ಸಾರಾಂಶ
ನಗರದಿಂದ ದೊಂಬರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದಲ್ಲಿ ಹೊಸ ಬಡಾವಣೆಗಳಿಗೆ ಮೂಲಭೂತ ಸವಲತ್ತುಗಳನ್ನುಒದಗಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಗಡಿ ವಿಸ್ತರಣೆ ಗುರುತಿಸಿರುವ ವರದಿಯನ್ನು ಅನುಮೋದನೆಗೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಸೋಮವಾರ ಪಟ್ಟಣದ ವೆಂಕಟೇಶ್ವರ ನಗರದಿಂದ ದೊಂಬರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪುರಸಭಾ ಸದಸ್ಯನಾಗಿದ್ದ ನಾನು ಸಮಸ್ಯೆಗಳ ಅರಿವಿನಿಂದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. 4 ಭಾರಿ ಪುರಸಭೆ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ಅನುಭವ ತೆಗೆದು ಕೊಂಡು ಪಟ್ಟಣದ ಅಭಿವೃದ್ದಿ ಹಿನ್ನಲೆಯಲ್ಲಿ ಕಠಿಣ ನಿರ್ಧಾರ ತೆಗೆದು ಕೊಂಡು ವೇದಾ ಪಾರ್ಕ್, ಕಾರಂಜಿ ಲೋಕಾರ್ಪಣೆ, ರಸ್ತೆ ಅಗಲೀಕರಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಚರಂಡಿ ನಿರ್ಮಾಣ ಕೂಡ ಮಾಡಲಾಗುತ್ತಿದೆ ಎಂದರು.ಅಲ್ಲದೆ ಇದೀಗ ಈ ಭಾಗದಲ್ಲಿ ಶ್ರೀನಿವಾಸ್ ಅವರ ಒತ್ತಾಯದ ಮೇರೆಗೆ 350 ಮೀ. ಮತ್ತು ಉಳಿದ 1300 ಮೀ ರಸ್ತೆಯನ್ನು ಮಾಡುತ್ತೇವೆ. ಆನಂತರ ಡ್ರೈನೇಜ್ ನಿರ್ಮಾಣ ಕೂಡ ಮಾಡಲಾಗುವುದು ಎಂದರು.
ಬಿಜಿಎಸ್ ಕಾಲೇಜು ಹಿಂಭಾಗ, ಮಂಗಾರಮ್ಮ ಬಡಾವಣೆಗಳ ಮೂಲಭೂತ ಸವಲತ್ತಿಗೆ ₹50 ಲಕ್ಷ, ಉಪೇಂದ್ರ ಬಡಾವಣೆಗೆ ₹50 ಲಕ್ಷ ನೀಡುವ ಮೂಲಕ ನಿರಂತರ ಸದಸ್ಯರ ಸಂಪರ್ಕದಿಂದ ಎಲ್ಲ ವಾರ್ಡುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ 2013ರಲ್ಲಿದ್ದ ನೀರಿನ ಸಮಸ್ಯೆ ಇದೀಗ ಭದ್ರಾ ನೀರಿನಿಂದ ನಿವಾರಣೆ ಆಗಿದೆ. ಈ ಭಾಗದ ನೀರಿನ ಸಮರ್ಪಕ ವಿತರಣೆಗೆ ನಗರೋತ್ಥಾನ ಯೋಜನೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣವಾಗುತ್ತಿದೆ ಎಂದರು.ಅಮೃತ್ ಯೋಜನೆಯಲ್ಲಿ ಹೊಸ ಪೈಪ್ ಲೈನ್ ಅಳವಡಿಕೆಗೆ ₹45 ಕೋಟಿ, ಬೀರೂರಿಗೆ ₹26 ಕೋಟಿ ಬಿಡುಗಡೆದೆ ಆಗಿದೆ ಕೆಲಸ ಪ್ರಗತಿಯಲ್ಲಿದೆ ಎಂದರು.
ಮುಖ್ಯವಾಗಿ ಪಟ್ಟಣದ ಯುಜಿಡಿ ನಿರ್ಮಾಣಕ್ಕೆ ₹160 ಕೋಟಿ ಅನುದಾನದಲ್ಲಿ ಈಗಾಗಾಲೇ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ₹35ಕೋಟಿ ಬಿಡುಗಡೆ ಮಾಡಿಸಿದ್ದು ಕೆಲಸ ಆರಂಭವಾಗಲಿದೆ. ಉಳಿದ ₹135 ಕೋಟಿ ಬರಲಿದೆ. ವೆಂಕಟೇಶ್ವರ ನಗರದ ಅಭಿವೃದ್ಧಿಗೆ ಭಂಡಾರಿ ಶ್ರೀನಿವಾಸ್ ಶ್ರಮವನ್ನು ಎಷ್ಟು ಹೊಗಳಿದರೂ ಸಾಲದು ಎಂದರು.ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, 1996 ರಿಂದ 8ನೇ ವಾರ್ಡಿನ ಸದಸ್ಯನಾಗಿ ಆಯ್ಕೆಯಾಗಿದ್ದು ಮಾಜಿ ಶಾಸಕ ಕೆಎಂಕೆ ಯಿಂದ ಹಿಡಿದು ಬೆಳ್ಳಿಪ್ರಕಾಶ್, ವೈ.ಎಸ್.ವಿ ದತ್ತ ಇದೀಗ ಕೆ.ಎಸ್.ಆನಂದ್ ಅವರ ತನಕ ಚರ್ಚಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.
