ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ ಬೋರ್ ವೆಲ್ ಸ್ವಾಮಿ ಆಯ್ಕೆ

| Published : Jan 27 2024, 01:16 AM IST

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ ಬೋರ್ ವೆಲ್ ಸ್ವಾಮಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ 1ರ ಭಾಗದಲ್ಲಿ 22 ಮಂದಿ ಮತದಾರರಿದ್ದು ಇವರಲ್ಲಿ 17ಮತಗಳ ಮಾಡಾಳು ಮಲ್ಲಿಕಾರ್ಜುನ್ ಸ್ವಾಭಿಮಾನಿ ಬಳಗದ ಬೆಂಬಲಿತ 17 ಮಂದಿ ಸದಸ್ಯರು ಬೋರ್ ವೆಲ್ ಸ್ವಾಮಿಗೆ ಮತನೀಡಿ ಜಯಶೀಲರಾಗಿ ಮಾಡಿದ್ದಾರೆ. ಇವರ ಪ್ರತಿಸ್ಪರ್ಧಿ ಗೊಪ್ಪೇನಹಳ್ಳಿ ಗ್ರಾಮದ ದೀಪಕ್ ಪಟೇಲ್ 5 ಮತಗಳ ಪಡೆದು ಪರಾಭವಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಭಾಗ-1ರ ಪ್ರತಿನಿಧಿಯಾಗಿ ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಮಲ್ಲಿಕಾರ್ಜುನ್ ಸ್ವಾಭಿಮಾನಿ ಬಳಗದ ಬೆಂಬಲಿತ ಲಿಂಗದಹಳ್ಳಿ ಬೋರ್ ವೆಲ್ ಸ್ವಾಮಿ ಅಧಿಕ ಮತಗಳ ಪಡೆದು ಆಯ್ಕೆಯಾಗಿದ್ದಾರೆ.

ತಾಲೂಕಿನ 1ರ ಭಾಗದಲ್ಲಿ 22 ಮಂದಿ ಮತದಾರರಿದ್ದು ಇವರಲ್ಲಿ 17ಮತಗಳ ಮಾಡಾಳು ಮಲ್ಲಿಕಾರ್ಜುನ್ ಸ್ವಾಭಿಮಾನಿ ಬಳಗದ ಬೆಂಬಲಿತ 17 ಮಂದಿ ಸದಸ್ಯರು ಬೋರ್ ವೆಲ್ ಸ್ವಾಮಿಗೆ ಮತನೀಡಿ ಜಯಶೀಲರಾಗಿ ಮಾಡಿದ್ದಾರೆ. ಇವರ ಪ್ರತಿಸ್ಪರ್ಧಿ ಗೊಪ್ಪೇನಹಳ್ಳಿ ಗ್ರಾಮದ ದೀಪಕ್ ಪಟೇಲ್ 5 ಮತಗಳ ಪಡೆದು ಪರಾಭವಗೊಂಡಿದ್ದಾರೆ. ಚುನಾಯಿತರಾದ ಬೋರ್ ವೆಲ್ ಸ್ವಾಮಿ ಪ್ರಸ್ತುತ ರಾಜ್ಯ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ. ಇವರಿಗೆ ಮತ ನೀಡಿದ 17ಮಂದಿ ಮತದಾರರು ಅಭಿನಂದಿಸಿದ್ದಾರೆ.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಶಂಸೆ:

ಲಿಂಗದಹಳ್ಳಿ ಬೋರ್ ವೆಲ್ ಸ್ವಾಮಿ ತಾಲೂಕಿನಲ್ಲಿದ್ದ 22ಮತಗಳಲ್ಲಿ 17ಮತಗಳ ಪಡೆದು ವಿಜೇತರಾಗಿರುವುದು ಸಂತಸ ತಂದಿದೆ. ಇವರ ಮೇಲೆ ತಾಲೂಕಿನ ಜನತೆ ಇಟ್ಟ ವಿಶ್ವಾಸದಿಂದ ವಿಜೇತರಾಗಿದ್ದಾರೆ. ಸ್ವಾಮಿ ನನ್ನ ಮತ್ತು ಮಾಡಾಳು ಮಲ್ಲಿಕಾರ್ಜುನ್ ಸ್ವಾಭಿಮಾನಿ ಬಳಗದ ಕಟ್ಟಾ ಬೆಂಬಲಿಗ. ಇವರು ಪ್ರಸ್ತುತ ರಾಜ್ಯ ಸಹಕಾರ ಬ್ಯಾಂಕಿನ ನಿರ್ದೇಶಕರು. ಇವರಿಗೆ ಮತ ನೀಡಿದ ಸ್ವಾಭಿಮಾನಿ ಬಳಗದ ಮತದಾರರ ಅಭಿನಂದಿಸಿದ್ದಾರೆ.