಕೋವಿಡ್‌ ಬಿಕ್ಕಟ್ಟಿನ ನಿರ್ವಹಣೆಯ ಒಳನೋಟಗಳು’ ಪುಸ್ತಕ ಬಿಡುಗಡೆ

| Published : Nov 19 2024, 12:49 AM IST

‘ಮಣಿಪಾಲ ಆಸ್ಪತ್ರೆಯ ಕೋವಿಡ್‌ ಬಿಕ್ಕಟ್ಟಿನ ನಿರ್ವಹಣೆಯ ಒಳನೋಟಗಳು’ ಪುಸ್ತಕ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವತಿಯಿಂದ ಕಸ್ತೂರ್ಬಾ ಆಸ್ಪತ್ರೆಗಳ ಕಾರ್ಯಾಚರಣೆಗಳ ಸಹನಿರ್ದೇಶಕ ಜಿಬು ಥಾಮಸ್ ಬರೆದ ‘ಭೋದನಾ ಆಸ್ಪತ್ರೆಯಲ್ಲಿ ಕೋವಿಡ್-19 ಬಿಕ್ಕಟ್ಟಿನ ನಿರ್ವಹಹಣೆಯ ಒಳನೋಟಗಳು’ ಎಂಬ ಪುಸ್ತಕವನ್ನು ಹೊರರತಲಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆಯಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂಯುಪಿ) ವತಿಯಿಂದ ಕಸ್ತೂರ್ಬಾ ಆಸ್ಪತ್ರೆಗಳ ಕಾರ್ಯಾಚರಣೆಗಳ ಸಹನಿರ್ದೇಶಕ ಜಿಬು ಥಾಮಸ್ ಬರೆದ ‘ಭೋದನಾ ಆಸ್ಪತ್ರೆಯಲ್ಲಿ ಕೋವಿಡ್-19 ಬಿಕ್ಕಟ್ಟಿನ ನಿರ್ವಹಹಣೆಯ ಒಳನೋಟಗಳು’ ಎಂಬ ಪುಸ್ತಕವನ್ನು ಹೊರರತಲಾಗಿದೆ.ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಪುಸ್ತಕವನ್ನು ಬಿಡುಗಡೆ ಮಾಡಿ, ಕಸ್ತೂರ್ಬಾ ಆಸ್ಪತ್ರೆಯು ಕೋವಿಡ್‌ನ ಮೊದಲ ಪ್ರಕರಣದಿಂದಲೂ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಾದರಿಯಾಯಿತು ಎಂದು ಹೇಳಿದರು.ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆರೋಗ್ಯ ವೃತ್ತಿಪರರು ಮತ್ತು ಆಡಳಿತ ಸಿಬ್ಬಂದಿ ತೋರಿಸಿದ ಸಮರ್ಪಣೆಯನ್ನು ಶ್ಲಾಘಿಸಿದರು.ಲೇಖಕ ಜಿಬು ಥಾಮಸ್ ಮಾತನಾಡಿದರು. ಎಂಯುಪಿ ಮುಖ್ಯ ಸಂಪಾದಕ ಡಾ. ಶ್ರೀನಿವಾಸ ಆಚಾರ್ಯ ಸ್ವಾಗತಿಸಿದರು. ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ. ಶರತ್ ಕುಮಾರ್ ರಾವ್, ತಂತ್ರಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಕುಲಸಚಿವ ಡಾ.ಪಿ. ಗಿರಿಧರ್ ಕಿಣಿ, ಮಾಹೆ ಮುಖ್ಯ ನಿರ್ವಾಹಕ ಅಧಿಕಾರಿ ಡಾ. ರವಿರಾಜ ಎನ್. ಎಸ್., ಬೋಧನಾ ಆಸ್ಪತ್ರೆಗಳ ಸಿಓಓ ಡಾ.ಆನಂದ್ ವೇಣುಗೋಪಾಲ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಆಡಳಿತ ಸಲಹೆಗಾರ ಸಿ.ಜಿ. ಮುತ್ತಣ, ಮಣಿಪಾಲ ಕೆಎಂಸಿ ಡಾ.ಪದ್ಮರಾಜ್ ಹೆಗ್ಡೆ, ಮಂಗಳೂರು ಕೆಎಂಸಿ ಡೀನ್ ಡಾ. ಬಿ. ಉನ್ನಿಕೃಷ್ಣನ್, ಮಾಧ್ಯಮ ಮತ್ತು ಸಂವಹನ ವಿಭಾಗದ ಉಪ ನಿರ್ದೇಶಕ ಸಚಿನ್ ಕಾರಂತ್, ಅಂಗ ರಚನಾಶಾಸ್ತ್ರ ವಿಭಾಗ ಸಂಯೋಜಕಿ ಡಾ.ಬಿನ್ಸಿ ಎಂ. ಜಾರ್ಜ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.