ಮೂಲಭೂತ ಸೌಕರ್ಯ ಕಲ್ಪಿಸುವುದು ಆಯಾಯ ವಾರ್ಡಿನ ಜನಪ್ರತಿನಿಧಿಗಳ ಕರ್ತವ್ಯ. ಪುರಸಭೆಗೆ ಬರುವ ಅನುದಾನದಲ್ಲಿ ಎಲ್ಲ ವಾರ್ಡುಗಳಿಗೆ ತಾರತಮ್ಯ ಇಲ್ಲದೆ ಹಂಚಿಕೆ ಮಾಡುತ್ತಿದ್ದು, ಅಗತ್ಯ ಕೆಲಸಗಳನ್ನು ಜನರಿಗೆ ತೊಂದರೆ ಆಗದಂತೆ ನೋಡಿ ಕೊಂಡಿರುವೆ. ನನ್ನದೆ ವಾರ್ಡ್ ವೆಂಕಟೇಶ್ವರನಗರ ಪಟ್ಟಣದಲ್ಲಿಯೇ ವೇಗವಾಗಿ ಬೆಳೆಯುತ್ತಿದ್ದು ಹರುವನಹಳ್ಳಿ, ದೊಂಬರಹಳ್ಳಿ ತನಕ ಸೇರುತ್ತಿದೆ. ಪುರಸಭೆ ವ್ಯಾಪ್ತಿ ಮೀರಿ ಮನೆ ಕಟ್ಟಿಕೊಂಡಿರುವವರನ್ನು ಕಡೆಗಣಿಸದೆ ಶಾಸಕರೊಂದಿಗೆ ಚರ್ಚಿಸಿ ರಸ್ತೆ, ಚರಂಡಿ ಚಿಕ್ಕ ಸೇತುವೆಗಳ ನಿರ್ಮಾಣಕ್ಕೆ ಶಾಸಕರು ₹1ಕೋಟಿ ಅನುದಾನ ನೀಡಿದ್ದು ನಿವಾಸಿಗರ ಪರವಾಗಿ ಅವರನ್ನು ಅಭಿನಂದಿ ಸುತ್ತೇವೆ ಎಂದರು.ನಮ್ಮ ಅಭಿವೃದ್ಧಿ ಚಿಂತನೆ ಸಾರ್ವತ್ರಿಕವಾಗಿರುತ್ತದೆ. ಎಲ್ಲಿಯೂ ಸ್ವಾರ್ಥಕ್ಕೆ ಅಧಿಕಾರ ಬಳಸಿಕೊಳ್ಳದೆ ಕಾರ್ಯನಿರ್ವಹಿಸಿದ್ದೇನೆ. ಶಾಸಕರು ಸಾಕಷ್ಟು ಅನುದಾನ ನೀಡಿದ್ದು ಟ್ಯಾಂಕ್ ನಿರ್ಮಾಣಕ್ಕೆ ₹2ಕೋಟಿ, ಅಮೃತ್ ಯೋಜನೆಗೆ ₹75 ಕೋಟಿ ಯುಜಿಡಿಗೆ ₹165 ಕೋಟಿ ಹಣ ಮಂಜೂರು ಮಾಡಿಸಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಮಂಜುನಾಥ್, ಮುಖಂಡರಾದ ಎನ್. ಎಚ್. ನಂಜುಂಡಸ್ವಾಮಿ, ತಿಮ್ಮಯ್ಯ, ಜಗದೀಶ್, ಸಂತೋಷ್, ಜಗದೀಶ್, ನಂಜುಂಡಸ್ವಾಮಿ, ನಿವೃತ್ತ ಉಪನ್ಯಾಸಕ ರುದ್ರಯ್ಯ, ಪ್ರಸನ್ನ, ಶಿಕ್ಷಕ ಅರೇಹಳ್ಳಿ ಮಲ್ಲಿಕಾರ್ಜುನ್, ಪುರಸಭೆ ಸಿಬ್ಬಂದಿ ತಿಮ್ಮಯ್ಯ, ಪ್ರೇಮ್ ಸೇರಿದಂತೆ ಆ ಭಾಗದ ನಿವಾಸಿಗಳು ಮತ್ತಿತರರು ಇದ್ದರು.
23ಕೆೆಕೆಡಿಯು1 ಕಡೂರು ಪಟ್ಟಣದ 8ನೇ ವಾರ್ಡಿನ ವೆಂಕಟೇಶ್ವರ ಬಡಾವಣೆೆಯಲ್ಲಿ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು. ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ , ಮುಖ್ಯಾಧಿಕಾರಿ ಕೆ.ಎಸ್, ಮಂಜುನಾಥ್ ಮತ್ತಿತರರು ಹಾಜರಿದ್ದರು.