ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬುಕ್‌ಸ್ಟಾಲ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಪಟ್ಟಣದ ರಾಜಶ್ರೀ ಚಿತ್ರಮಂದಿರದ ಎದುರಿನ ಯುವರಾಜ್ ಬುಕ್‌ಸ್ಟಾಲ್ ಅಂಗಡಿಯಲ್ಲಿ ನಡೆದಿದೆ.
ಶಿಗ್ಗಾಂವಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬುಕ್‌ಸ್ಟಾಲ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಪಟ್ಟಣದ ರಾಜಶ್ರೀ ಚಿತ್ರಮಂದಿರದ ಎದುರಿನ ಯುವರಾಜ್ ಬುಕ್‌ಸ್ಟಾಲ್ ಅಂಗಡಿಯಲ್ಲಿ ನಡೆದಿದೆ.ಪಟ್ಟಣದ ನಿವಾಸಿ ಯುವರಾಜ ಕೆ.ಎಚ್. ಎಂಬುವವರಿಗೆ ಸೇರಿದ ಪುಸ್ತಕ ಅಂಗಡಿ ಎಂದು ತಿಳಿದು ಬಂದಿದೆ. ರಾತ್ರಿ ೧ ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ೪ ಗಂಟೆಗೆ ಅಂಗಡಿಗಳಲ್ಲಿ ಹೊಗೆಯಾಡುತ್ತಿರುವುದನ್ನು ಕಂಡ ಯಾರೋ ಸ್ಥಳೀಯರು ಅಗ್ನಿ ಶಾಮಕದಳ ಠಾಣೆಗೆ ಪೋನ್ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಷ್ಟೋತ್ತಿಗಾಗಲೇ ಅಂಗಡಿಯಲ್ಲಿರುವ ಪ್ರಿಂಟರ್, ಲ್ಯಾಪಟಾಪ್, ಝರಾಕ್ಸ್ ಮಷಿನ್, ಬೆಲೆ ಬಾಳುವ ಬುಕ್‌ಗಳು ಶಾಲಾ ಮಕ್ಕಳ ಪುಸ್ತಗಳು ಸೇರಿದಂತೆ ವಿದ್ಯಾರ್ಥಿಗಳ ಪಠ್ಯದ ಸಲಕರಣೆಗಳು ಅಂಗಡಿಯಲ್ಲಿನ ಫರ್ನಿಚರ್ಸ್, ಸ್ಟೇಷನರಿ ವಸ್ತುಗಳು ಸಂಪೂರ್ಣ ಸುಟ್ಟು ಕರಲಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಅಂದಾಜು ೧೦ ಲಕ್ಷಕ್ಕೂ ಹೆಚ್ಚು ವಸ್ತುಗಳು ಸುಟ್ಟಿವೆ ಎಂದು ಅಂದಾಜಿಸಲಾಗಿದೆ. ಪರಿಹಾರಕ್ಕಾಗಿ ಸ್ಥಳೀಯರು ಅಗ್ರಹಿಸಿದ್ದಾರೆ.